ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Drowned: ಭೂತನಾಳ ಕೆರೆಯಲ್ಲಿ ದುರಂತ: ಒಬ್ಬನನ್ನು ಬದುಕಿಸಲು ಹೋಗಿ ಮೂವರು ನೀರುಪಾಲು

ಕುಟುಂಬ ಸಮೇತ ಒಟ್ಟು 14 ಜನರು ವಿಜಯಪುರಕ್ಕೆ ಪ್ರವಾಸಕ್ಕಾಗಿ ಆಗಮಿಸಿ ಭೂತನಾಳ ಕೆರೆಯ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಬಾಲಕ ಮಹಮ್ಮದ್ ಹಯಾತ್ ನೀರಿಗೆ ಇಳಿದಾಗ ಆಕಸ್ಮಿಕವಾಗಿ ಮುಳುಗಿದ್ದಾನೆ. ಬಾಲಕನನ್ನು ರಕ್ಷಿಸಲು ಹೈದರ್ ಪಾಶಾ ಹಾಗೂ ಅಬ್ದುಲ್ ಖುದ್ದುಸ್ ನೀರಿಗೆ ಇಳಿದಾಗ ಮೂವರು ಮುಳುಗಿ ಅನಾಹುತ ಸಂಭವಿಸಿದೆ.

ಭೂತನಾಳ ಕೆರೆ

ವಿಜಯಪುರ, ಏ. 09: ಕೆರೆಯಲ್ಲಿ ಮುಳುಗಿ (drowned) ಬೆಂಗಳೂರು (Bengaluru) ಮೂಲದ ಮೂವರು ಸಾವನ್ನಪ್ಪಿರುವಂತಹ (death) ಘಟನೆ ವಿಜಯಪುರದ (vijayapura) ಐತಿಹಾಸಿಕ ಭೂತನಾಳ ಕೆರೆಯಲ್ಲಿ ನಡೆದಿದೆ. ಮೊಹಮ್ಮದ್ ಹಯಾತ್(12), ಹೈದರ್ ಪಾಷಾ(32) ಮತ್ತು ಅಬ್ದುಲ್ ಖುದ್ದೂಸ್(35) ಮೃತರು. ಸದ್ಯ ಕೆರೆಯಿಂದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಕುಟುಂಬ ಸಮೇತ ಒಟ್ಟು 14 ಜನರು ವಿಜಯಪುರಕ್ಕೆ ಪ್ರವಾಸಕ್ಕಾಗಿ ಆಗಮಿಸಿ ಭೂತನಾಳ ಕೆರೆಯ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಬಾಲಕ ಮಹಮ್ಮದ್ ಹಯಾತ್ ನೀರಿಗೆ ಇಳಿದಾಗ ಆಕಸ್ಮಿಕವಾಗಿ ಮುಳುಗಿದ್ದಾನೆ. ಬಾಲಕನನ್ನು ರಕ್ಷಿಸಲು ಹೈದರ್ ಪಾಶಾ ಹಾಗೂ ಅಬ್ದುಲ್ ಖುದ್ದುಸ್ ನೀರಿಗೆ ಇಳಿದಾಗ ಮೂವರು ಮುಳುಗಿ ಅನಾಹುತ ಸಂಭವಿಸಿದೆ.

ಬಾಲಕ ಮೊಹಮ್ಮದ್ ಹಯಾತ್ ಮತ್ತು ಹೈದರ್ ಕೆರೆಯಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಅಬ್ದುಲ್ ಖುದ್ದೂಸ್ ಸಾವನ್ನಪ್ಪಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಯಾಗಿ ಮೃತದೇಹಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Road Accident: ಬೈಕ್‌ಗೆ ಬೊಲೆರೋ ಡಿಕ್ಕಿ, ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ಸಾವು

ಕೆರೆಯಲ್ಲಿ ಈಜಲು ಹೋದ ಇಬ್ಬರು ಕ್ಯಾಬ್ ಚಾಲಕರ ಸಾವು

ಕೆರೆಯಲ್ಲಿ ಈಜಾಡಲು ಹೋಗಿ ಇಬ್ಬರು ಕ್ಯಾಬ್ ಚಾಲಕರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ರಾಮಸಮುದ್ರ ಕೆರೆಯಲ್ಲಿ ಇತ್ತೀಚೆಗೆ ನಡೆದಿತ್ತು. ಬೆಂಗಳೂರು ಮೂಲದ ಕಿಶೋರ್ ಹಾಗೂ ಗಿರೀಶ್ ಮೃತರು. ಕಿಶೋರ್ ಹಾಗೂ ಗಿರೀಶ್ ಸೇರಿದಂತೆ 8 ಜನ ಸ್ನೇಹಿತರು, ತಮ್ಮ ಎರಡು ಕಾರುಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿ ಗ್ರಾಮದ ಸ್ನೇಹಿತ ಜಗದೀಶ ಮನೆಗೆ ಜಾತ್ರೆಗೆ ಬಂದಿದ್ದರು.

ಜಾತ್ರೆಗೆ ಬಂದದವರು, ಕೆರೆಯಲ್ಲಿ ಈಜಾಡಲು ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ಇಬ್ಬರ ಮೃತದೇಹಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಪೇರೆಸಂದ್ರ ಹಾಗೂ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ.

ಹರೀಶ್‌ ಕೇರ

View all posts by this author