ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Harapanahalli News: ಶಿಕ್ಷಕರು ರಾಷ್ಟ್ರದ ನಿರ್ಮಾಪಕರು ಇದ್ದಂತೆ : ಶ್ರೀ ವರಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳು

ಹರಪನಹಳ್ಳಿ ತೆಗ್ಗಿನ ಮಠದ ಟಿ.ಎಂ.ಎ.ಇ ಸಂಸ್ಥೆಯಲ್ಲಿ ಅತಿ ಹೆಚ್ಚು ಟಿ.ಸಿ.ಹೆಚ್.ಶಿಕ್ಷಣ ಪಡೆದು ಶಿಕ್ಷಕರಾಗಿ ವೃತ್ತಿಜೀವನ ನಡೆಸುತ್ತಿರುವವರು ಬಹಳ ಜನ ಶಿಕ್ಷಕರು ಇದ್ದಾರೆ. ಅವರನ್ನೂ ನೋಡಿದ್ದು ಬಹಳ ಸಂತೋಷವಾಗಿದೆ. ಸಮಾಜದ ಬದಲಾವಣೆಯ ತರುವ ಏಕೈಕ ವೃತ್ತಿ ಯಾವುದಾರೂ ಇದ್ದರೆ ಆದು ಶಿಕ್ಷಕ ವೃತ್ತಿ ಆ ವೃತ್ತಿಯನ್ನು ಗೌರವಾಯುತವಾಗಿ ನಡೆದುಕೊಳ್ಳುವುದು ಎಲ್ಲರ ಆದ್ಯಕರ್ತವ್ಯ

ಹರಪನಹಳ್ಳಿ: ಶಿಕ್ಷಕರು ರಾಷ್ಟ್ರದ ನಿರ್ಮಾಕರು ಇದ್ದಂತೆ, ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಸಮಾಜದಲ್ಲಿ ಬದಲಾವಣೆ ಆಗವಂತಹ ಬೋಧನೆಯನ್ನು ವಿದ್ಯಾರ್ಥಿಗಳಿಗೆ ನೀಡಬೇಕಾಗುತ್ತದೆ ಎಂದು ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಹೊಸಪೇಟೆ ರಸ್ತೆಯ ಡಾ.ಬಾಬು ಜಗಜೀವನ್ ರಾಮ್ ಸಭಾಂಗಣದಲ್ಲಿ ಕನಾರ್ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಹಾಗೂ ತಾಲೂಕು ಘಟಕ ಹರಪನಹಳ್ಳಿ, ಪ್ರಗತಿಪರ ಶಾಲಾ ಶಿಕ್ಷರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಪದಗ್ರಹಣ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ನಾವು ಮನೆ ಕಟ್ಟಲು ಫೌಂಡೆಂಷನ್ ಎಷ್ಟೋ ಗಟ್ಟಿಯಾಗಿ ಹಾಕುತ್ತೇವೆಯೋ ಹಾಗೆಯೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿ ಗಟ್ಟಿಯಾಗಿ ಫೌಂಡೆಂಷನ್ ಹಾಕಿದರೆ ಮಾತ್ರ ವಿದ್ಯಾರ್ಥಿ ಗಳು ಪ್ರತಿಭಾವಂತ ಸೃಜನಶೀಲ ವ್ಯಕ್ತಿಯಾಗಿ ಬದಲಾಗುವುದಕ್ಕೆ ಸಾಧ್ಯ ಎಂದರು.

ಇದನ್ನೂ ಓದಿ: Harapanahalli News: ಸೆ.10ರಂದು ಬಂಜಾರರಿಂದ ವಿಧಾನಸೌಧ ಮುತ್ತಿಗೆ

ಹರಪನಹಳ್ಳಿ ತೆಗ್ಗಿನ ಮಠದ ಟಿ.ಎಂ.ಎ.ಇ ಸಂಸ್ಥೆಯಲ್ಲಿ ಅತಿಹೆಚ್ಚು ಟಿ.ಸಿ.ಹೆಚ್.ಶಿಕ್ಷಣ ಪಡೆದು ಶಿಕ್ಷಕರಾಗಿ ವೃತ್ತಿಜೀವನ ನಡೆಸುತ್ತೀರುವವರು ಬಹಳ ಜನ ಶಿಕ್ಷಕರು ಇದ್ದಾರೆ. ಅವರನ್ನೂ ನೋಡಿದ್ದು ಬಹಳ ಸಂತೋಷವಾಗಿದೆ. ಸಮಾಜದ ಬದಲಾವಣೆಯ ತರುವ ಏಕೈಕ ವೃತ್ತಿ ಯಾವು ದಾದರೂ ಇದ್ದರೆ, ಆದು ಶಿಕ್ಷಕ ವೃತ್ತಿ ಆ ವೃತ್ತಿಯನ್ನು ಗೌರವಾಯುತವಾಗಿ ನಡೆದುಕೊಳ್ಳುವುದು ಎಲ್ಲರ ಆದ್ಯಕರ್ತವ್ಯ. ಇಂತಹ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಸಮಾಜ ದಲ್ಲಿ ಬದಲಾವಣೆ ಆಗಲು ಸಾಧ್ಯ. ಇವತ್ತು ನಾವು ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ. ಇಂತಹ ಸಮಸ್ಯೆಗಳನ್ನು ಶಿಕ್ಷಣದಿಂದ ಮಾತ್ರ ಸುಧಾರಿಸಲು ಸಾಧ್ಯ ಇಂಗ್ಲಿಷ್ ಭಾಷೆಯ ಜೊತೆಗೆ ಮಾತೃಭಾಷೆಗೆ ಹೆಚ್ಚು ಮಹತ್ವ ನೀಡಬೇಕು, ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವುದು ಶಿಕ್ಷಕರ ಪಾತ್ರ ಬಹಳ ಮುಖ್ಯ. ಇಂದಿನ ವಿದ್ಯಾರ್ಥಿಗಳಿಗೆ ಚಿಂತನೆಯ ಪಾಠದ ಜೊತೆಗೆ ಜೀವನದ ಪಾಠವನ್ನು ಸಹ ಕಲಿಸಬೇಕು ಪೋಷಕರು ಮಕ್ಕಳಿಗೆ ಬಲವಂತದ ಶಿಕ್ಷಣ ನೀಡಬಾರದು ಎಂದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರು ಮಾತನಾಡಿ, ನಾವು ಶಿಕ್ಷಕರ ಚುನಾವಣೆ ಮಾಡಬೆಕೆಂದು ಬಹಿಸಿದವರಲ್ಲ, ಆದರೆ ಅನಿರ್ವಾವಾಗಿ ಚುನಾವಣೆ ನಡೆದು ಮುಕ್ತಾಯವಾದರೂ ಸಹ ಸಂಘರ್ಷ ನಡೆಯುತ್ತಿದೆ,

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಿಂದೆ ಹಿರಿಯರು ನಡೆಸಿಕೊಂಡು ಬಂದಿರುವ ಏಕೈಕ ಸಂಘ ನಮ್ಮ ಸಂಘವಾಗಿದೆ. ರಾಜ್ಯದ ಶಿಕ್ಷಕರ ಸಮಸ್ಯೆಗಳನ್ನು ಆಲಿಸುವ ಏಕೈಕ ಸಂಘ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವಾಗಿದೆ ಎಂದರು.

ಸೆಪ್ಟೆಂಬರ್ ತಿಂಗಳು ನಡೆದ ಸುಪ್ರೀಂ ಕೋರ್ಟ್ ಒಂದು ಆದೇಶದಂತೆ ಟಿಇಟಿ ಪರೀಕ್ಷೆ ಇಲ್ಲದೇನೆ ಮುಖ್ಯ ಶಿಕ್ಷಕರ ಮುಂಬಡ್ತಿ ನೀಡಿದ ಏಕೈಕ ಸಂಘ ನಮ್ಮದಾಗಿದೆ ನಲಿ ಕಲಿಯನ್ನು ಅತೀ ಶೀಘ್ರದಲ್ಲೇ ರದ್ದು ಮಾಡಿಸುವ ಪ್ರಯತ್ನದಲ್ಲಿ ನಾವಿದ್ದೇವೆ ಎಂದು ಶಿಕ್ಷಕರಿಗೆ ಶುಭಾ ಸುದ್ದಿಯನ್ನು ನೀಡುತ್ತೇವೆ ಎಂದು ಶಿಕ್ಷಕರಿಗೆ ಭರವಸೆ ನೀಡಿದರು.

ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಮಾಡಿರುವ ಕೆಲಸಗಳನ್ನು ನೆನೆಯ ಬೇಕಾಗಿರು ವುದು ನಮ್ಮ ನಿಮ್ಮಲ್ಲರ ಆದ್ಯಕರ್ತವ್ಯ ವರ್ಗಾವಣೆ ವಿಷಯದಲ್ಲಿ ತಿದ್ದುಪಡಿ ಮಾಡಿಸುವ ಸಲು ವಾಗಿ ಸ್ವಲ್ಪ ವಿಳಂಬವಾಗುತ್ತಿದೆ. ಅತಿ ಶೀಘ್ರದಲ್ಲಿ ರಾಜ್ಯ ಕಾರ್ಯದರ್ಶಿಯವರ ಜೊತೆ ಮಾತನಾಡಿ, ಆಕ್ಟೋಬರ್ ತಿಂಗಳಲ್ಲಿ ವರ್ಗಾವಣೆ ಕಾರ್ಯವು ಆರಂಭವಾಗಲಿದೆ ಎಂದರು.

ಇತ್ತೀಚೆಗೆ ಬಿಸಿಯೂಟ ಕಾರ್ಯಾಕ್ರಮದಲ್ಲಿ ರಾಜ್ಯದ ಮುಖ್ಯ ಶಿಕ್ಷಕರ ಜೇಬಿಗೆ ಕತ್ತರಿ ಬೀಳುತ್ತಿದೆ ಶಾಲೆಯ ಬಿಸಿಯೂಟದ ತರಕಾರಿ ಮತ್ತು ಮೊಟ್ಟೆಯ ಬೆಲೆ ಹೆಚ್ಚಾಗಿರುವುದರಿಂದ ಮುಖ್ಯ ಶಿಕ್ಷಕರ ಸಮಸ್ಯೆಗಳನ್ನು ಆಲಿಸವಂತಹ ಕೆಲಸವನ್ನು ಅತೀ ಶೀಘ್ರದಲ್ಲೇ ಸರಕಾರಕ್ಕೆ ಒತ್ತಡ ಹಾಕುತ್ತೇವೆ ಎಂದರು.

ಹಾಲಿ ಶಿಕ್ಷಕರ ವೃತ್ತಿ ಅನುಭವಿಸುತ್ತಿರುವ ಶಿಕ್ಷಕರಿಗೆ ಅವರವರ ವಿದ್ಯಾರ್ಹತೆ ಆಧಾರದ ಮೇಲೆ ಅವರಿಗೆ ಮುಂಬಡ್ತಿ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೆಲವು ಶಿಕ್ಷಕರ ಸಂಘದ ವಿರೋಧಿಗಳು ಸಂಘಟನೆಗಳಲ್ಲಿ ಸಂಘರ್ಷವನ್ನು ಹುಟ್ಟು ಹಾಕಿದರೆ ಅವರ ವಿರುದ್ದ ಅವರ ವಿರುದ್ದ ಕಾನೂನು ರೀತಿಯಲ್ಲಿ ಹೋರಾಟ ಮಾಡೋಣ ಎಂದು ವಿಶ್ಲೇಷಿಸಿದರು.

ಈ ರಾಜ್ಯ ಸಂಘಟನೆಗಳು ಅವರದೇಯಾದ ತತ್ವ ಸಿದ್ದಾಂತ ಮೇಲೆ ನಡೆಯುತ್ತದೆ. ಆದರೆ ಕೆಲವು ವಿರೋಧಿಗಳು ಸಂಘದ ಬಗ್ಗೆ ಹಗುರವಾಗಿ ಮಾತನಾಡುವವರ ವಿರುದ್ದ ತಕ್ಕ ಪಾಠ ಕಲಿಸುವ ಸಮಯ ಸಮೀಪ ವಿದೆ ಎಂದು ವಿರೋಧಿಗಳ ವಿರುದ್ದ ಗುಡುಗಿದರು.

ಇನ್ನೂ ಮುಂದೆ ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ವೇತನವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುವ ಕಾರ್ಯವನ್ನು ಅತೀ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡುತ್ತೀರುವ ವಿದ್ಯಾರ್ಥಿಗಳಿಗೆ ಮಾತ್ರ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ ನೀಡುವ ಕೆಲಸ ಸರಕಾರ ಮಾಡಲಿದೆ. ಖಾಸಗಿ ಶಾಲೆಯಲ್ಲಿ ಹೆಚ್ಚು ಅಂಕ ಪಡೆದು ಉನ್ನತ ಹುದ್ದೆಗಾಗಿ ಕಾನುನು ಬಾಹಿರವಾಗಿ ಗ್ರಾಮೀಣ ಅಭ್ಯಾರ್ಥಿ ಪ್ರಮಾಣ ಪತ್ರವನ್ನು ಪಡೆಯು ತ್ತಿದ್ದರೂ ಆದರೆ ಆದು ಶೀಘ್ರದಲ್ಲೇ ಸರ್ಕಾರ ಕಡಿವಾಣ ಹಾಕಲಿದ್ದಾರೆ ಎಂದು ತಿಳಿಸಿದರು.

ವಕೀಲ ಬಸವರಾಜ್ ಸಂಗಪ್ಪನವರ್ ಮಾತನಾಡಿ, ಹರಪನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ , ಪ್ರಗತಿಪರ ಸಂಘಟನೆಯ ಸಂಘ ಬಹಳ ಪರಿಪುರಾಣವಾದ ಸಂಘ ಆದರೆ ಹರಪನಹಳ್ಳಿ ಸರಕಾರಿ ನೌಕರಿ ಸಂಘ ನಾಟಕದ ಸಂಘವಾಗಿದೆ ಅಂತಹ ನಾಟಕ ಮಾಡುವ ಸಂಘದ ಬಗ್ಗೆ ಪ್ರಗತಿಪರ ಸಂಘಟನೆಯ ಶಿಕ್ಷಕರು ಕಿವಿಗೂಡಬಾರದು, ಕೆಲವು ವಿರೋಧಿ ಶಿಕ್ಷಕರ ಸಂಘದ ಶಿಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆದು ಹಾಕುತ್ತೀದ್ದಾರೆ ಅಂತವರ ವಿರುದ್ದ ನಾನು ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಚ್ಚರ ಎಂದು ವಿರೋಧಿಗಳಿಗೆ ನೇರವಾಗಿ ಎಚ್ಚರಿಕೆಯ ಸಂದೇಶವನ್ನು ನೀಡಿದರು.

ಕೆಲವು ಕಾನೂನು ಬಾಹಿರ ಸಂಘದವರು ಯಾವುದೇ ಒಂದು ಚುನಾವಣೆಯಲ್ಲಿ ಗೆಲ್ಲಕ್ಕಾಗದವರು ನನ್ನ ಬಗ್ಗೆ ಸುದ್ದಿ ಬಳಸಿ ಮಾತನಾಡುವವರು ಹೇಡಿಗಳು ಇಂತಹ ಹೇಡಿಗಳ ಮಾತನ್ನು ತಾಲೂಕು ಪ್ರಗತಿಪರ ಸಂಘಟನೆಯ ಶಿಕ್ಷಕರು ಕಿವಿಗೊಡಬಾರದು. ನಾವು ಮುಂದಿನದಿನಗಳಲ್ಲಿ ಸಂದರ್ಭ ಬಂದಾಗ ವಿರೋಧಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದರು.

ತಾಲೂಕಿನ ಪ್ರಗತಿಪರ ಶಿಕ್ಷಕರ ಸಂಘಟನೆಯವರು ನಾಗರ ಹಾವು ಇದ್ದಂತೆ ನಾಗರ ಹಾವುನ್ನು ಮುಟ್ಟಿದ್ದರೆ ದೃಷ್ಟರು ಚದರುಹೋಗುತ್ತಾರೆ ಪ್ರಗತಿಪರ ಶಿಕ್ಷಕರ ಸಂಘದ ತಂಟೆಗೆ ಬಂದರೆ ಮುಂದಿನ ದಿನಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಗುಡುಗಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ಹೆಚ್.ಎಸ್.ಮಾತನಾಡಿ, ಶಿಕ್ಷಕರ ಚುನಾವಣೆ ನಡೆಸದಂತೆ ವಿರೋಧಿಗಳು ದಾರವಾಡ ಬೆಂಚ್ ಹೈಕೋರ್ಟ್ಗೆ ಹೋಗಿ ಚುನಾವಣೆ ತಡೆಹಿಡಿಯುವ ಹುನ್ನಾರ ನಡೆಸಿದರು ಆದರೆ ಮತ್ತೆ ಅವರೆ ಹೋಗಿ ಚುನಾವಣೆ ನಡೆಸ ಬೇಡಿ ಎಂದು ವಿರೋಧಿಗಳು ರಿಟ್ ಅರ್ಜಿಯನ್ನು ಹಾಕಲು ಹುನ್ನಾರ ನಡೆಸಿದರು ಯಾವುದೇ ಪ್ರಯೋಜನವಿಲ್ಲದೇ ಕಾನೂನಿ ಚೌಕಟ್ಟಿನಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಡೆದಿದೆ ಎಂದು ವಿರೋದಿಗಳ ವಿರುದ್ದ ಕಿಡಿಕಾರಿದರು.

ರಾಜ್ಯ ಶಿಕ್ಷಕರ ಸಂಘವನ್ನು ಒಡೆಯುವ ಕೆಲಸಕ್ಕೆ ವಿರೋಧಿಗಳಿಗೆ ಕೈಹಾಕಿದರೆ ಇನ್ನೂ ಮುಂದೆ ನಾವು ಸುಮ್ಮನೆ ಇರಲು ಸಾಧ್ಯವಿಲ್ಲ. ಶಿಕ್ಷಕರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡೋಣ ಎಂದರು

ಪ್ರಾಥಮಿ ಶಾಲಾ ಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ ಜಿ. ಪದ್ಮಲತಾ ಪ್ರಾಸ್ಥವಿಕ ಮಾತನಾಡಿದರು, ನಗರಸಭೆ ಮಾಜಿ ಅಧ್ಯಕ್ಷ ಹರಾಳ ಅಶೋಕ, ಬೆಳಗಾವಿ ಜಿಲ್ಲಾ ವಿಜಯಕುಮಾರ್ ಹೇಬ್ಲಿ, ಪ್ರಮೀಳಾ ಕಾಮೆನೆಳ್ಳಿ, ಸುಂದರೇಶ್ , ನಿವಾನಂದ ಮಾತನಾಡಿದರು.

ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಎಂ.ಪ್ರಭು, ಜಿಲ್ಲಾ ಪ್ರಾಧಾನ ಕಾಯದರ್ಶಿ ಆರ್ ಪದ್ಮರಾಜ್ ಜೈನ್, ಜಿಲ್ಲಾ ಸಹಕಾರ್ಯದರ್ಶಿ ಬಿ. ರಾಜಶೇಖರ್, ಬಿ.ಕೋಟ್ರೇಶ್ ನಗರಸಭೆ ಮಾಜಿ ಅಧ್ಯಕ್ಷ ಹರಾಳು ಅಶೋಕ, ರಾಜ್ಯ ಸಂಘಟನೆ ಸಹ ಕಾರ್ಯದರ್ಶಿ ಪ್ರಮೀಳಾ ಕಾಮನೆಳ್ಳಿ, ರಾಜ್ಯ ಸಂಘಟನೆಯ ಸಹ ಕಾರ್ಯದರ್ಶಿ ಜೈಕುಮಾರ್ , ಸುಂದರೇಶ್, ಎನ್ ಒಇ ಎಸ್ ಸಂಘಟನೆಯ ಸಿದ್ದಪ್ಪ ಸಂಗಣ್ಣನವರು, ಜಿಲ್ಲಾ ಅಧ್ಯಕ್ಷ ಬಿ.ಜಿ.ಶಿವಾನಂದ, ಬಳ್ಳಾರಿ ನಿಂಗಪ್ಪ, ಪ್ರಸನ್ನ, ಮಾಹಂತೇಶ್, ಟಿ.ಕೆ.ಬಸವರಾಜ್, ದೇವರಾಜ್, ನಾಗರಾಜ್ ಕೆ, ಕೆ.ಷಣ್ಮುಖಪ್ಪ, ಶೇಕ್ಷವಲಿ, ಕೃಷ್ಣರಾಚ್ಚಣ್ಣ, ಹನುಮಂತಪ್ಪ, ಗುಂಡಪ್ಪನವರ ನಾಗರಾಜ್, ರವಿಗೋಣ್ಯಪ್ಪ, ಮಾರಗದಪ್ಪ, ಕಲ್ಯಾಣ್ ಕುಮಾರ್, ಕೆ.ಜಿ.ಶಿವಕುಮಾರ್, ಕುಬೇರಚಾರಿ, ಸಿ.ಎಂ.ರಮೇಶ್ ಸೇರಿದಂತೆ ಇತರರು ಇದ್ದರು.