ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಕ್ಷಿಣ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರಾಜೇಂದ್ರ ಬಿ. ಸಿರಸಿಕರ್; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆ

Rajendra B Sirsikar: ಹಿಮಾಚಲ ಪ್ರದೇಶದಲ್ಲಿ ವಾಸಿಸುವ ಯಾಕ್ ಪ್ರಾಣಿಗಳ ಕುರಿತು ಸಂಶೋಧನೆ ನಡೆಸಿ, ಅವುಗಳನ್ನು ದಕ್ಷಿಣ ಭಾರತಕ್ಕೆ ಪರಿಚಯಿಸಿದ ಪ್ರಾಣಿ ಮತ್ತು ಪಕ್ಷಿ ತಜ್ಞ ರಾಜೇಂದ್ರ ಬಿ. ಸಿರಸಿಕರ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ಐಬಿಆರ್‌ ಅಚೀವರ್‌ ಸಾಧಕರಾಗಿ ದಾಖಲೆಯನ್ನು ಮಾಡಿದ್ದಾರೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾದ ರಾಜೇಂದ್ರ ಬಿ. ಸಿರಸಿಕರ್

-

Profile
Siddalinga Swamy Oct 3, 2026 6:10 PM

ಶಿರಸಿ‌, ಅ.03: ಹಿಮಾಚಲ ಪ್ರದೇಶದಲ್ಲಿ ವಾಸಿಸುವ ಯಾಕ್ ಪ್ರಾಣಿಗಳ ಕುರಿತು ಸಂಶೋಧನೆ ನಡೆಸಿ, ಅವುಗಳನ್ನು ದಕ್ಷಿಣ ಭಾರತಕ್ಕೆ ಪರಿಚಯಿಸಿದ ಪ್ರಾಣಿ ಮತ್ತು ಪಕ್ಷಿ ತಜ್ಞ ರಾಜೇಂದ್ರ ಬಿ. ಸಿರಸಿಕರ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ (India Book of Records) ಐಬಿಆರ್‌ ಅಚೀವರ್‌ (IBR Achiever) ಸಾಧಕರಾಗಿ ದಾಖಲೆಯನ್ನು ಮಾಡಿದ್ದಾರೆ.

ರಾಜೇಂದ್ರ ಬಿ ಸಿರಸಿಕರ್ ಅವರು ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ವಾಸಿಸುವ ಯಾಕ್ ಪ್ರಾಣಿಗಳ ಕುರಿತು ಸಂಶೋಧನೆ ನಡೆಸಿ ಅವುಗಳನ್ನು ದಕ್ಷಿಣ ಭಾರತಕ್ಕೆ ಪರಿಚಯಿಸಿದ ಮೊದಲ ವ್ಯಕ್ತಿಯಾಗಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೆ ಹಿಮಾಚಲ ಪ್ರದೇಶದ ಮೈನಸ್ ಡಿಗ್ರಿಯಲ್ಲಿ ವಾಸಿಸುವ ಯಾಕ್ ಪ್ರಾಣಿಗಳನ್ನು ದಕ್ಷಿಣ ಭಾರತಕ್ಕೆ ಕರೆತಂದಿರುವುದು ಪ್ರಪ್ರಥಮ ಬಾರಿಗೆ ಹಾಗೂ ಅದರಲ್ಲೂ ಶಿರಸಿಗೆ ಬಂದಿರುವುದು ಕರ್ನಾಟಕಕ್ಕೂ ಒಂದು ಹೆಮ್ಮೆಯ ವಿಷಯವಾಗಿದೆ.

India Book of Records

ಕಳೆದ ವರ್ಷ 2025ರ ಅಕ್ಟೋಬರ್ ತಿಂಗಳಿನಲ್ಲಿ ಹಿಮಾಚಲ ಪ್ರದೇಶದ ಮೈನಸ್ ಡಿಗ್ರಿನಲ್ಲಿ ವಾಸಿಸುವ ಯಾಕ್ ಪ್ರಾಣಿಗಳನ್ನು ಕರೆತಂದ ಇವರು, ತಮ್ಮ ಪ್ರಾಣಿ ಮತ್ತು ಪಕ್ಷಿಗಳ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರದಲ್ಲಿ ಇರಿಸಿಕೊಂಡಿದ್ದಾರೆ. ಅವುಗಳು ಕರ್ನಾಟಕದ ಹವಾಮಾನಕ್ಕೆ ಹೊಂದಿಕೊಳ್ಳುವಂತೆ ನೋಡಿಕೊಂಡು ಕಳೆದು ಸುಮಾರು 10 ತಿಂಗಳಿನಿಂದ ಅವುಗಳನ್ನು ಪೋಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸ ಬಣ್ಣ, ಹೊಸ ಲುಕ್: ಹಬ್ಬದ ಸೀಸನ್‌ನಲ್ಲಿ ಧೂಳೆಬ್ಬಿಸಲು ಸಜ್ಜಾದ ಜಾವಾ, ಯೆಜ್ಡಿ, ಬಿಎಸ್‌ಎ ಬೈಕ್‌ಗಳು!

ಈ ವಿಶಿಷ್ಟ ಸಾಧನೆ ಮತ್ತು ಸಂಶೋಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌, ರಾಜೇಂದ್ರ ಬಿ ಸಿರಸಿಕರ್ ಅವರನ್ನು ಐಬಿಆರ್ ಅಚೀವರ್ ಐಬಿಆರ್ ಸಾಧಕ ಎಂದು ಗುರುತಿಸಿ ಸನ್ಮಾನಿಸಿದೆ.