ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vijayapura news: ಪಿಎಸ್‌ಐಯಿಂದ ಭ್ರಷ್ಟಾಚಾರದ ಒತ್ತಡ, ದಯಾಮರಣ ಕೋರಿದ ಠಾಣೆ ಸಿಬ್ಬಂದಿ

ಹಣಕ್ಕಾಗಿ ವಿಪರೀತ ಭ್ರಷ್ಟಾಚಾರ, ಕಾನೂನು ಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರಲ್ಲಿ ಹಾಗೂ ಸಿಬ್ಬಂದಿ ವರ್ಗದಲ್ಲಿ ಪಿಎಸ್‌ಐ ತೊಂದರೆಯುಂಟು ಮಾಡುತ್ತಿದ್ದಾರೆ. ಠಾಣೆಯಲ್ಲಿ ದಾಖಲಾಗುವ ಎಫ್‌ಐಆರ್, ದೂರುದಾರರಿಂದ 10,000 ರೂ.ಯಿಂದ 1 ಲಕ್ಷ ರೂ.ವರೆಗೆ ಸಿಬ್ಬಂದಿ ಹಣ ವಸೂಲಿ ಮಾಡಬೇಕು ಎಂದು ಒತ್ತಡ ಹೇರಿದ್ದಾರೆ ಎಂದು ದೂರಿದ್ದಾರೆ.

ಪಿಎಸ್‌ಐ ಸೀತಾರಾಂ ಲಮಾಣಿ

ವಿಜಯಪುರ, ಏ.13: ನಗರದ (Vijayapura) ಆದರ್ಶನಗರ ಪೊಲೀಸ್ ಠಾಣೆಯ ಪಿಎಸ್‌ಐ ಸೀತಾರಾಮ್ ಲಮಾಣಿ ಭ್ರಷ್ಟಾಚಾರ (corruption) ಕಿರುಕುಳಕ್ಕೆ (harassment) ಬೇಸತ್ತು ಸಿಎಂ, ಗೃಹಸಚಿವ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಪತ್ರ ಬರೆದಿರುವ ಠಾಣಾ ಸಿಬ್ಬಂದಿ ಹಾಗೂ ಅಧಿಕಾರಿಗಳು, ಸಾಮೂಹಿಕ ದಯಾಮರಣಕ್ಕೆ (euthanasia) ಅನುಮತಿ ಕೋರಿದ್ದಾರೆ.

ಪಿಎಸ್‌ಐ ಲಮಾಣಿ ಆದರ್ಶನಗರ ಪೊಲೀಸ್ ಠಾಣೆಯಿಂದ ತಿಕೋಟ ಪೊಲೀಸ್ ಠಾಣೆಗೆ ವರ್ಗಾವಣೆಗಾಗಿ ಹಣ ಹೊಂದಿಸುತ್ತಿದ್ದಾರೆ. ಹೀಗಾಗಿ ಹಣಕ್ಕಾಗಿ ವಿಪರೀತ ಭ್ರಷ್ಟಾಚಾರ, ಕಾನೂನು ಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರಲ್ಲಿ ಹಾಗೂ ಸಿಬ್ಬಂದಿ ವರ್ಗದಲ್ಲಿ ಪಿಎಸ್‌ಐ ತೊಂದರೆಯುಂಟು ಮಾಡುತ್ತಿದ್ದಾರೆ. ಠಾಣೆಯಲ್ಲಿ ದಾಖಲಾಗುವ ಎಫ್‌ಐಆರ್, ದೂರುದಾರರಿಂದ 10,000 ರೂ.ಯಿಂದ 1 ಲಕ್ಷ ರೂ.ವರೆಗೆ ಸಿಬ್ಬಂದಿ ಹಣ ವಸೂಲಿ ಮಾಡಬೇಕು ಎಂದು ಒತ್ತಡ ಹೇರಿದ್ದಾರೆ ಎಂದು ದೂರಿದ್ದಾರೆ.

ಇನ್ನು ಹಣ ವಸೂಲಿಗೆ 5.0 ಕೋಡ್ ಅಂದ್ರೆ 50,000 ರೂ. ಹೀಗೆ ಕೋಡ್ ಬಳಸಿ ಹಣ ವಸೂಲಿ ಮಾಡಲು ಒತ್ತಡ ಹೇರುತ್ತಿದ್ದಾರೆ. ಇದರ ಜೊತೆಗೆ ಬಾರ್, ಸ್ಪಾ, ಸಿಗರೇಟ್ ಹಾಗೂ ಮಾವಾ (ತಂಬಾಕು), ವೇಶ್ಯಾವಾಟಿಕೆ ಸೇರಿದಂತೆ ಅನೇಕ ವ್ಯವಹಾರಗಳಿಂದ ವಸೂಲಿಗೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Actor Harish Death: ಕೊಡಗಿನಲ್ಲಿ ಭೀಕರ ಅಪಘಾತ; ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿ ಚಿತ್ರನಟ ಹರೀಶ್‌ ಸಾವು

ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು

ಬೆಳಗಾವಿ : ಬಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷದಿಂದ ಗರ್ಭಿಣಿ ಸಾವಿಗೀಡಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಗರ್ಭಿಣಿ ಈರಮ್ಮ ಈರಪ್ಪ ಶೀಗಿಹಳ್ಳಿ (21) ಸಾವನ್ನಪ್ಪಿದ್ದು ಅಲ್ಲದೆ ಆಕೆಯ ಹೊಟ್ಟೆಯಲ್ಲಿದ್ದ ಶಿಶು ಸಹ ಸಾವನ್ನಪ್ಪಿದೆ. ವೈದ್ಯರ ನಿರ್ಲಕ್ಷದಿಂದ ಈರಮ್ಮ ಸಾವನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಬೆಳಗಾವಿ ತಾಲೂಕಿನ ತುರಮರಿ ಗ್ರಾಮದ ನಿವಾಸಿಯಾದ ಈರಮ್ಮ ಏಪ್ರಿಲ್ 10ರಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಸರಿಯಾಗಿ ಚಿಕಿತ್ಸೆ ನೀಡದ ಪರಿಣಾಮ ಸತ್ತಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಕಿಡ್ನ್ಯಾಪ್‌ ಪ್ರಕರಣ ಬಯಲಿಗೆಳೆದ ರಸ್ತೆ ಅಪಘಾತ; ಮೂವರು ಅಪಹರಣಕಾರರು ಸಾವು: ಮಕ್ಕಳು ಸೇರಿ ಮೂವರ ರಕ್ಷಣೆ

ತಡರಾತ್ರಿ ಆಸ್ಪತ್ರೆಯಲ್ಲಿ ಈರಮ್ಮ ಹಾಗೂ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದ್ದಾರೆ. ಸಾವಿನ ಬಳಿಕ ಮಧ್ಯರಾತ್ರಿ ಸಹಿ ಮಾಡಿಸಿಕೊಂಡು ಕಳುಹಿಸಲು ಸಿಬ್ಬಂದಿಗಳು ಯತ್ನಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಆಸ್ಪತ್ರೆಗೆ ಎಪಿಎಂಸಿ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಹರೀಶ್‌ ಕೇರ

View all posts by this author