ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vijayapura Jet Crash: ವಿಜಯಪುರದಲ್ಲಿ ಖಾಸಗಿ ಜೆಟ್‌ ಪತನ; ಇಬ್ಬರಿಗೆ ಗಂಭೀರ ಗಾಯ

ರೆಡ್‌ ಬರ್ಡ್ ಏವಿಯೇಷನ್ ಸಂಸ್ಥೆಯ ಸೆಸ್ನಾ 172 ಟ್ಯಾಂಗೋ ಚಾರ್ಲಿ ಹೆಸರಿನ ಪ್ರೈವೇಟ್ ಜೆಟ್ ಪತನಗೊಂಡಿದೆ. ಕಲಬುರ್ಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಜೆಟ್‌ ವಿಮಾನ, ಇಂಧನ ಖಾಲಿಯಾದ ಕಾರಣ ಜಮೀನಿನಲ್ಲಿ ಪತನಗೊಂಡಿದೆ ಎಂದು ತಿಳಿದುಬಂದಿದೆ. ಕೂಡಲೇ ವಿಮಾನದಲ್ಲಿದ್ದ ಪೈಲಟ್ ಸೇರಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ಸಮೀಪ ಜೆಟ್‌ ವಿಮಾನ ಪತನವಾಗಿರುವುದು.

ವಿಜಯಪುರ: ಖಾಸಗಿ ಜೆಟ್ ಪತನವಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಡೆದಿದೆ. ರೆಡ್ ಬರ್ಡ್ ಸಂಸ್ಥೆಯ ಜೆಟ್‌ (Vijayapura Jet Crash) ಅಪಘಾತಕ್ಕೀಡಾಗಿದ್ದು, ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಥಳಕ್ಕೆ ಬಬಲೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.

ರೆಡ್‌ ಬರ್ಡ್ ಏವಿಯೇಷನ್ ಸಂಸ್ಥೆಯ ಸೆಸ್ನಾ 172 ಟ್ಯಾಂಗೋ ಚಾರ್ಲಿ ಹೆಸರಿನ ಪ್ರೈವೇಟ್ ಜೆಟ್ ಪತನಗೊಂಡಿದ್ದು, ಕೂಡಲೇ ವಿಮಾನದಲ್ಲಿದ್ದ ಪೈಲಟ್ ಗೌತಮ್ , ಕಂಪನಿ ಸಿಬ್ಬಂದಿ ಅವರನ್ನು ನಗರದ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಲಾಗಿದೆ.



ಈ ಜೆಟ್‌ ವಿಮಾನ ಕಲಬುರ್ಗಿಯಿಂದ ಬೆಳಗಾವಿಗೆ ತೆರಳುತ್ತಿತ್ತು. ಇಂಧನ ಖಾಲಿಯಾದ ಕಾರಣ ವಿಮಾನ ಜಮೀನಿನಲ್ಲಿ ಪತನಗೊಂಡಿದೆ ಎನ್ನಲಾಗಿದೆ. ಇಂಧನ ಖಾಲಿಯಾಗಿ ಕೆಳಗೆ ಬಿದ್ದ ಪರಿಣಾಮ ವಿಮಾನದಲ್ಲಿದ್ದವರ ಜೀವಕ್ಕೆ ಅನಾಹುತವಾಗಿಲ್ಲ. ಒಂದು ವೇಳೆ ವಿಮಾನದಲ್ಲಿ ಇಂಧನ ಇದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಜೆಟ್‌ ಪತನದ ವಿಚಾರ ತಿಳಿದು ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದಾರೆ.

ಸ್ಪಿರಿಟ್ ಸೇವಿಸಿ ಇಬ್ಬರು ಯುವಕರ ಸಾವು

ಕೊಪ್ಪಳ: ಪಾರ್ಟಿಯಲ್ಲಿ ಸಾರಾಯಿ ಎಂದು ಭಾವಿಸಿ ಸ್ಪಿರಿಟ್ ಸೇವಿಸಿದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿದೆ. ಕೂಕನಪಳ್ಳಿಯ ರಮೇಶ ಹೊಸಳ್ಳಿ ಮತ್ತು ಅಮರಯ್ಯ ಹಿರೇಮಠ ಮೃತರು.

ಫೆಬ್ರವರಿ 4 ರಂದು ಕೂಕನಪಳ್ಳಿ ಗ್ರಾಮದಲ್ಲಿ ಸ್ನೇಹಿತರು ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಮಾರುತಿ ಹಾಗೂ ಶರಣಪ್ಪ ಗುರಿಕಾರ ಎಂಬುವವರು ಸಾರಾಯಿ ಎಂದು ಹೇಳಿ ಸ್ಪಿರಿಟ್ ನೀಡಿದ್ದಾರೆ ಎನ್ನಲಾಗಿದೆ. ಇದು ಸ್ಪಿರಿಟ್ ಎಂದು ತಿಳಿಯದ ರಮೇಶ ಹೊಸಳ್ಳಿ, ಶರಣಪ್ಪ ಹಂಚಿನಾಳ ಹಾಗೂ ಅಮರಯ್ಯ ಹಿರೇಮಠ ಅದನ್ನು ಸೇವಿಸಿದ್ದಾರೆ.

ಸ್ಪಿರಿಟ್ ಕುಡಿದ ತಕ್ಷಣ ನಾಲ್ವರು ಅಸ್ವಸ್ಥಗೊಂಡಿದ್ದು, ಅವರನ್ನು ಕೂಡಲೇ ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಮೇಶ ಹೊಸಳ್ಳಿ ಶನಿವಾರ ಮೃತಪಟ್ಟಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅಮರಯ್ಯ ಹಿರೇಮಠ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಲಾಗಿತ್ತಾದರೂ, ಅವರು ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.

ಕುಡಿದ ಮತ್ತಿನಲ್ಲಿ ಯುವತಿಯರಿಂದ ಕಿರಿಕ್‌; ಕ್ಯಾಬ್‌ ಚಾಲಕನ ಮೇಲೆ ಹಲ್ಲೆ, ಪೊಲೀಸರೊಂದಿಗೆ ಅಸಭ್ಯ ವರ್ತನೆ

ಈ ಸಂಬಂಧ ಮೃತ ರಮೇಶ ಅವರ ತಂದೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.