Raju Gowda: ''ಸರಿಯಾದ ತನಿಖೆಯಾದರೆ ರಾಜ್ಯ ಸರ್ಕಾರದ ಶೇ. 80ರಷ್ಟು ಜನಪ್ರತಿನಿಧಿಗಳು ಜೈಲಿಗೆ ಹೋಗ್ತಾರೆʼʼ: ರಾಜು ಗೌಡ
ʼʼಒಂದು ದಿನ ವಿಧಾನಸೌಧವನ್ನೇ ಜೈಲು ಮಾಡುವ ಕಾಲ ಬರುತ್ತದೆ. ಈ ಸರ್ಕಾರದಲ್ಲಿ ಒಬ್ರು, ಇಬ್ರು ಜೈಲಿಗೆ ಹೋಗುವ ಪರಿಸ್ಥಿತಿ ಇಲ್ಲ. ಸರಿಯಾದ ತನಿಖೆಯಾದರೆ ಈ ಸರ್ಕಾರದಲ್ಲಿ ಶೇ. 80ರಷ್ಟು ಜನಪ್ರತಿನಿಧಿಗಳು ಜೈಲಿಗೆ ಹೋಗ್ತಾರೆʼʼ ಎಂದು ಮಾಜಿ ಸಚಿವ ರಾಜು ಗೌಡ ವಾಗ್ದಾಳಿ ನಡೆಸಿದರು.

-

ಯಾದಗಿರಿ: ಭೋವಿ ಅಭಿವೃದ್ಧಿ ನಿಗಮ (Karnataka Bhovi Development Corporation) ಹಗರಣ ವಿಚಾರದಲ್ಲಿ ಮಾಜಿ ಸಚಿವ ರಾಜು ಗೌಡ (Raju Gowda) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಯಾದಗಿರಿಯಲ್ಲಿ ಮಾತನಾಡಿದ ಅವರು, ʼʼಒಂದು ದಿನ ವಿಧಾನಸೌಧವನ್ನೇ ಜೈಲು ಮಾಡುವ ಕಾಲ ಬರುತ್ತದೆ. ಈ ಸರ್ಕಾರದಲ್ಲಿ ಒಬ್ರು, ಇಬ್ರು ಜೈಲಿಗೆ ಹೋಗುವ ಪರಿಸ್ಥಿತಿ ಇಲ್ಲ. ಸರಿಯಾದ ತನಿಖೆಯಾದರೆ ಈ ಸರ್ಕಾರದಲ್ಲಿ ಶೇ. 80ರಷ್ಟು ಜನಪ್ರತಿನಿಧಿಗಳು ಜೈಲಿಗೆ ಹೋಗ್ತಾರೆʼʼ ಎಂದು ವಾಗ್ದಾಳಿ ನಡೆಸಿದ್ದಾರೆ.
ʼʼಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಂತೆ ವಿಶೇಷ ಜೈಲು ಮಾಡುವ ಪರಿಸ್ಥಿತಿ ಬಂದರೂ ಬರಬಹುದು. ರಾಜ್ಯ ಸರ್ಕಾರದ ಎಲ್ಲ ನಿಗಮಗಳಲ್ಲಿ ಹಗರಣ ನಡೆದಿದೆ. ಹಲವು ನಿಗಮದಲ್ಲಿ ಹಗರಣವಾಗಿದ್ದು, ಈ ಬಗ್ಗ ತನಿಖೆ ನಡೆಯಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಚಾರ ಮಿತಿ ಮೀರಿದೆʼʼ ಎಂದು ದೂರಿದ್ದಾರೆ.
ʼʼವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ ಎಸ್ಐಟಿ ತನಿಖೆಯಲ್ಲಿ ಕ್ಲಿನ್ ಚಿಟ್ ಸಿಕ್ಕಿದೆ. ಭೋವಿ ನಿಗದಂತೆ ಹುಡುಕುತ್ತ ಹೊದರೆ ಎಲ್ಲ ನಿಗಮದಲ್ಲಿ ಹಗರಣ ಎದ್ದು ಕಾಣುತ್ತದೆ. ಹೀಗಾಗಿ ವಿವಿಧ ನಿಗಮಗಳ ತನಿಖೆ ಆಗಬೇಕುʼʼ ಎಂದು ರಾಜುಗೌಡ ಆಗ್ರಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: KN Rajanna: ಸಿದ್ದರಾಮಯ್ಯ ಇರುವವರೆಗೂ ನಾನು ಕಾಂಗ್ರೆಸ್‌ನಲ್ಲೇ: ಕೆಎನ್ ರಾಜಣ್ಣ
ಬಾಲಕೃಷ್ಣ ಹೇಳಿಕೆ ವಿಚಾರದ ಬಗ್ಗೆ ಏನಂದ್ರು?
ಮಾಜಿ ಸಚಿವ ರಾಜಣ್ಣ ಬಿಜೆಪಿಗೆ ಹೋಗ್ತಾರೆ ಎಂಬ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ರಾಜು ಗೌಡ, ʼʼಕಾಂಗ್ರೆಸ್‌ನಲ್ಲಿ ಎಸ್‌ಸಿ-ಎಸ್‌ಟಿ ಪ್ರಭಾವಿ ಸಚಿವ, ಶಾಸಕರನ್ನು ತುಳಿಯುವ ಕೆಲಸ ಆಗ್ತಿದೆ. ರಾಜಣ್ಣ ಒಬ್ಬ ಪ್ರಭಾವಶಾಲಿ ರಾಜಕಾರಣಿ, ತುಮಕೂರು ಭಾಗದಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದಾರೆ. ಅವರೊಬ್ಬ ಪವರ್ ಫುಲ್ ನಾಯಕ. ಹೇಗಾದರೂ ಮಾಡಿ ಮುಗಿಸಬೇಕು ಎನ್ನುವ ಪ್ಲ್ಯಾನ್ ಮಾಡಿ ಮುಗಿಸಿದ್ದಾರೆ. ಬಾಲಕೃಷ್ಣ ಹಿರಿಯ ಶಾಸಕ. ಅವರು ಯಾವ ತರಹ ಹೇಳಿಕೆ ಕೊಡ್ತಾರೆ ಒಂದು ಅರ್ಥವಾಗ್ತಿಲ್ಲʼʼ ಎಂದರು.
ʼʼಕೆ.ಎನ್.ರಾಜಣ್ಣ ಬಿಜೆಪಿ ಹೋಗ್ತಾರೆ ಎಂಬ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆ ಹಿಂದೆ ಮಹಾ ನಾಯಕನ ಕೈವಾಡವಿದೆ. ಬಾಲಕೃಷ್ಣ ಅವರ ಹೆಗಲ ಮೇಲೆ ಇಟ್ಟು ಮಹಾನಾಯಕರು ಗೋಲಿ ಹೊಡೆಯುತ್ತಿದ್ದಾರೆ. ನೇರವಾಗಿ ನಾನು ಎಲ್ಲದಕ್ಕೂ ಉತ್ತರ ಕೊಡಬಾರದು. ಮೊದಲು ಬಾಲಕೃಷ್ಣ ಅವರಿಗೆ ಬ್ರೇನ್ ಮ್ಯಾಪಿಂಗ್ ಮಾಡಬೇಕು. ಬಾಲಕೃಷ್ಣ ನನ್ನ ಒಳ್ಳೆಯ ಸ್ನೇಹಿತ. ಅವರಿಗೆ ಬಹಳ ವರ್ಷದಿಂದ ಬಿಡಿಎ ಚೇರ್‌ಮ್ಯಾನ್ ಅಥವಾ ಸಚಿವ ಆಗಬೇಕು ಎಂಬ ಕನಸಿದೆ. ಹೀಗಾದ್ರು ಮಾತಾಡಿದ್ರೆ ಸಚಿವಗಿರಿ ಸಿಗಬಹುದು ಎಂದು ತಿಳಿದುಕೊಂಡಿದ್ದಾರೆ. ಬಾಲಣ್ಣ ಇದು ಒಳ್ಳೆಯದಲ್ಲ, ಇವತ್ತು ರಾಜಣ್ಣನಿಗೆ ಬಂದ ಪರಿಸ್ಥಿತಿ, ನಾಳೆ ನಿಮಗೂ ಬರುತ್ತದೆʼʼ ಎಂದು ತಿಳಿಸಿದ್ದಾರೆ.