ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hospet News: ಅಂತರರಾಷ್ಟ್ರೀಯ ಸುರಕ್ಷಿತ ಗರ್ಭಪಾತ ಸೇವಾ ದಿನ ಹಾಗೂ ಸುರಕ್ಷಿತ ಸಂತಾನೋತ್ಪತ್ತಿ ಆರೋಗ್ಯದ ಜಾಗೃತಿ ಕಾರ್ಯಕ್ರಮ

ಅರ್ಹ ಹಾಗೂ ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿಯಿಂದ, ಸರ್ಕಾರಿ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಅಥವಾ ಆರೋಗ್ಯ ಕೇಂದ್ರಗಳಲ್ಲಿ ಕೈಗೊಳ್ಳುವ ಗರ್ಭಪಾತ ಪ್ರಕ್ರಿಯೆಯನ್ನು ಸುರಕ್ಷಿತ ಗರ್ಭಪಾತ ಎನ್ನಲಾಗುತ್ತದೆ. ಅನಧಿಕೃತ ವ್ಯಕ್ತಿಗಳಿಂದ ಅಥವಾ ನಕಲಿ ಗಿಡಮೂಲಿಕೆ, ಮಾತ್ರೆಗಳ ಮೂಲಕ ಗರ್ಭಪಾತ ಮಾಡಿಕೊಳ್ಳುವುದು ಗಂಭೀರ ಆರೋಗ್ಯ ಸಮಸ್ಯೆ ಹಾಗೂ ಜೀವಕ್ಕೆ ಅಪಾಯ ತರಬಹುದು

ಹೊಸಪೇಟೆ: ಅಂತರರಾಷ್ಟ್ರೀಯ ಸುರಕ್ಷಿತ ಗರ್ಭಪಾತ ಸೇವಾ ದಿನ ಹಾಗೂ ಸುರಕ್ಷಿತ ಸಂತಾನೋ ತ್ಪತ್ತಿ ಆರೋಗ್ಯದ ಜಾಗೃತಿ ಕಾರ್ಯಕ್ರಮ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅರ್ಹ ಹಾಗೂ ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿಯಿಂದ, ಸರ್ಕಾರಿ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಅಥವಾ ಆರೋಗ್ಯ ಕೇಂದ್ರಗಳಲ್ಲಿ ಕೈಗೊಳ್ಳುವ ಗರ್ಭಪಾತ ಪ್ರಕ್ರಿಯೆಯನ್ನು ಸುರಕ್ಷಿತ ಗರ್ಭಪಾತ ಎನ್ನಲಾಗುತ್ತದೆ. ಅನಧಿಕೃತ ವ್ಯಕ್ತಿಗಳಿಂದ ಅಥವಾ ನಕಲಿ ಗಿಡಮೂಲಿಕೆ, ಮಾತ್ರೆಗಳ ಮೂಲಕ ಗರ್ಭಪಾತ ಮಾಡಿಕೊಳ್ಳುವುದು ಗಂಭೀರ ಆರೋಗ್ಯ ಸಮಸ್ಯೆ ಹಾಗೂ ಜೀವಕ್ಕೆ ಅಪಾಯ ತರಬಹುದು ಎಂದರು.

ಭಾರತದಲ್ಲಿ ಗರ್ಭಪಾತ ವೈದ್ಯಕೀಯ ಸಮಪ್ತಿ ಕಾಯ್ದೆ (MTP Act) ಪ್ರಕಾರ ಗರ್ಭಪಾತವು ಕಾನೂನುಬದ್ಧ ಹಕ್ಕಾಗಿದೆ. ಅನಪೇಕ್ಷಿತ ಗರ್ಭಧಾರಣೆ, ತಾಯಿಯ ಅಥವಾ ಭ್ರೂಣದ ಆರೋಗ್ಯಕ್ಕೆ ಅಪಾಯವಿರುವಾಗ, ಹಾಗೂ ಅತ್ಯಾಚಾರದಂತಹ ಪ್ರಕರಣಗಳಲ್ಲಿ ಸುರಕ್ಷಿತವಾಗಿ ಗರ್ಭಪಾತ ಮಾಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ಮಾಹಿತಿ ನೀಡಲಾಯಿತು.

ಇದನ್ನೂ ಓದಿ: Hospet News: ಜಿಲ್ಲಾ ಉಪ ಕಾರಾಗೃಹದಲ್ಲಿ ಬಂಧಿಗಳಿಗೆ ತಂಬಾಕು ಮತ್ತು ಧೂಮಪಾನದ ದುಷ್ಪರಿಣಾಮ ಕುರಿತು ಅರಿವು ಮತ್ತು ಜಾಗೃತಿ ಕಾರ್ಯಕ್ರಮ

ಮಹಿಳೆಯ ಗೌಪ್ಯತೆಯನ್ನು ಕಾಪಾಡುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ಔಷಧಿಗಳ ಮೂಲಕ ಆರಂಭಿಕ ಹಂತದಲ್ಲಿ (ವೈದ್ಯರ ಸಲಹೆಯ ಮೇರೆಗೆ ಮಾತ್ರ) ಮಾತ್ರೆಗಳ ಮೂಲಕ ಗರ್ಭಪಾತ ಮಾಡುವುದು.

ಶಸ್ತ್ರಚಿಕಿತ್ಸಾ ವಿಧಾನ, ಅರ್ಹ ಗೈನಕಾಲಜಿಸ್ಟ್ (ಸ್ತ್ರೀರೋಗ ತಜ್ಞರು) ಮೂಲಕ ಆಸ್ಪತ್ರೆಗಳಲ್ಲಿ ಮಾಡಲಾಗುವ ಪ್ರಕ್ರಿಯೆ. ವೈದ್ಯರ ಚೀಟಿ ಅಥವಾ ಸಲಹೆ ಇಲ್ಲದೆ ಮೆಡಿಕಲ್ ಶಾಪ್‌ಗಳಲ್ಲಿ ಮಾತ್ರೆ ಪಡೆದು ಸೇವಿಸುವುದು ಅತ್ಯಂತ ಅಪಾಯಕಾರಿ. ಲಿಂಗ ಆಯ್ಕೆ ಗರ್ಭಪಾತ ಅಪರಾಧವಾಗಿದೆ. ಹೆಣ್ಣು ಭ್ರೂಣ ಹತ್ಯೆ (PCPNDT Act) ಭಾರತದಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಗರ್ಭಪಾತದ ಹಕ್ಕು ತಾಯಿಯ ಆರೋಗ್ಯ ಮತ್ತು ಸುರಕ್ಷತೆಗೆ ಮಾತ್ರ ಸೀಮಿತ ಎಂದು ವಿವರಿಸಲಾಯಿತು.

ಸರ್ಕಾರಿ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHC) ಸುರಕ್ಷಿತ ಮತ್ತು ಉಚಿತ, ಕಡಿಮೆ ವೆಚ್ಚದ ಸೇವೆಗಳು ಲಭ್ಯವಿರುತ್ತವೆ.

ಸುರಕ್ಷಿತ ಗರ್ಭನಿರೋಧಕ ಸಾಧನಗಳ ಬಳಕೆ ಮತ್ತು ಸುರಕ್ಷಿತ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ಪಡೆಯಲು ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರ ಅಥವಾ ಅಂಗನವಾಡಿ ಹಾಗೂ ಆಶಾ ಕಾರ್ಯ ಕರ್ತರನ್ನು ಸಂಪರ್ಕಿಸಬಹುದು ಎಂದು ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಅಶಾ ಕಾರ್ಯ ಕರ್ತರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿನಯ್, ನೂರು ಹಾಸಿಗೆ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗಂಗಾಧರ್ ಮೇಟಿ, ಜಿಲ್ಲಾ ಉಪ ಅರೋಗ್ಯ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾ ಅರೋಗ್ಯ ನಿರೀಕ್ಷಣಾಧಿಕಾರಿ ಮತ್ತು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಎಲ್ಲಾ ನರ್ಸಿಂಗ್ ಅಫೀಸರ್ ಇದ್ದರು.