ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಂಪಾಯಿತಲೇ ಪರಾಕ್; ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ದೈವವಾಣಿಯ ಅರ್ಥವೇನು?

Mylara Lingeshwara Karnika 2026: ಜನಪದ ಸಂಸ್ಕೃತಿಯಲ್ಲಿ ದೈವವಾಣಿಗೆ ಅಪಾರವಾದ ಗೌರವವಿದೆ. ಅಂತಹ ದೈವವಾಣಿಗಳಲ್ಲಿ ಪ್ರಸಿದ್ಧವಾದುದು ಮೈಲಾರದ 'ಮೈಲಾರ ಕಾರ್ಣಿಕ'. ಪ್ರತಿ ವರ್ಷ ಭರತ ಹುಣ್ಣಿಮೆಯ ಸಂದರ್ಭದಲ್ಲಿ ಆಚರಣೆ ಮಾಡಲಾಗುತ್ತದೆ. ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ.

ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರ್ಣಿಕ ನುಡಿದ ಗೊರವಯ್ಯ.

ಹೂವಿನಹಡಗಲಿ: ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಡೆಂಕನ ಮರಡಿಯ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ (Mylara Lingeshwara Karnika 2026), ಗೊರವಯ್ಯ ರಾಮಪ್ಪ 18 ಅಡಿ ಬಿಲ್ಲನ್ನೇರಿ "ಸಂಪಾಯಿತಲೇ ಪರಾಕ್" ಎಂದು ಭವಿಷ್ಯವಾಣಿ ನುಡಿದಿದ್ದಾರೆ.

ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ. ಗೊರವಯ್ಯ ರಾಮಪ್ಪ, ಸದ್ದಲೇ... ಕೋಟಿ ಕೋಟಿ ಕೇಳಿರೋ..." ಎಂಬ ಕೂಗು ಕೇಳುತ್ತಿದ್ದಂತೆ ಇಡೀ ಮೈದಾನವೇ ಮೌನಕ್ಕೆ ಶರಣಾಯಿತು. ಸಂಪಾಯಿತಲೇ ಪರಾಕ್ ಎಂಬ ಭವಿಷ್ಯವಾಣಿಯು ರೈತರಿಗೆ ಪ್ರಸಕ್ತ ವರ್ಷದಲ್ಲಿ ಉತ್ತಮವಾದ ಮಳೆ, ಬೆಳೆಯಾಗಿ ನಾಡು ಸಮೃದ್ಧಿಯಾಗಿರಲಿದೆ ಎಂದು ಭಕ್ತರ ವಿಶ್ಲೇಷಣೆಯಾಗಿದೆ.

Mylaralingeshwara Karnikotsava (1)

ಇದು ಸಂಸ್ಕೃತಿ, ಶ್ರದ್ಧೆ, ಭಕ್ತಿ, ಹಾಗೂ ಪರಂಪರೆಯ ಸಂಕೇತವಾಗಿದೆ. ಜನಪದ ಸಂಸ್ಕೃತಿಯಲ್ಲಿ ದೈವವಾಣಿಗೆ ಅಪಾರವಾದ ಗೌರವವಿದೆ. ಅಂತಹ ದೈವವಾಣಿಗಳಲ್ಲಿ ಪ್ರಸಿದ್ಧವಾದುದು ಮೈಲಾರದ 'ಮೈಲಾರ ಕಾರ್ಣಿಕ'. ಪ್ರತಿ ವರ್ಷ ಭರತ ಹುಣ್ಣಿಮೆಯ ಸಂದರ್ಭದಲ್ಲಿ ಆಚರಣೆ ಮಾಡಲಾಗುತ್ತದೆ. ಈ ಉತ್ಸವವು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ, ಅದು ರೈತಾಪಿ ವರ್ಗದ ಭವಿಷ್ಯದ ದಿಕ್ಸೂಚಿಯಾಗಿದೆ.

Gold theft: ಕರಗ ಖ್ಯಾತಿಯ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಚಿನ್ನ ಕಳವು, ಅಧಿಕಾರಿ ಅಮಾನತು

ಈ ಸಂದರ್ಭದಲ್ಲಿ ಪಾರಂಪರಿಕ ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು. ದೈವವಾಣಿ ಕೇಳಲು ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು.