ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರವರ ಕೊಡುಗೆ ಅವಿಸ್ಮರಣೀಯ

ಇಂದು ಸರಕಾರಗಳು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶೇಸ್ತಿ ನೀಡಿ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ, ಜ್ಞಾನಯೋಗಾಶ್ರಮದ ಶ್ರೀಸಿದ್ದೇಶ್ವರ ಮಹಾ ಸ್ವಾಮಿಗಳಿಗೆ ಸರಕಾರ ಪ್ರಶಸ್ತಿ ನೀಡಲು ಮನವಿ ಮಾಡಿದರೂ ನಯವಾಗಿ ತಿರಸ್ಕೃರಿಸಿರುವುದು ಇನ್ನೋಬ್ಬರಿಗೆ ಮಾದರಿ ಇಂದು ಸಿದ್ದಗಂಗಾ ಮಠಗಳಂತಹ ಅನೇಕ ಪುಣ್ಯಕ್ಷೇತ್ರಗಳು ಸಾವಿರಾರು ಬಡಮಕ್ಕಳಿಗೆ ಶಿಕ್ಷಣ ದಾಸೋಹ ನೀಡುವ ಮೂಲಕ ಬಡವರ ನಿರ್ಗತಿಕರ ಬಾಳಿಗೆ ಬೆಳಕಾಗಿದೆ

ಸ್ವಾತಂತ್ರ್ಯ ನಂತರ ದೇಶದ ಸರ್ವೋತೋಮುಖ ಪ್ರಗತಿಗೆ ಸಂವಿಧಾನ ಪ್ರಮುಖವಾಗಿದೆ

ಶಾಸಕ ಯಶವಂತರಾಯಗೌಡ ಪಾಟೀಲ

Profile Ashok Nayak Jan 26, 2025 9:47 PM

ಇಂಡಿ: ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರವರ ಕೊಡುಗೆ ಅವಿಸ್ಮರಣೀಯ ಸ್ವಾತಂತ್ರ್ಯ ನಂತರ ದೇಶದ ಸರ್ವೋತೋಮುಖ ಪ್ರಗತಿಗೆ ಸಂವಿಧಾನ ಪ್ರಮುಖವಾಗಿದೆ. ಸಂವಿಧಾನ ಇಡೀ ದೇಶದ ಆರ್ಥಿಕ, ಸಾಮಾಜಿಕ ,ಶೈಕ್ಷಣಕ,ರಾಜಕೀಯ ವ್ಯವಸ್ಥೆಗೆ ಕೈಗನ್ನಡಿಯಾಗಿದೆ ಸ್ವಾತಂತ್ರ್ಯ ನಂತರ ಎಲ್ಲಾ ಸರಕಾರಗಳು ತಮ್ಮ ಕೈಲಾದ ಮಟ್ಟಿಗೆ ಶ್ರಮಿಸಿವೆ ಆದರೆ ಇತೀಚೀನ ದಿನಗಳಲ್ಲಿ ರಾಜಕೀಯ ವಿದ್ಯಮಾನಗಳು ಕಂಡು ನನಗೆ ಬೇಸರವಾಗಿದೆ. ಜನ ಹಿತ ಕಾಪಾಡಬೇಕಾಗಿರುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ ಆದರೆ ಇಂದು ಜನರ ಹಿತ ಹಾಗೂ ಸಾರ್ವಜನಿಕ ಕೆಲಸ ಕಾರ್ಯ ಮಾಡದೆ ಕೇವಲ ಮತಗಳಿಗಾಗಿ ರಾಜಕೀಯ ಮಾಡಿದರೆ ವ್ಯವಸ್ಥೆ ಹಾಳಾಗುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಧ್ವಜಾರೋಹಣ ನೆರವೇರಿಸಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ವಿಜಯಪುರ ಜಿಲ್ಲೆಯ ಜನತೆ ತ್ಯಾಗದ ಪ್ರತೀಕ ಎಷ್ಟೇ ಕಷ್ಟ ಬಂದರೂ ಸಹಿಷ್ಣುತ ಗುಣ ಜನರಲ್ಲಿದೆ. 72ರ ದಶಕ ದಲ್ಲಿ ಭೀಕರ ಬರಗಾಲ ಬಿದ್ದರೂ ಕೂಡಾ ಧೃತಿಗೆಡದೆ ಬಂಗಾರ, ಬೆಳ್ಳಿಯಿಂದ ಕೇಂದ್ರದ ನಾಯಕ ರಿಗೆ ಗೌರವಿಸಿದ್ದಾರೆ. ಇಂದು ಸರಕಾರಗಳು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶೇಸ್ತಿ ನೀಡಿ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ, ಜ್ಞಾನಯೋಗಾಶ್ರಮದ ಶ್ರೀಸಿದ್ದೇಶ್ವರ ಮಹಾ ಸ್ವಾಮಿಗಳಿಗೆ ಸರಕಾರ ಪ್ರಶೇಸ್ತಿ ನೀಡಲು ಮನವಿ ಮಾಡಿದರೂ ನಯವಾಗಿ ತಿರಸ್ಕರಿಸಿರುವುದು ಇನ್ನೊಬ್ಬರಿಗೆ ಮಾದರಿ ಇಂದು ಸಿದ್ದಗಂಗಾ ಮಠಗಳಂತಹ ಅನೇಕ ಪುಣ್ಯಕ್ಷೇತ್ರಗಳು ಸಾವಿರಾರು ಬಡಮಕ್ಕಳಿಗೆ ಶಿಕ್ಷಣ ದಾಸೋಹ ನೀಡುವ ಮೂಲಕ ಬಡವರ ನಿರ್ಗತಿಕರ ಬಾಳಿಗೆ ಬೆಳಕಾಗಿದೆ ಇಂತಹ ಶರಣ ಸಂತರಿಗೆ ಭಾರತ ರತ್ನಗಳಂತ ಪ್ರಶಸ್ತಿ ನೀಡಿ ಗೌರವಿಸಿದರೆ ಅದಕ್ಕೆ ತನ್ನದೇ ಆದ ಮರ್ಯಾದೆ ಸಿಗುತ್ತದೆ.

ಇದನ್ನೂ ಓದಿ: Vijayapura (Indi) News: ಆಧುನಿಕ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ವಿಜ್ಞಾನ ಸಾಕಷ್ಟು ಮುಂದುವರೆದಿದೆ: ಡಾ.ಶಿವರಾಜ ಕೊಪ್ಪಾ

ಪ್ರಶಸ್ತಿಗಳಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚುತ್ತದೆ. ಗಡಿಭಾಗದಲ್ಲಿ ಇನ್ನು ಸಾಕಷ್ಟು ಅಭಿವೃದ್ದಿ ಯಾಗಬೇಕಾಗಿದೆ ನೀರಾವರಿ ಯೋಜನೆ, ಕೆರೆತುಂಬ ಯೋಜನೆಗಳು ನಡೆಯಬೇಕಿದೆ, ಗ್ಯಾರಂಟಿ ಯೋಜನೆಗಳು ಮಾಡಿರುವದರಿಂದ ಬಡವರಿಗೆ ಆರ್ಥಿಕವಾಗಿ ಸಬಲರಾಗಿದ್ದಾರೆ ಆದರೆ ಹಿಂದಿನ ಅಭಿವೃದ್ದಿ ಪಡಿಸಿದ ಯೋಜನೆಗಳು ಹಾಳಾಗುತ್ತಿವೆ. 2013ರ ಅವಧಿ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ದಿಪಡಿಸಿರುವೆ. ಆದರೆ ಸದ್ಯದ ಅವಧಿ ನೈಯಾಪೈಸ್ ಅನುದಾನ ಇಲ್ಲ. ಪ್ರತಿ ಶಾಸಕರಿಗೆ 10 ಕೋಟಿ ಅನುದಾನ ಪತ್ರಿಕೆಗಳಲ್ಲಿ ಬಂದಿದೆ ಇದರಿಂದ ಸರಿದೂಗಿಸಲು ಸಾಧ್ಯವೆ ? ರಸ್ತೆಗಳು ಹಾಳಾಗಿವೆ ಜನರಿಗೆ ಸಾರಿಗೆ ಸಾಗಾಟಕ್ಕೆ ತೊಂದರೆಯಾಗಿದೆ ಮೂಲಸೌಲಭ್ಯಗಳು ಈಡೇರಿಸ ದಿದ್ದರೆ ಯಾವ ಪುರುಷಾರ್ಥಕ್ಕೆ ಶಾಸಕರಾಗಬೇಕು. ಸರಕಾರಗಳು ಒಳ್ಳೆಯ ನಿರ್ಣಯ ಗಳನ್ನು ಕೈಗೊಂಡು ಅಭಿವೃದ್ದಿ ಕಡೆ ಹೊಸ ಯೋಜನೆಗಳಿಗೆ ಗಮನ ಹರಿಸಬೇಕು. ಗಡಿ ಭಾಗದಲ್ಲಿ ಅನಧಿಕೃತ ಚಟುವಟಿಗಳು ನಡೆಯಕೂಡದು, ಅರಣ್ಯ ಇಲಾಖೆ ವತಿಯಿಂದ ಗಿಡಮರಗಳನ್ನು ಬೆಳೆಸಿ ತಾಲೂಕಿನ ಸಾವಳಸಂಗ ಗುಡ್ಡ ಅಭಿವೃದ್ದಿಪಡಿಸಿ ಪ್ರವಾಸ ತಾಣ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಬೂದಿಹಾಳ ಗ್ರಾಮದ ಹತ್ತಿರ ಸಣ್ಣ ಕೈಗಾರಿಕೆಗಳ ಸ್ಥಾಪನೆ, ಹಲಸಂಗಿ ಗೆಳೆಯರ ಸಾಂಸ್ಕೃತಿಕ ಭವನ ಹಾಗೂಗ್ರಾಮೀಣ ಭಾಗಗಳಲ್ಲಿ ವಿದ್ಯುತ ಘಟಕಗಳು ಸ್ಥಾಪಿಸಲಾಗು ವುದು ಎಂದರು.

ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಎಸಿ ಅಬೀದ ಗದ್ಯಾಳ, ತಹಶೀಲ್ದಾರ ಬಿ.ಎಸ್ ಕಡಕಭಾವಿ, ಶಿಕ್ಷಣಾಧಿಕಾರಿ ಆಲಗೂರ, ಡಿವೈಎಸ್.ಪಿ ಜಗದೀಶ, ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ ,ತಾ.ಪಂ ಅಧಿಕಾರಿ ನಂದೀಪ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ತೋಟಗಾರಿಕಾಧಿಕಾರಿ ಎಚ್.ಎಸ್ ಪಾಟೀಲ, ಹೆಸ್ಕಾಂ ಅಧಿಕಾರಿ ಮೇಡೆದಾರ, ತಾಲೂಕಾ ಕ್ರೀಡಾಧಿಕಾರಿ ಚಂದ್ರಶೇಖರ ವಾಲೀಕಾರ, ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ, ಭೀಮಣ್ಣಾ ಕೌಲಗಿ, ಜಾವೀದ ಮೋಮಿನ್, ಹರೀಶ್ಚಂದ್ರ ರಾಠೋಡ, ಮಹೇಶ ಹೊನ್ನಬಿಂದಗಿ ಇದ್ದರು.