Yadagiri news: ಗಬ್ಬು ನಾರುವ ಚರಂಡಿ ಮಕ್ಕಳಿಂದ ಕ್ಲೀನ್ ಮಾಡಿಸಿದ ಹೆಡ್‌ಮಾಸ್ಟರ್!
ಈ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕ್ಯಾತನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಾಲಾ ಆವರಣದ ಬೋರ್ ವೆಲ್ ಬಳಿ ಪಾಚಿಗಟ್ಟಿ ನಾರುತ್ತಿದ್ದ ಚರಂಡಿಯನ್ನು ಮಕ್ಕಳ ಮೂಲಕ ಮುಖ್ಯ ಶಿಕ್ಷಕ ಸ್ವಚ್ಛಗೊಳಿಸಿದ್ದಾರೆ.

ಕ್ಯಾತನಾಳದಲ್ಲಿ ಮಕ್ಕಳಿಂದ ಚರಂಡಿ ಕ್ಲೀನಿಂಗ್

ಯಾದಗಿರಿ: ಪೆನ್ ಹಿಡಿದು ಬರೆಯಬೇಕಾದ ಕೈಗಳಲ್ಲಿ ಸಲಿಕೆ ಗುದ್ದಲಿ ಹಿಡಿಸಿದ ಹೆಡ್ ಮಾಸ್ಟರ್ ಒಬ್ಬರು, ಗಬ್ಬು ನಾರುವ ಚರಂಡಿಯನ್ನು (drain cleaning) ಮಕ್ಕಳ ಕೈಯಲ್ಲಿ ಕ್ಲೀನ್ (cleaning) ಮಾಡಿಸಿದ್ದಾರೆ. ಮುಖ್ಯೋಪಾಧ್ಯಾಯರ (Head master) ಈ ಕೆಲಸ ಇದೀಗ ಮಕ್ಕಳ ಪೋಷಕರ ಹಾಗೂ ಗ್ರಾಮಸ್ಥರಿಂದ ಆಕ್ರೋಶಕ್ಕೆ ತುತ್ತಾಗಿದೆ. ಎಲ್ಲರೂ ಸೇರಿ ಹೆಡ್ ಮಾಸ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕ್ಯಾತನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಾಲಾ ಆವರಣದ ಬೋರ್ ವೆಲ್ ಬಳಿ ಪಾಚಿಗಟ್ಟಿ ನಾರುತ್ತಿದ್ದ ಚರಂಡಿಯನ್ನು ಮಕ್ಕಳ ಮೂಲಕ ಮುಖ್ಯ ಶಿಕ್ಷಕ ಸ್ವಚ್ಛಗೊಳಿಸಿದ್ದಾರೆ. ಮುಖ್ಯ ಶಿಕ್ಷಕ ಶರಣಪ್ಪ ಎಂಬವರು ಮುಂದೆ ನಿಂತು ಮಕ್ಕಳ ಕೈಯಿಂದ ಗಬ್ಬು ನಾರುತ್ತಿರುವ ಚರಂಡಿ ಕ್ಲೀನ್ ಮಾಡಿಸಿದ್ದು, ಗ್ರಾಮಸ್ಥರಿಂದ ಹಿಗ್ಗಾಮಗ್ಗಾ ತರಾಟೆಗೀಡಾಗಿದ್ದಾರೆ.
"ಶಾಲಾ ಮಕ್ಕಳ ಕೈಯಿಂದ ಚರಂಡಿ ಸ್ವಚ್ಚಗೊಳಿಸ್ತೀರಾ? ಬೇಕಾದ್ರೆ ನೀವೆ ಚರಂಡಿ ಕ್ಲೀನ್ ಮಾಡಿ, ಮಕ್ಕಳು ಮಾಡೋದು ಬೇಡ. ಬೋರ್‌ವೆಲ್ ಬಳಿ ಚರಂಡಿ ನೀರು ನಿಂತ್ರೆ ಪಂಚಾಯತ್ ಸದಸ್ಯರ ಗಮನಕ್ಕೆ ತರಬೇಕು. ಅವರು ಅಧಿಕಾರಿಗಳಿಗೆ ಹೇಳಿ ಗ್ರಾ.ಪಂ ಸಿಬ್ಬಂದಿಗಳಿಂದ ಕ್ಲೀನ್ ಮಾಡಿಸ್ತಿದ್ರು" ಎಂದು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ಕೊಳಚೆ ತೆಗೆಸಿದ ಶಿಕ್ಷಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿದ್ಯಾರ್ಥಿಗಳಿಂದ ಚರಂಡಿ ಸ್ವಚ್ಚಗೊಳಿಸಿದ ಹೆಡ್ ಮಾಸ್ಟರ್ ಶರಣಪ್ಪ ಅವರನ್ನು ಸಸ್ಪೆಂಡ್ ಮಾಡುವಂತೆ ಕೆಲವು ಗ್ರಾಮಸ್ಥರು ಆಗ್ರಹಿಸಿದ್ದಾರೆ.