Vijayapura (Indi) News: ಆಧುನಿಕ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ವಿಜ್ಞಾನ ಸಾಕಷ್ಟು ಮುಂದುವರೆದಿದೆ: ಡಾ.ಶಿವರಾಜ ಕೊಪ್ಪಾ
ಜಗತ್ತು ಸಾಕಷ್ಟು ಮುಂದುವರೆದಿದೆ ಅಧುನಿಕ ತಂತ್ರಜ್ಞಾನಗಳ ಜೊತೆ ಮೋಬೈಲ್‌ಗಳು ಮನುಷ್ಯನ ಮಾನಸಿನ ನೆಮ್ಮದಿ ಹಾಳು ಮಾಡಿವೆ ಪ್ರತಿಯೊಂದು ನಿಸ್ಸತಂತುಗಳ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಯಾವುದೇ ವಸ್ತುಗಳಲ್ಲಿ ಸಾಧಕ ಬಾಧಕಗಳಿರುವುದು ಸತ್ಯ ಆದ್ದರಿಂದ್ದ ಒಳ್ಳೇಯ ವಿಚಾರ ಗಳ ಕಡೆ ಗಮನ ಇರಲಿ
Source : Vijayapura (Indi) Reporter
ಇಂಡಿ: ಪಟ್ಟಣದ ಪ್ರತಿಷ್ಠಿತ ರಾಮಚಂದ್. ಮೋತಿಚಂದ ಶಹಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ(ರಿ) ಇಂಡಿ ಇದರ ಅಂಗ ಸಂಸ್ಥೆಯಾದ ಆರ್. ಎಂ. ಶಹಾ (ಸಿ.ಬಿ.ಎಸ್.ಇ) ಪಬ್ಲಿಕ್ ಶಾಲೆಯಲ್ಲಿ ಸಿ.ಬಿ.ಎಸ್.ಇ ಮಂಡಳಿಯಿಂದ ಟೆಕ್ ಅವಾಂತ್ ಗ್ರೇಡ್ ಕಂಪನಿಯ ವತಿಯಿಂದ ವಿದ್ಯಾರ್ಥಿಗಳ, ಶಿಕ್ಷಕರ, ಸಮುದಾಯದ ಆರೋಗ್ಯ ತಪಾಸಣೆಗೆ ಅನುಕೂಲವಾಗುವಂತಹ ಆರೋಗ್ಯ ತಪಾಸಣಾ ಯಂತ್ರವನ್ನು ಮಕ್ಕಳ ತಜ್ಞ ಡಾ. ಶಿವರಾಜಕುಮಾರ ಕೊಪ್ಪಾ ಉದ್ಘಾಟಿಸಿದರು.
ಡಾ|| ಈ ಸಂದರ್ಬದಲ್ಲಿ ಮಕ್ಕಳ ತಜ್ಞ ಶಿವರಾಜಕುಮಾರ ಕೊಪ್ಪಾ ಮಾತನಾಡಿ ಇಂದು ವಿಜ್ಞಾನ ಸಾಕಷ್ಟು ಅಭಿವೃದ್ದಿ ಹೊಂದಿದೆ ವೈದ್ಯಕೀಯ ಲೋಕದಲ್ಲಿ ಹೊಸ ಹೊಸ ತಂತ್ರಜ್ಞಾನ ಗಳು ವಿನೂತನವಾಗಿ ಬಂದಿವೆ. ಎಷ್ಟೋ ರೋಗಗಳು ತಂತ್ರಜ್ಞಾನಗಳ ಮೂಲಕ ಕಂಡುಕೊಳ್ಳಬಹುದು. ಟೆಕ್ ಅವಾಂತ್ ಗ್ರೇಡ್ ಕಂಪನಿಯಿಂದ ವಿತರಿಸಲಾದ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಆರೋಗ್ಯ ತಪಾಸಣಾ ಯಂತ್ರವು ಮಕ್ಕಳ ಆರೋಗ್ಯದ ೬೦ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ವನ್ನು ಒದಗಿಸಲು ಅನುಕೂಲವಾಗುತ್ತದೆ.
ಜಗತ್ತು ಸಾಕಷ್ಟು ಮುಂದುವರೆದಿದೆ ಅಧುನಿಕ ತಂತ್ರಜ್ಞಾನಗಳ ಜೊತೆ ಮೋಬೈಲ್‌ಗಳು ಮನುಷ್ಯನ ಮಾನಸಿನ ನೆಮ್ಮದಿ ಹಾಳು ಮಾಡಿವೆ ಪ್ರತಿಯೊಂದು ನಿಸ್ಸತಂತುಗಳ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಯಾವುದೇ ವಸ್ತುಗಳಲ್ಲಿ ಸಾಧಕ ಬಾಧಕಗಳಿರುವುದು ಸತ್ಯ ಆದ್ದರಿಂದ್ದ ಒಳ್ಳೇಯ ವಿಚಾರಗಳ ಕಡೆ ಗಮನ ಇರಲಿ. ಇತೀತಲಾಗಿ ಆನ್ ಲೈನ್ ಶಿಕ್ಷಣದಿಂದ ಮಕ್ಕಳು ಮೋಬಾ ಯಿಲ್ ಬಳಕೆ ಹೆಚ್ಚಾಗಿದ್ದು ಪಾಲಕರು ಗಮನ ಹರಿಸಬೇಕು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ಮಾನನಸಿಕ ಖಿನ್ನತೆಗೆ ಒಳಗಾಗಿಕಲಿಕೆಯಲ್ಲಿ ಹಿಂದು ಳಿಯುತ್ತಿದ್ದಾರೆ ಆದಕಾರಣ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಮಾಡಬಾರದೆಂದು ಮಕ್ಕಳಿಗೆ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಡಿ. ಆರ್ ಶಹಾ ಮಾತನಾಡಿ ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳ ಹಲವಾರು ಆರೋಗ್ಯ ಸಮಸ್ಯೆಗಳನ್ನು ಗುರುತಿಸಲು ಈ ಆರೋಗ್ಯ ತಪಾಸಣೆ ಯಂತ್ರವು ಸಹಾಯಕ ವಾಗಿದೆ. ಜಗತ್ತಿನಲ್ಲಿ ಎಲ್ಲವನ್ನು ಪಡೆದುಕೊಳ್ಳಬಹುದು ಉತ್ತಮ ಆರೋಗ್ಯ ಪಡೆಯುವುದು ಸುಲಭ ವಲ್ಲ ಅರೋಗ್ಯವೇ ಭಾಗ್ಯ ಎನ್ನುವಂತೆ ಆರೋಗ್ಯ ಸರಿಯಾಗಿ ಇರದಿದ್ದರೆ ಮನಸ್ಸು ಸ್ಥಿರವಿರುವು ದಿಲ್ಲ ಸೈಂತಾನನ ಆಗರದಂತಾಗುತ್ತದೆ. ವಿಧ್ಯಾರ್ಥಿ ಜೀವನ ಬಂಗಾರವಿದ್ದಂತೆ ಒಳ್ಳೇಯ ಮೌಲ್ಯ ರೂಢಿಸಿಕೊಳ್ಳಿ, ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠ ಪ್ರವಚನ ಮನನ ಮಾಡಿಕೊಂಡು ಕಲಿಕೆ ಯಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಒಳ್ಳೆಯ ವ್ಯಕ್ತಿತ್ವ ನಿರ್ಮಾಣ ಮಾಡಿಕೊಂಡು ದೇಶದ ಉತ್ತಮ ಪ್ರಜೆಯಾಗಿ ಎಂದು ಸಂದೇಶ ನೀಡಿದರು.
ಮಾರ್ಗದರ್ಶಕರಾದ ಪ್ರಶಾಂತ್ ಝಾ ,ನಜೀರ್ ಹುಂಡೇಕರ್ ಎಫ್. ಕೆ. ದೋಶಿ ,ಪ್ರಾಚಾರ್ಯಡಾ. ದಯಾನಂದ್ ದಳವಾಯಿ, ಪ್ರಕಾಶ್ ಪಾಟೀಲ್‌ಸೇರಿದಂತೆ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ವಿವಿಧ ವಿಭಾಗಗಳ ಶಾಲಾ ,ಕಾಲೇಜುಗಳ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಜರಿದ್ದರು.
ಕುಮಾರಿ ಸೃಷ್ಠಿ ಅಡಗಲ್ ನಿರೂಪಿಸಿ, ರಾಹೀಲ್ ಬೀಳಗಿ ಸ್ವಾಗತಿಸಿ, ಶಿವರಾಜ ಅಳ್ಳಗಿ ವಂದಿಸಿದರು.