ಹೊಸಪೇಟೆ: ರಾಜ್ಯ ರೈತ ಹಸಿರುಸೇನೆ ಹಸುರೀಕರಣ ಸಂಸ್ಥೃತಿ ಟ್ರಸ್ಟ್ ವತಿಯಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ನಗರದ ಅನಂತಶಯನಗುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಎಂ.ಪಿ.ಪ್ರಕಾಶ್ ನಗರ, ಮಾರ್ಕಂಡೇಶ್ವರ ಶಾಲೆ ಪಕ್ಕದಲ್ಲಿ) ಆವರಣದಲ್ಲಿ ಹಮ್ಮಿಕೊಳ್ಳ ಲಾಗಿತ್ತು.
ಡಾ. ಶಂಕರ್ ಎಂ.ಆರ್, ಡಾ. ಟಿ. ಸಂದೀಪ್ ಮಾತನಾಡಿ, ಬಹಳಷ್ಟು ಜನ ವಯಸ್ಸಿನ ಹುಡುಗರು ಧೂಮಪಾನ, ಮದ್ಯಪಾನ ಹಾಗೂ ಡ್ರಗ್ಸ್ಗಳಿಗೆ ತುತ್ತಾಗಿದ್ದಾರೆ. ಇವರು ಇನ್ನುಮುಂದಿನ ಜೀವನ ವಾದರೂ ಉತ್ತಮ ಗುಣಮಟ್ಟದಿಂದ ನೋಡಿಕೊಂಡು ಹೋಗಬೇಕೆಂದು ತಿಳಿಸಿದರು.
ಡಾ. ರವಿ ಕುಮಾರ್ ಮಾತನಾಡಿ, ಮದ್ಯಪಾನ ಸೇವನೆಯಿಂದ ಇವರ ಜಠರ, ಕರಳು ಮತ್ತು ಕಿಡ್ನಿ ರೋಗ ಸಮಸ್ಯೆಗಳಿಂದ ಬಳಲುವ ಸಾಕಷ್ಟು ಜನರು ಬಳಲುತ್ತಿದ್ದಾರೆ. ಇವರ ನಿವಾರಣೆ ಅತ್ಯಂತ ಸೂಕ್ಷ್ಮತೆಯ ವಿಚಾರ ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: Hospet News: ಅಂತರರಾಷ್ಟ್ರೀಯ ಸುರಕ್ಷಿತ ಗರ್ಭಪಾತ ಸೇವಾ ದಿನ ಹಾಗೂ ಸುರಕ್ಷಿತ ಸಂತಾನೋತ್ಪತ್ತಿ ಆರೋಗ್ಯದ ಜಾಗೃತಿ ಕಾರ್ಯಕ್ರಮ
ಪ್ರಸೂತಿ, ಸ್ತ್ರೀರೋಗ ಹಾಗೂ ಬಂಜೆತನ ಚಿಕಿತ್ಸಾ ತಜ್ಞೆ ಡಾ.ಚೈತ್ರಾ ತುಂಗದ ಮಾತನಾಡಿ, ತಪಾಸಣೆಗೆ ಹಾಜರಾದ ಮಹಿಳೆಯರಲ್ಲಿ ಹೇಳಲಾರದಷ್ಟು ನೋವುಗಳನ್ನು ಅನುಭವಿಸುತ್ತಿದ್ದಾರೆ. ಇದರ ನಿವಾರಣೆ ಮಾಡುವುದಕ್ಕೆ ಪ್ರತೀ ತಿಂಗಳ ಕ್ಯಾಂಪಿಂಗ್ ಮಾಡಲು ನಮ್ಮ ಈ ರೈತರಾದ ರಾಜ್ಯ ರೈತ ಹಸಿರುಸೇನೆ ಹಸುರೀಕರಣ ಸಂಸ್ಕೃತಿ ಟ್ರಸ್ಟ್ ಜೊತೆ ಕೈ ಜೊಡಿಸಲು ನಾವು ಸಿದ್ದರಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಗಂಟೆ ಸೋಮಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ 18 ರಿಂದ 36 ವರ್ಷದೊಳಗಿನ ಯುವ ಪೀಳಿಗೆಯು ಧೂಮ ಪಾನ, ಮದ್ಯಪಾನ, ಡ್ರಗ್ಸ್ ಹಾಗೂ ತಂಬಾಕಿನಂತಹ ದುಷ್ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಮಧ್ಯ ವಯಸ್ಸಿನಲ್ಲೇ ಹೃದಯ ಕಾಯಿಲೆ, ಕಿಡ್ನಿ ವೈಫಲ್ಯ ಹಾಗೂ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಹೆಚ್ಚುತ್ತಿದ್ದು, ಕುಟುಂಬಗಳು ಬೀದಿಗೆ ಬೀಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಹೇಳಿದರು.
ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಈ ಉಚಿತ ಶಿಬಿರದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ವಯೋವೃದ್ಧರಲ್ಲಿ ಮಾತ್ರವಲ್ಲದೆ ಯುವಕರಲ್ಲೂ ಬಿ.ಪಿ, ಸಕ್ಕರೆ ಕಾಯಿಲೆ, ಹೃದಯ ರೋಗ ಹೆಚ್ಚಾಗುತ್ತಿರುವುದರಿಂದ ಪ್ರತಿಯೊಬ್ಬರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ ಎಂದು ಶಿಬಿರದಲ್ಲಿ ತಜ್ಞ ವೈದ್ಯರು ಕಿವಿಮಾತು ಹೇಳಿದರು.
ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಸಾರ್ವಜನಿಕರು ಹಾಗೂ ಯುವಕರು ಭಾಗವಹಿಸಿ ಉಚಿತ ತಪಾಸಣೆ ಮತ್ತು ತಜ್ಞ ವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಪರಮೇಶ್ವರ ಗೌಡ್ರು, ಶಾಲೆಯ ಮುಖ್ಯಶಿಕ್ಷಕ ಬಸವರಾಜ, ಗುಜ್ಜಲ್ ಗಣೇಶ, ಕಾರ್ತಿಕ, ಡಿಕೆ ಪಂಪಾಪತಿ, ಬಂದಿ ಬರಮಪ್ಪ ಇತರರಿದ್ದರು.