ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶ್ರೀ ಸ್ವರ್ಣವಲ್ಲೀ ಉಭಯ ಶ್ರೀಗಳಿಂದ ಹಂಪಿ ಕ್ಷೇತ್ರ ಭೇಟಿ; ಶ್ರೀ ವಿರೂಪಾಕ್ಷೇಶ್ವರ ದರ್ಶನ ಹಾಗೂ ವಿಜಯನಗರದ ವೈಭವಾವಲೋಕನ

Vijayanagara News: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹಾಗೂ ಅವರ ಕರಕಮಲ ಸಂಜಾತಾರಾದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿ ತಮ್ಮ ಶಿಷ್ಯರೊಂದಿಗೆ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರವಾದ ಹಂಪಿಗೆ ಭೇಟಿ ನೀಡಿ, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ದಿವ್ಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಹೊಸಪೇಟೆ, ಅ.06: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹಾಗೂ ಅವರ ಕರಕಮಲ ಸಂಜಾತಾರಾದ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿ ತಮ್ಮ ಶಿಷ್ಯರೊಂದಿಗೆ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರವಾದ ಹಂಪಿಗೆ ಭೇಟಿ ನೀಡಿದರು.

ಹಂಪಿಗೆ ಆಗಮಿಸಿದ ಪೂಜ್ಯ ಉಭಯ ಶ್ರೀಗಳನ್ನು ಹಂಪಿಯ ಶ್ರೀ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ವಿದ್ಯಾರಣ್ಯ ಭಾರತಿ ಮಹಾಸ್ವಾಮೀಜಿ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಹಂಪಿ ಶ್ರೀಗಳ ನೇತೃತ್ವದಲ್ಲಿ ಶ್ರೀ ಸ್ವರ್ಣವಲ್ಲೀಯ ಉಭಯ ಶ್ರೀ ಶ್ರೀಗಳು, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ದಿವ್ಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.‌

Vijayanagara News

ಇದೇ ಸಂದರ್ಭದಲ್ಲಿ ಹಂಪಿ ಶ್ರೀಗಳು, ವಿರೂಪಾಕ್ಷ ದೇವಾಲಯದ ಆವರಣದಲ್ಲಿರುವ ಶ್ರೀ ಪಂಪಾದೇವಿ, ಶ್ರೀ ಭುವನೇಶ್ವರಿ ದೇವಿ, ಶ್ರೀ ಪಾತಾಲೇಶ್ವರ, ಶ್ರೀ ವಿದ್ಯಾರಣ್ಯರ ಸನ್ನಿಧಿ, ಶ್ರೀ ರತ್ನಗರ್ಭ ಗಣಪತಿ, ಗುಲಗಂಜಿ ಮಾಧವ ಸೇರಿದಂತೆ ಎಲ್ಲ ಪರಿವಾರ ದೇವತೆಗಳ ದರ್ಶನ ಮಾಡಿಸಿ, ಹಂಪಿ ಕ್ಷೇತ್ರ ಹಾಗೂ ವಿಜಯನಗರ ಸಾಮ್ರಾಜ್ಯದ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ವಿಸ್ತಾರವಾಗಿ ವಿವರಿಸಿದರು.

ಉಭಯ ಶ್ರೀಗಳು ಶಿಷ್ಯರೊಂದಿಗೆ ವಿಜಯನಗರದ ವಾಸ್ತುಶಿಲ್ಪ ವೈಭವವನ್ನು ಕಣ್ತುಂಬಿಕೊಂಡರು. ಕ್ಷೇತ್ರದ ನುರಿತ ಮಾರ್ಗದರ್ಶಿಗಳು ಹಂಪಿಯ ವಿಜಯ ವಿಠಲ ದೇವಾಲಯ, ಹಜಾರ ರಾಮ ದೇವಾಲಯ, ಕಡಲೆಕಾಳು ಗಣೇಶ, ಉಗ್ರ ನರಸಿಂಹ, ಬಡವಿಲಿಂಗ ಹಾಗೂ ಮುಂತಾದ ಐತಿಹಾಸಿಕ ಸ್ಥಳಗಳ ವಿಶಿಷ್ಟ ಕೆತ್ತನೆಗಳು, ಶಾಸನಗಳು ಹಾಗೂ ವಿಜಯನಗರ ಸಾಮ್ರಾಜ್ಯದ ತಾಂತ್ರಿಕ ಪ್ರೌಢಿಮೆಯ ಕುರಿತು ಅಪರೂಪದ ಮಾಹಿತಿಗಳನ್ನು ನೀಡಿದರು.

ದಕ್ಷಿಣ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರಾಜೇಂದ್ರ ಬಿ. ಸಿರಸಿಕರ್; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆ

ಕಲ್ಲಿನಲ್ಲಿ ಅರಳಿದ ಈ ಅಪೂರ್ವ ಕಲಾ ಕೃತಿಗಳನ್ನು ಮತ್ತು ಸೂಕ್ಷ್ಮ ಕೆತ್ತನೆಗಳನ್ನು ಕಣ್ಣಾರೆ ಕಂಡ ಉಭಯ ಶ್ರೀಗಳು ನಮ್ಮ ಪೂರ್ವಜರ ಶಿಲ್ಪಕಲಾ ನೈಪುಣ್ಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.