ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರ್‌ಎಸ್‌ಎಸ್ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದೆ? ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

Priyank Kharge attacks the RSS: 80ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ವೇಳೆ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹುತಾತ್ಮರಾದ 500 ಕಾಂಗ್ರೆಸ್ ಸದಸ್ಯರ ಪಟ್ಟಿಯನ್ನು ತಾನು ನೀಡಬಲ್ಲೆ. ಅಂತಹ 50 ಮಂದಿಯ ಪಟ್ಟಿಯನ್ನು ನೀಡಲಿ ಎಂದು ಆರ್‌ಎಸ್‌ಎಸ್‌ಗೆ ಸವಾಲು ಹಾಕಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ (ಸಂಗ್ರಹ ಚಿತ್ರ)

ಬೆಂಗಳೂರು, ಆ. 15: 80ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ ವೇಳೆ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮತ್ತೆ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಅದರ ಪಾತ್ರವನ್ನು ಪ್ರಶ್ನಿಸಿದರು. ಬ್ರಿಟಿಷ್ ಆಳ್ವಿಕೆಯ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸದಸ್ಯರನ್ನು ಹೆಸರಿಸಲು ಸವಾಲು ಹಾಕಿದರು. “ಆರ್‌ಎಸ್‌ಎಸ್‌ಗೆ (RSS) ನನ್ನ ಒಂದೇ ಒಂದು ಪ್ರಶ್ನೆ ಇದೆ. ನೀವು ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದೀರಿ ಎಂದು ತಿಳಿಸಿ” ಅಂತಾ ಖರ್ಗೆ ಕೇಳಿದರು.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹುತಾತ್ಮರಾದ 500 ಕಾಂಗ್ರೆಸ್ ಸದಸ್ಯರ ಪಟ್ಟಿಯನ್ನು ತಾನು ನೀಡಬಲ್ಲೆ. ಅಂತಹ 50 ಹೆಸರನ್ನು ನೀಡಲಿ ಸಾಕು ಎಂದು ಆರ್‌ಎಸ್‌ಎಸ್‌ಗೆ ಸವಾಲು ಹಾಕಿದರು. ವಿಭಜನೆಯ ನಂತರ ಕೋಮು ಉದ್ವಿಗ್ನತೆಗೆ ಆರ್‌ಎಸ್‌ಎಸ್ ಕೊಡುಗೆ ನೀಡಿದೆ ಎಂದು ಖರ್ಗೆ ಆರೋಪಿಸಿದರು. ನಂತರ ಭುಗಿಲೆದ್ದ ಗಲಭೆಯಲ್ಲಿ ಜನರನ್ನು ರಕ್ಷಿಸುವಲ್ಲಿ ಸಂಘಟನೆಯು ಯಾವ ಪಾತ್ರವನ್ನು ವಹಿಸಿದೆ ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್ ಸಂಸ್ಥೆಯ ಸಾಂಸ್ಥಿಕ ಸ್ಥಿತಿಗತಿಯನ್ನು ಪ್ರಶ್ನಿಸಿದ ಖರ್ಗೆ, ತಮ್ಮ ಪ್ರಕಾರ ಅದು ನೋಂದಾಯಿತ ಸಂಸ್ಥೆಯಲ್ಲದ ಕಾರಣ ಅದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. “ಆರ್‌ಎಸ್‌ಎಸ್ ಅನ್ನು ನಿಷೇಧಿಸಲು ಸಾಧ್ಯವಿಲ್ಲ. ಸಂತೋಷ್ ಮತ್ತು ಮೋಹನ್ ಭಾಗವತ್ ಹೇಳಿದ್ದು ನಿಜ. ಅವರನ್ನು ನಿಷೇಧಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ನೋಂದಾಯಿಸಲ್ಪಟ್ಟಿಲ್ಲ. ನಾನು ನಿಮ್ಮ ಸಂಘಟನೆಯನ್ನು ನಿಷೇಧಿಸಬೇಕಾದರೆ, ಮೊದಲು ನಿಮ್ಮ ಸಂಘಟನೆಯನ್ನು ನೋಂದಾಯಿಸಿಕೊಳ್ಳಬೇಕಲ್ಲವೇ?” ಎಂದು ವ್ಯಂಗ್ಯವಾಡಿದರು.

80ನೇ ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಡಿ ಕೆ ಶಿವಕುಮಾರ್‌ ಮಾಡಿದ ಪ್ರಮುಖ ಘೋಷಣೆ ಏನು?

ಸರ್ಕಾರಿ ಆವರಣಗಳು ಮತ್ತು ಸಾರ್ವಜನಿಕ ಆಸ್ತಿಗಳನ್ನು ಸಂಘಟನೆಗಳು ಬಳಸುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಕಾನೂನಿನ ಕುರಿತು ಮತ್ತೊಂದು ರಾಜಕೀಯ ಸಂಘರ್ಷ ನಡೆಯುತ್ತಿರುವ ನಡುವೆಯೇ ಪ್ರಿಯಾಂಕ್ ಖರ್ಗೆ ಈ ಹೇಳಿಕೆ ನೀಡಿದ್ದಾರೆ. ಈ ಕ್ರಮವು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಆರ್‌ಎಸ್‌ಎಸ್‌ ಶಾಖೆಗಳಂತಹ ಚಟುವಟಿಕೆಗಳ ಮೇಲೂ ಪರಿಣಾಮ ಬೀರಬಹುದು.

ಈ ಮಧ್ಯೆ, ರಾಜ್ಯದ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿ ಬಳಕೆ ನಿಯಂತ್ರಣ ಮಸೂದೆ, 2026 ಅನ್ನು ಖರ್ಗೆ ಸಮರ್ಥಿಸಿದ್ದಾರೆ. ಇದು ನಿರ್ದಿಷ್ಟವಾಗಿ ಆರ್‌ಎಸ್‌ಎಸ್ ಅನ್ನು ಗುರಿಯಾಗಿರಿಸಿಕೊಂಡಿದೆ ಎಂಬ ಬಿಜೆಪಿಯ ಆರೋಪಗಳನ್ನು ಅವರು ತಿರಸ್ಕರಿಸಿದರು.

ಪ್ರಸ್ತಾವಿತ ಕಾನೂನಿನಡಿ, ಸಂಘಟನೆಗಳು ನೋಂದಾಯಿತವಾಗಿರಲಿ ಅಥವಾ ಇಲ್ಲದಿರಲಿ, ಸಾರ್ವಜನಿಕ ಆಸ್ತಿ ಅಥವಾ ಸರ್ಕಾರಿ ಆವರಣದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೊದಲು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ.

ಪ್ರಸ್ತಾವಿತ ಕಾನೂನಿನ ನಿಬಂಧನೆಗಳನ್ನು ಪರಿಶೀಲಿಸುವ ಮೊದಲು ಬಿಜೆಪಿ ಅದನ್ನು ಏಕೆ ವಿರೋಧಿಸುತ್ತಿದೆ? ಆ ಮಸೂದೆಯಲ್ಲಿ ಯಾವುದೇ ಸಂಸ್ಥೆ, ಸಂಘ ಅಥವಾ ರಾಜಕೀಯ ಪಕ್ಷದ ಹೆಸರು ಉಲ್ಲೇಖಿಸಲಾಗಿದೆಯೇ? ಎಂದು ಖರ್ಗೆ ಪ್ರಶ್ನಿಸಿದರು. ಸಾರ್ವಜನಿಕ ಸ್ಥಳಗಳ ಬಳಕೆಯನ್ನು ನಿಯಂತ್ರಿಸುವ ಸಂಬಂಧ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನೀಡಿರುವ ಈಗಾಗಲೇ ಇರುವ ನಿರ್ದೇಶನಗಳಿಗೆ ಕಾನೂನುಬದ್ಧ ಬೆಂಬಲ ನೀಡುವುದು ಈ ಮಸೂದೆಯ ಉದ್ದೇಶ ಎಂದರು.

"ಹರ್ ಘರ್ ತಿರಂಗಾ-ಹರ್ ಮನ್ ತಿರಂಗಾ"ಕ್ಕೆ ಪ್ರೇರಣೆಯಾದ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ

ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಹೇಳಿದ್ದೇನು?

ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಶುಕ್ರವಾರ ಮಾತನಾಡಿ, ಆರ್‌ಎಸ್‌ಎಸ್ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಔಪಚಾರಿಕ ನೋಂದಣಿ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದರು. ಸಂಘಟನೆಯು ಲಕ್ಷಾಂತರ ಜನರ ನಂಬಿಕೆಯ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ವಾದಿಸಿದ್ದರು. ಬೆಂಗಳೂರಿನಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಭಜನೆಯ ಸಮಯದಲ್ಲಿ ಆರ್‌ಎಸ್‌ಎಸ್ ಹಿಂದೂಗಳ ಬೆಂಬಲಕ್ಕೆ ನಿಂತಿತ್ತು. ಔಪಚಾರಿಕವಾಗಿ ನೋಂದಾಯಿಸಲ್ಪಡದೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿತ್ತು ಎಂದು ಹೇಳಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ದೊರೆತಿದ್ದು ಕೇವಲ ಉಪ್ಪಿನ ಸತ್ಯಾಗ್ರಹ ಅಥವಾ ಚರಕ ನೂಲುವಿಕೆಯಂತಹ ಚಳುವಳಿಗಳ ಮೂಲಕವಲ್ಲ. ಬದಲಾಗಿ ಸಾವಿರಾರು ಕ್ರಾಂತಿಕಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಮೂಲಕ. ಸ್ವಾತಂತ್ರ್ಯವನ್ನು ಭಾರತಕ್ಕೆ ಉಡುಗೊರೆಯಾಗಿ ನೀಡಲಾಗಿಲ್ಲ ಎಂದು ಸಂತೋಷ್ ವಿವರಿಸಿದ್ದರು.