ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hospet News: ಪೋಷಣ ಪಕ್ವಾಡ ಎಂಬುದು ಪ್ರತಿ ವರ್ಷ ಆಚರಿಸಲಾಗುವ 30 ದಿನಗಳ (ಪಕ್ಷದ) ರಾಷ್ಟ್ರೀಯ ಜಾಗೃತಿ ಅಭಿಯಾನವಾಗಿದೆ

ಮೊದಲ 1000 ದಿನಗಳ ಆರೈಕೆ, ಮಗುವಿನ ಗರ್ಭಾವಸ್ಥೆಯಿಂದ ಹಿಡಿದು 2 ವರ್ಷಗಳವರೆಗಿನ (ಮೊದಲ 1,000 ದಿನಗಳು) ಸೂಕ್ತ ಪೋಷಣೆ ಮತ್ತು ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವುದು. ಅಂಗನವಾಡಿ ಕೇಂದ್ರಗಳಲ್ಲಿ ಜಾಗೃತಿಮೂಡಿಸುವುದು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆ ಯರ ಮೂಲಕ ಸ್ಥಳೀಯವಾಗಿ ಲಭ್ಯವಿರುವ ಸಮತೋಲಿತ ಹಾಗೂ ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು

ಹೊಸಪೇಟೆ: ಪೋಷಣ ಪಕ್ವಾಡ ಎಂಬುದು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ 'ಪೋಷಣ್ ಅಭಿಯಾನ'ದ ಅಡಿಯಲ್ಲಿ ಪ್ರತಿ ವರ್ಷ ಆಚರಿಸಲಾಗುವ 30 ದಿನಗಳ (ಪಕ್ಷದ) ರಾಷ್ಟ್ರೀಯ ಜಾಗೃತಿ ಅಭಿಯಾನವಾಗಿದೆ ಎಂದು ಜಿಲ್ಲಾ ಅರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಧರ್ಮನಗೌಡ ತಿಳಿಸಿದರು.

ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಹದಿಹರೆಯದ ಹೆಣ್ಣುಮಕ್ಕಳು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆಯನ್ನು ತಡೆಗಟ್ಟುವುದು. ಸಮುದಾಯದ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ ಎಂದು ಹೇಳಿದರು.

ಸಾರ್ವಜನಿಕರಲ್ಲಿ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಅರಿವು ಮೂಡಿಸಿ 'ಜನ ಆಂದೋಲನ' ವನ್ನು ರೂಪಿಸುವುದು.

ಇದನ್ನೂ ಓದಿ: Hospet News: 'ನಾನು ಕರ್ನಾಟಕ ಆರಿಸಿಕೊಂಡಿಲ್ಲ, ಕನ್ನಡಾಂಬೆಯೇ ನನ್ನನ್ನು ಆರಿಸಿಕೊಂಡಿದ್ದಾರೆ': ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರತಿಪಾದನೆ

ಮೊದಲ 1000 ದಿನಗಳ ಆರೈಕೆ, ಮಗುವಿನ ಗರ್ಭಾವಸ್ಥೆಯಿಂದ ಹಿಡಿದು 2 ವರ್ಷಗಳವರೆಗಿನ (ಮೊದಲ 1,000 ದಿನಗಳು) ಸೂಕ್ತ ಪೋಷಣೆ ಮತ್ತು ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವುದು. ಅಂಗನವಾಡಿ ಕೇಂದ್ರಗಳಲ್ಲಿ ಜಾಗೃತಿ ಮೂಡಿಸುವುದು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆ ಯರ ಮೂಲಕ ಸ್ಥಳೀಯವಾಗಿ ಲಭ್ಯವಿರುವ ಸಮತೋಲಿತ ಹಾಗೂ ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

Abhiyana 2

ಮಕ್ಕಳ ಎತ್ತರ, ತೂಕದ ಅಳತೆ (ಮಗುವಿನ ಬೆಳವಣಿಗೆ ಮೇಲ್ವಿಚಾರಣೆ) ಮತ್ತು ಆರೋಗ್ಯ ಶಿಬಿರಗಳ ಆಯೋಜನೆ. ತಂತ್ರಜ್ಞಾನದ ಮೂಲಕ ತಾಯಿ ಮತ್ತು ಮಗುವಿಗೆ ತಲುಪುವ ಆರೋಗ್ಯ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಮೇಲ್ವಿಚಾರಣೆ ಮಾಡುವುದು. ಇದರ ಜೊತೆಯಲ್ಲಿ ಬೇಟಿ ಬಚಾವೋ ಬೇಟಿ ಪಡವೋ, ಲಿಂಗ ಪಕ್ಷಪಾತ ತೊಲಗಿಸಿ, ಹೆಣ್ಣನ್ನು ಉಳಿಸಿ, ಹೆಣ್ಣುನ್ನು ಬೆಳಸಿ ಹೆಣ್ಣು ಮಕ್ಕಳಿಗೆ ಓದಿಸಿ ಹಾಗೂ ಮಾತೃವಂದನಾ ಭಾಗ್ಯ ಲಕ್ಷ್ಮೀ, ಸುಕನ್ಯಾ ಸಂವೃದ್ದಿಯೋಜನೆ, ಯೋಜನೆಗಳ ಬಗ್ಗೆ ಗರ್ಭಿಣಿ ಮಹಿಳೆಯರಿಗೆ, ತಾಯಂದಿರಿಗೆ ಮತ್ತು ಕಿಶೋರಿಯರಿಗೆ ಅರೋಗ್ಯ ಸಂಬಂಧಿಸಿದ ಮಾಹಿತಿ ನೀಡಲಾಯಿತು.

ಅಭಿಯಾನದ ಕಾರ್ಯಕ್ರಮದಲ್ಲಿ ಉಪ ನಿರ್ದೇಶಕ ಗಂಗಪ್ಪ, ಮೇಲ್ವಿಚಾರಕಿ ಲಕ್ಷ್ಮೀ ದೇವಿ, ಜಿಲ್ಲಾ ಮಿಷನ್ ಶಕ್ತಿ ಸಂಯೋಜಕಿ ವಿದ್ಯಾ, ತಜ್ಞೆ ಅನ್ನಪೂರ್ಣ ಮತ್ತು ಅಂಗನವಾಡಿ ಕಾರ್ಯಕರ್ತರು ಇದ್ದರು.