ಯಾದಗಿರಿ, ಫೆ.28: ಇಂದಿನಿಂದ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಯಾದಗಿರಿ ಜಿಲ್ಲೆಯಲ್ಲಿ (Yadgir News) 20 ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಆರಂಭವಾಗಿದೆ. 11,760 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರಗೆ ಪರೀಕ್ಷೆ ನಡೆಯಿತು. ಆದರೆ, ಹಾಲ್ ಟಿಕೆಟ್‌ನಲ್ಲಿ ಪರೀಕ್ಷಾ ಕೇಂದ್ರದ ವಿಳಾಸ ತಪ್ಪಾಗಿ ಮುದ್ರಣವಾಗಿದ್ದರಿಂದ ಬೆಳಗ್ಗೆ ವಿದ್ಯಾರ್ಥಿಗಳು ಪರದಾಡುವಂತಾಯಿತು.
ಇಂದು ಕನ್ನಡ ಹಾಗೂ ಅರೇಬಿಕ್ ವಿಷಯದ ಪರೀಕ್ಷೆ ನಡೆಯಿತು. ಆದರೆ ಪಿಯು ಪರೀಕ್ಷೆಯಲ್ಲಿ ಪಿಯು ಬೋರ್ಡ್‌ನಿಂದ ಮಹಾ ಎಡವಟ್ಟೊಂದಾಗಿದ್ದು, ಪರೀಕ್ಷೆ ಕೇಂದ್ರದ ವಿಳಾಸವನ್ನೇ ತಪ್ಪಾಗಿ ಮುದ್ರಿಸಿದ್ದರಿಂದ, ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರ ಹುಡುಕಲು ಅಲೆದಾಡಿದ್ದಾರೆ.
ಯಾದಗಿರಿಯ ಸಬಾ ಪಿಯು ಕಾಲೇಜು ಪರೀಕ್ಷೆ ಕೇಂದ್ರದ ವಿಳಾಸ ತಪ್ಪಾಗಿ ಮುದ್ರಣವಾಗಿದೆ. ನಗರದ ಲುಂಬಿನಿ ಗಾರ್ಡನ್ ಸಮೀಪ ಪರೀಕ್ಷಾ ಕೇಂದ್ರವಾದ ಸಬಾ ಪಿಯು ಕಾಲೇಜು ಇದೆ. ಆದರೆ, ಹಾಲ್ ಟಿಕೇಟ್‌ನಲ್ಲಿ ಕಾಲೇಜಿನ (ಕೇಂದ್ರ) ವಿಳಾಸ ಎರಡು ಕಿ.ಮೀ. ದೂರದ ಗಂಜ್ ರಸ್ತೆ ಎಂದು ನಮೂದಿಸಲಾಗಿದೆ. ಆ ಮಾರ್ಗದಲ್ಲಿ ಪರೀಕ್ಷೆ ಕೇಂದ್ರವೇ ಇಲ್ಲ, ಆದರೆ ವಿಳಾಸ ತಪ್ಪಾಗಿ ಮುದ್ರಣವಾಗಿ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಜ್ ಪ್ರದೇಶದಲ್ಲಿ ಪರೀಕ್ಷೆ ಕೇಂದ್ರ ಹುಡುಕಿ, ಸ್ಥಳೀಯರಿಂದ ವಿಳಾಸ ಕೇಳಿ ಸಬಾ ಪರೀಕ್ಷೆ ಕೇಂದ್ರದತ್ತ ವಿದ್ಯಾರ್ಥಿಗಳು ತೆರಳಿ ಪರೀಕ್ಷೆಗೆ ಹಾಜರಾದ ಘಟನೆ ನಡೆದಿದೆ. ಕೆಲವರಿಗೆ ಪರೀಕ್ಷೆ ಕೇಂದ್ರ ಸಿಗದೇ ಪರೀಕ್ಷೆಯಿಂದ ಮಿಸ್ ಆಗುವ ಸಾಧ್ಯತೆಯೂ ಹೆಚ್ಚಾಗಿತ್ತು. ಆದರೆ ಸ್ಥಳೀಯರ ಸಹಾಯದಿಂದ ಸಬಾ ಕಾಲೇಜಿನ ದಾರಿ ಸಿಕ್ಕಂತಾಗಿದೆ.
BESCOM Recruitment: ಬೆಸ್ಕಾಂನಲ್ಲಿದೆ ಉದ್ಯೋಗಾವಕಾಶ; ಬಿಇ, ಡಿಪ್ಲೊಮಾ, ಪದವೀಧರರು ಅಪ್ಲೈ ಮಾಡಿ
ವಿಳಾಸ ತಪ್ಪಾಗಿದ್ದರಿಂದ ಪಿಯು ಬೋರ್ಡ್ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತಪಡಿಸಿದ್ದು, ಪರೀಕ್ಷೆ ಕೇಂದ್ರ ಹುಡುಕಿ ಅಲೆದಾಡುತ್ತಿದ್ದೇವೆ, ಓದಿದ್ದು ಕೂಡ ಮರೆತು ಹೋಗುತ್ತಿದೆ ಎಂದು ವಿದ್ಯಾರ್ಥಿ ಮಶೇಪ್ಪ ಹೇಳಿದ್ದಾನೆ.