ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hospet News: ಜು.12ರಂದು ರೋಟರಿ ಹಾಗೂ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ಹೊಸಪೇಟೆ ರೋಟರಿ ಕ್ಲಬ್ ಸಾಮಾಜಿಕ ಸೇವೆಯಲ್ಲಿ ವಿಶ್ವಾಸಾರ್ಹತೆಯನ್ನು ಪಡೆದಿದ್ದು ಈಗಾಗಲೇ ರೋಟರಿ ಬ್ಲಡ್ ಬ್ಯಾಂಕ್ ಡಯಾಲಿಸಿಸ್ ಸೆಂಟರ್ ಫಿಸಿಯೋಥೆರಪಿ ಪ್ಯಾಥಲಾಜಿ ಲ್ಯಾಬ್, ಕಣ್ಣಿನ ಆಸ್ಪತ್ರೆ ಸೇರಿದಂತೆ ಹಲವಾರು ಶಾಶ್ವತ ಯೋಜನೆಗಳನ್ನು ಅತ್ಯಂತ ಹೆಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದೇವೆ

ಹೊಸಪೇಟೆ: ರೋಟರಿ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್, ಹೊಸಪೇಟೆ ವತಿಯಿಂದ 2026–27ನೇ ಸಾಲಿನ 68ನೇ ಅಧ್ಯಕ್ಷರು ಹಾಗೂ ನಿರ್ದೇಶಕರ ಮಂಡಳಿಯ ಪದಗ್ರಹಣ ಸಮಾರಂಭವು ನಗರದಲ್ಲಿ ಜು. 12ರಂದು ಜರುಗಲಿದೆ ಎಂದು ರೋಟರಿ ಅಧ್ಯಕ್ಷ ವೀರಭದ್ರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜು.12ರಂದು ಬೆಳಿಗ್ಗೆ 10.30ಕ್ಕೆ ನಗರದ ಹೋಟೆಲ್ ಮಲ್ಲಿಗಿ ಸೆಲೆಬ್ರೇಷನ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.

ರೋಟರಿ ಕ್ಲಬ್‌ನ ಪದಗ್ರಹಣಾಧಿಕಾರಿಯಾಗಿ ಜಿಲ್ಲಾ 3150ರ ಪಿಡಿಜಿ ಡಾ.ಶರತ್ ಬಾಬು ಭಾಗವಹಿಸ ಲಿದ್ದು, ಎಂ.ಆರ್. ವೀರಭದ್ರ ಅಧ್ಯಕ್ಷರಾಗಿ ಹಾಗೂ ಕಿರಣಕುಮಾರ ಸೋನಿ ಕಾರ್ಯದರ್ಶಿಯಾಗಿ ಪದಗ್ರಹಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ 2026–27ನೇ ಸಾಲಿನ ನಿರ್ದೇಶಕರ ಮಂಡಳಿ ಯೂ ಅಧಿಕಾರ ಸ್ವೀಕರಿಸಲಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Hospet News: ಭೋವಿ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಪಿ.ಬಾಬು ನೇಮಕ

ಕಾಲೇಜು ಹಾಗು ಹೈ ಸ್ಕೂಲ್ ವಿದ್ಯಾರ್ಥಿಗಳಿಗಾಗಿ ರೈಲ ಕಾರ್ಯಕ್ರಮವನ್ನು ಆಗಸ್ಟ್ 20 ರಿಂದ 23ರ ವರೆಗೆ ಆಯೋಜಿಸಿದ್ದು ನಂತರ 'ಸ್ಮೈಲ್' ಮೂಲವ್ಯಾಧಿಗೆ ಶಾಶ್ವತ ಪರಿಹಾರ ಶಿಬಿರ ಆಯೋಜಿಸಲಾಗುತ್ತದೆ ಎಂದು ಹೇಳಿದರು.

ರೋಟರಿ ಚಾರಿಟಬಲ್ ಟ್ರಸ್ಟ್ ನ ಖಜಾಂಚಿ ವಿಜಯ ಸಿಂದಗಿ ಮಾತನಾಡಿ, ಹೊಸಪೇಟೆ ರೋಟರಿ ಕ್ಲಬ್ ಸಾಮಾಜಿಕ ಸೇವೆಯಲ್ಲಿ ವಿಶ್ವಾಸಾರ್ಹತೆಯನ್ನು ಪಡೆದಿದ್ದು ಈಗಾಗಲೇ ರೋಟರಿ ಬ್ಲಡ್ ಬ್ಯಾಂಕ್ ಡಯಾಲಿಸಿಸ್ ಸೆಂಟರ್ ಫಿಸಿಯೋಥೆರಪಿ ಪ್ಯಾಥಲಾಜಿ ಲ್ಯಾಬ್, ಕಣ್ಣಿನ ಆಸ್ಪತ್ರೆ ಸೇರಿದಂತೆ ಹಲವಾರು ಶಾಶ್ವತ ಯೋಜನೆಗಳನ್ನು ಅತ್ಯಂತ ಹೆಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಎಐ ತಂತ್ರಜ್ಞಾನದ ರೋಬೋಟಿಕ್ ಮೂಲಕ ಫಿಜಿಯೋ ಥೆರಪಿ ಚಿಕಿತ್ಸೆ ನಡೆಸುವ ಉದ್ದೇಶವನ್ನು ಹೊಂದಿದ್ದೇವೆ ಅಲ್ಲದೆ ಪ್ರತಿದಿನ ಅತ್ಯಂತ ಕಡಿಮೆ ದರದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲಿದ್ದು ತಿಂಗಳಲ್ಲಿ ಒಂದು ದಿನ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುತ್ತೇವೆ. ಅಲ್ಲದೆ ನವಜಾತ ಶಿಶುಗಳಲ್ಲಿ ಕಂಡುಬರುವ ಶ್ರವಣದೋಷ ಪತ್ತೆ ಹಚ್ಚಿ ಚಿಕಿತ್ಸೆಯನ್ನು ನೀಡಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಹೇಳಿದರು. ಡಯಾಲಿಸಿಸ್ ಸೆಂಟರ್'ಗೆ ಇನ್ನು ಅತ್ಯುತ್ತಮ ನವ ನವೀನ ಡಯಾಲಿಸಿಸ್ ಯಂತ್ರಗಳನ್ನು ಖರೀದಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.

ಇನ್ನರ್ ವೀಲ್ ಕ್ಲಬ್‌ನ ಪದಗ್ರಹಣಾಧಿಕಾರಿಯಾಗಿ ಅಸೋಸಿಯೇಷನ್ ಕೌನ್ಸಿಲ್ ಸದಸ್ಯೆ ಜಯಶ್ರೀ ಸಾಗರ್ ಆಗಮಿಸಲಿದ್ದು, ಎ. ರಾಜೇಶ್ವರಿ ಅಧ್ಯಕ್ಷೆಯಾಗಿ ಹಾಗೂ ಶೈಲಜಾ ಒಡೆಯರ್ ಕಾರ್ಯದರ್ಶಿ ಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಜೊತೆಗೆ ಹೊಸ ನಿರ್ದೇಶಕರ ಮಂಡಳಿಯ ಪದಗ್ರಹಣವೂ ನೆರವೇರಲಿದೆ.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕಿರಣ್ ಕುಮಾರ್ ಸೋನಿ, ರೋಟೇರಿಯನ್ ಮಂಜುನಾಥ್ ಅಂಗಡಿ, ದೀಪಕ್ ಕೊಳಗದ್ ಇದ್ದರು.