ಹೊಸಪೇಟೆ: ಸಮುದಾಯ ಆರೋಗ್ಯ ಅಧಿಕಾರಿಗಳು (CHO) ಮುಷ್ಕರ ವೇಳೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ PHCO ಮತ್ತು HIO ಹುದ್ದೆಗಳನ್ನು ರದ್ದುಪಡಿಸಿ ಎಂದು ಹಾಗೂ ಖಾಯಂ ನೌಕರರು ಏನೂ ಕೆಲಸ ಮಾಡುತ್ತಿಲ್ಲ ಏನೂ ಕಲಿಯದೇ ಏನೂ ವಿದ್ಯಾರ್ಹತೆ ಇಲ್ಲದೇ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿ ಕಲ್ಯಾಣ ಕರ್ನಾಟಕ ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಅಧಿಕಾರಿಗಳ, ಆರೋಗ್ಯ ನಿರೀಕ್ಷಣಾಧಿಕಾರಿಗಳ ವೃಂದದ ನೌಕರರ ಕೇಂದ್ರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ಡಿಎಚ್ಒ ಕಚೇರಿ ಮುಂದೆ ಧರಣಿ ನಡೆಸಿದರು. ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಲಿಂಗರಾಜು ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಕಲಬುರ್ಗಿ ವಿಭಾಗೀಯ ಕಾರ್ಯಾಧ್ಯಕ್ಷ ಎಂ ಧರ್ಮನಗೌಡ ಮಾತನಾಡಿ, ಬೆಂಗಳೂರಿನಲ್ಲಿ ಮುಷ್ಕರ ನಡೆಸುತ್ತಿರುವ ಕೆಲವು ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಟಿಯುಸಿ ನ ಗೌರವಾಧ್ಯಕ್ಷರು ಸಾಮಾಜಿಕ ಜಾಲತಾಣದಲ್ಲಿ ಪಿಎಚ್ಸಿಇ ಮತ್ತು ಎಚ್ಐಒ ಹುದ್ದೆಗಳನ್ನು ರದ್ದು ಪಡಿಸಿ ಎಂದು ಹಾಗೂ ಖಾಯಂ ನೌಕರರು ಏನೂ ಕೆಲಸ ಮಾಡುತ್ತಿಲ್ಲ. ಏನೂ ಕಲಿಯದೇ, ಏನೂ ವಿದ್ಯಾರ್ಹತೆ ಇಲ್ಲದೇ ಕೆಲಸ ಮಾಡುತ್ತಿದ್ದಾರೆ ಹಾಗೂ ಹೊಸದಾಗಿ ಪಿಎಚ್ಸಿಒ/ಎಚ್ಐಒ ಹುದ್ದೆ ಗಳನ್ನು ಕ್ರೀಯಟ್ ಮಾಡಿದ್ದಾರೆ ಎಂದು ಹೇಳಿಕೆ ನೀಡಿರುವುದನ್ನು ಸಂಘದಿಂದ ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಇದನ್ನೂ ಓದಿ: Hospet News: ಬೆಳೆ ನಷ್ಟ, ಕುಡಿಯುವ ನೀರು ಹಾಗೂ ವಿಬಿಜಿ ರಾಮ್ ಜಿ ಕಾಮಗಾರಿ ಕುರಿತು ರೈತರು, ಕಾರ್ಮಿಕರಿಂದ ಮಾಹಿತಿ ಸಂಗ್ರಹ
ಇಲಾಖೆ ಆರಂಭವಾದಾಗಿನಿಂದ PHCO/HIO ಹುದ್ದೆಗಳು ಇವೆ. ಭಾರತ ದೇಶಾದ್ಯಂತ ನಮ್ಮ ANM (ಜನಾರೋಗ್ಯ) ವೃಂದ ಇನ್ನು ಹಲವಾರು ದಶಕಗಳ ಸಾರ್ವಜವಿಕ ಆರೋಗ್ಯ ಸೇವೆಗಳ ಕಾರ್ಯ ಕ್ರಮಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮನೆ ಬಾಗಿಲಿಗೆ ಹೋಗಿ 24/7 ಉಪಕೇಂದ್ರ ಕಟ್ಟಡಗಳಲ್ಲಿ ವಾಸವಿದ್ದು ಗುಣಾತ್ಮಕ ಸೇವೆಗಳನ್ನು ನೀಡುತ್ತಿದ್ದೇವೆ ಪೊಲಿಯೋ ERADICATION. ತಾಯಂದಿರ ಮರಣ ಪ್ರಮಾಣ ಹಾಗೂ ಶಿಶು ಮರಣ (IMR AND MR ಪ್ರಮಾಣ ಕಡಿಮೆ ಮಾಡು ತ್ತಿದ್ದೇವೆ ಎಂದು ಹೇಳಿದರು.
ಈಗ ಪ್ರಸ್ತುತ ಶೇ. 57 ರಷ್ಟು ನಮ್ಮ ಹುದ್ದೆಗಳು ಖಾಲಿ ಇದ್ದರೂ ಸ್ಟೈರ್ಯ ಕಳೆದುಕೊಳ್ಳದೇ ಸೇವೆ ನೀಡುತ್ತಿರುವುದು ನಮ್ಮ ಕರ್ತವ್ಯ ನಿಷ್ಠೆಗೆ ಹಿಡಿದ ಕೈಗನ್ನಡಿ. ಒಬ್ಬ PHCO ಹಾಗೂ HIO ಪ್ರಸ್ತುತ ಕನಿಷ್ಠ 3 ರಿಂದ 4 ಪ್ರಭಾರ ಮಾಡುತ್ತಿದ್ದೇವೆ ಯಾವುದೇ ಕೆಲಸ ಮಾಡಿದ ಹಾಗೆ ಬಿಂಬಿಸುವ ಅಗತ್ಯತೆ ನಮಗೆ ಇಲ್ಲ. ಕೋವಿಡ್ ಸಮಯದಲ್ಲಿ ಕೋಟಿಗಟ್ಟಲೇ VACCINE (ಆಗ ರಾಜ್ಯದಲ್ಲಿ ಕೇವಲ 6250 PHCO+ HIO ಜೋತೆ ಸೇರಿ ಸೇವೆ ನೀಡಿರುತ್ತಾರೆ) ಹಾಕಿದ್ದೇವೆ. ಜನರಿಗೆ ಸಮರ್ವಕ ಆರೋಗ್ಯ ಸೇವೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿ ಇದ್ದೇವೆ ಎಂದು ಸಂಘದ ಸದಸ್ಯರು ತಿಳಿಸಿದರು.
ಎಲ್ಲ ರೋಗಗಳನ್ನು ನಿಯಂತ್ರಣದಲ್ಲಿ ಇಡಲು ಪ್ರಮಾಣಿಕವಾಗಿ ಕರ್ತವ್ಯವನ್ನು ಜೊತೆಯಲ್ಲಿ ಪ್ರಭಾರ ಸೇವೆಗಳನ್ನು ಸಹಿತ ಶೇ. 100 ರಷ್ಟು ನೀಡುತ್ತಿದ್ದೇವೆ ಎಂದರು.
ಸಮುದಾಯ ಆರೋಗ್ಯ ಅಧಿಕಾರಿಗಳು NHM ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಯಾಗಿರುತ್ತಾರೆ. ನಾವು ಖಾಯಂ ನೌಕರರು ಎನ್ನುವ ವಿಷಯ ಮೊದಲೇ ಗೊತ್ತಿರಲಿಲ್ಲವೆ, ಮತ್ತೆ ಯಾಕೆ ಖಾಯಂ ನೌಕರರೊಂದಿಗೆ ಹೋಲಿಕೆ/ತುಲನೆ ಮಾಡುವುದು ಬೇಕಾಗಿಲ್ಲ. ಅಸಂಬದ್ಧ ಅವೈಜ್ಞಾನಿಕ, ಅವುಬುದ್ಧ ಅಸಂವಿಧಾನಿಕ ಪದಗಳ ಬಳಕೆ/ಹೇಳಿಕೆಗಳನ್ನು ನೀಡಿದರೆ ಸಹಿಸುವು ದಿಲ್ಲ ಎಂದು ಧರಣಿನಿರತರು ಎಚ್ಚರಿಸಿದರು.
ಪರಸ್ಪರ ಸಹಕಾರ, ಸೌಹಾರ್ದತೆ, ಸಮನ್ವಯತೆ ಗೌರವದಿಂದ ನಡೆದುಕೊಂಡರೆ ಒಳ್ಳೆಯದು. ಇಲ್ಲದಿದ್ದರೆ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಡಿಎಚ್ಒ ಲಿಂಗರಾಜು, ಈ ಬಗ್ಗೆ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲೆಯ ವಿವಿಧ ತಾಲೂಕು ಘಟಕದ ಅಧ್ಯಕ್ಷರಾದ ಮಂಜುಳಾ, ಎಚ್. ಶ್ರೀನಿವಾಸ ರೆಡ್ಡಿ, ಪ್ರಮೋದಿನಿ, ಸುನೀಲ್, ನಾಗರಾಜ್, ಎಲ್. ನಾರಾಯಣ, ಜಿಲ್ಲಾ ಉಪ ಆರೋಗ್ಯ ಶಿಕ್ಷಣ ಅಧಿಕಾರಿ ಎಂ.ಪಿ. ದೊಡ್ಡಮನಿ, ಸರಕಾರಿ ನೌಕರ ಸಂಘದ ಗೌರವ ಅಧ್ಯಕ್ಷ ರಾಜೀವ್ ಇತರರಿದ್ದರು.