ಹರಪನಹಳ್ಳಿ: ನಗರದ ಹೊರವಲಯದಲ್ಲಿರುವ ಗೋಸಾಯಿ ಗುಡ್ಡ ಮೇಲೆ ನೂತನವಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯ ಕಟ್ಟಡ ಸ್ಥಳಕ್ಕೆ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಆಡಳಿತಾತ್ಮಕ ನ್ಯಾಯಾಧೀಶರಾದ ಪ್ರದೀಪ್ ಸಿಂಗ್ ಯರೂರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಸುಪರ್ದಿನಲ್ಲಿ ನಡೆಯುತ್ತಿದ್ದು ಕಾಮಗಾರಿಗೆ ಸಂಬಂಧಿಸಿದಂತೆ ಇಲಾಖೆ ಇಂಜಿನಿಯರ್‌ಗಳ ಜತೆ ಕಟ್ಟಡ ಪೂರ್ಣಗೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ:Harapanahalli News: ಶಿಕ್ಷಕರು ರಾಷ್ಟ್ರದ ನಿರ್ಮಾಪಕರು ಇದ್ದಂತೆ : ಶ್ರೀ ವರಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳು
- ನಂತರ ನೂತನ ಕಟ್ಟಡದ ಸ್ಥಳಕ್ಕೆ ಧಾವಿಸಿದ ನ್ಯಾಯಾಧೀಶರು ನೂತನ ನ್ಯಾಯಾಲಯದ ಎಲ್ಲಾ ಕೊಠಡಿಗಳನ್ನು ಮತ್ತು ಎಲ್ಲಾ ಶೌಚಲಯದ ನೂತನ ಕಟ್ಟಡಗಳನ್ನು ಹಾಗೂ ಮೇಲ್ಚವಣ ಕಟ್ಟಡವನ್ನು ವಿಕ್ಷೀಸಿ ಬಳಿಕ ಲೋಕೊಪಯೋಗಿ ಇಲಾಖೆ ಅಧಿಕಾಗಳಾದ ಮಲ್ಲಿಕಾರ್ಜುನ್, ಸೇರಿದಂತೆ ಇತರೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು, ನೀವು ನಿಮ್ಮ ಮನೆಯನ್ನು ಇದೇ ರೀತಿ ಕಳಪೆ ಕಟ್ಟಿಸಿಕೊಳ್ಳುತ್ತೀರಾ, ಸರಕಾರದ ಹಣವನ್ನು ನೀವು ಬೇಕಾ ಬಿಟ್ಟಿ ಬಳಸಿಕೊಂಡು ನ್ಯಾಯಾಲಯದ ಕಟ್ಟಡವನ್ನು ಕಳಪೆ ಮಾಡಿರುತ್ತೀರಿ, ಕೂಡಲೇ ನೂತನ ನ್ಯಾಯಾಲಯದ ಕಟ್ಟಡವನ್ನು ಸರಿ ಪಡಿಸಬೇಕು ಇಲ್ಲವಾದರೆ ನಿಮ್ಮಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೋಳ್ಳಲಾಗುವುದು ಎಂದು ಲೋಕೊಪಯೋಗಿ ಇಲಾಖೆ ಅಧಿಕಾರಿಗೆ ತರಾಟೆಗೆ ತೆಗದುಕೊಂಡರು.