ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಎರಡನೇ ದಿನವೂ ಯೂಟ್ಯೂಬರ್‌ ಮೊಹಮ್ಮದ್‌ ಸಮೀರ್‌ಗೆ ಪೊಲೀಸ್‌ ಗ್ರಿಲ್‌

Youtuber Sameer: ವಿಡಿಯೋ ಎಡಿಟಿಂಗ್‌ಗೆ ಬಳಸಿದ ಕಂಪ್ಯೂಟರ್ ಹಾಗೂ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಮತ್ತೆರಡು ಪ್ರಕರಣಗಳು ಸಮೀರ್ ಮೇಲಿದ್ದು, ಖಾಸಗಿ ವಾಹಿನಿ ವರದಿಗಾರನ ಮೇಲೆ ಹಲ್ಲೆ ನಡೆಸಿದ ಸಂಬಂಧ ಪ್ರಶ್ನೆ ಕೇಳಿದ್ದಾರೆ. ಬೆನಕ ಆಸ್ಪತ್ರೆ ಬಳಿ ಗಲಾಟೆ ಕೇಸ್ ತನಿಖೆ ಬಾಕಿ ಇದೆ.

ಎರಡನೇ ದಿನವೂ ಯೂಟ್ಯೂಬರ್‌ ಮೊಹಮ್ಮದ್‌ ಸಮೀರ್‌ಗೆ ಪೊಲೀಸ್‌ ಗ್ರಿಲ್‌

ಹರೀಶ್‌ ಕೇರ ಹರೀಶ್‌ ಕೇರ Aug 25, 2025 12:45 PM

ಧರ್ಮಸ್ಥಳ: ಧರ್ಮಸ್ಥಳದ (Dharmasthala Case) ಬಗ್ಗೆ ಎಐ ವೀಡಿಯೋ ಮೂಲಕ ಅಪಪ್ರಚಾರ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಮೊಹಮ್ಮದ್‌ ಸಮೀರ್ (youtuber sameer) ಸತತ ಎರಡನೇ ದಿನವೂ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾನೆ. ನಿನ್ನೆ ಮೊಹಮ್ಮದ್‌ ಸಮೀರ್‌ನನ್ನು ಐದು ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದ್ದು, ಇಂದು ಮತ್ತೆ ವಿಚಾರಣೆಗೆ ಕರೆದಿದ್ದಾರೆ. ನಿನ್ನೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಸುಬ್ಬಾಪುರ್ ಮಠ್ ಅವರ ನೇತೃತ್ವದಲ್ಲಿ ಸತತ 5 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.

ದೊಂಬಿ ಮಾಡುವ ಉದ್ದೇಶದಿಂದ ವಿಡಿಯೋ ಮಾಡಿದ ಆರೋಪದಲ್ಲಿ ಸುಮೋಟೋ ಕೇಸ್‌ ದಾಖಲಿಸಿಕೊಂಡಿದ್ದ ಪೊಲೀಸರು, ಶುಕ್ರವಾರ ಸಮೀರ್‌ ಬಂಧನಕ್ಕೆ ಮುಂದಾಗಿದ್ದರು. ಆದರೆ, ನಿರೀಕ್ಷಣಾ ಜಾಮೀನು ಪಡೆದಿದ್ದ ಸಮೀರ್‌ ಪರಾರಿಯಾಗಿದ್ದ. ಪೊಲೀಸರು ಶನಿವಾರ ಆತನ ಬೆಂಗಳೂರು ಹಾಗೂ ಬಳ್ಳಾರಿ ನಿವಾಸಕ್ಕೆ ತೆರಳಿ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದಿದ್ದರು. ನಿನ್ನೆ ಮೂವರು ವಕೀಲರ ಸಮೇತ ಸಮೀರ್‌ ದಾಖಲೆ ಹಿಡಿದು ವಿಚಾರಣೆಗೆ ಬಂದಿದ್ದ.

ಪೊಲೀಸರು ಆತನಿಂದಲೇ ವಾಯ್ಸ್‌ ಓವರ್‌ ಕೊಡಲು ಹೇಳಿದ್ದಾರೆ. ವಿಡಿಯೋದ ಒಂದೇ ಸ್ಕ್ರಿಪ್ಟನ್ನು ಮೂರು ಬಾರಿ ಓದಿಸಿ ಧ್ವನಿ ಸಂಗ್ರಹ ಮಾಡಿಕೊಂಡ ಪೊಲೀಸರು ಅದನ್ನ ಎಫ್ಎಸ್‌ಎಲ್‌ಗೆ ಕಳಿಸಲಿದ್ದಾರೆ. ವಿಡಿಯೋ ಎಡಿಟಿಂಗ್‌ಗೆ ಬಳಸಿದ ಕಂಪ್ಯೂಟರ್ ಹಾಗೂ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಮತ್ತೆರಡು ಪ್ರಕರಣಗಳು ಸಮೀರ್ ಮೇಲಿದ್ದು, ಖಾಸಗಿ ವಾಹಿನಿ ವರದಿಗಾರನ ಮೇಲೆ ಹಲ್ಲೆ ನಡೆಸಿದ ಸಂಬಂಧ ಪ್ರಶ್ನೆ ಕೇಳಿದ್ದಾರೆ. ಬೆನಕ ಆಸ್ಪತ್ರೆ ಬಳಿ ಗಲಾಟೆ ಕೇಸ್ ತನಿಖೆ ಬಾಕಿ ಇದೆ.

ಎಐ ವಿಡಿಯೋದಲ್ಲಿ ಹೇಳಿದ ವಿಷಯಗಳ ಬಗ್ಗೆ ದಾಖಲೆ ಇದೆಯಾ? ವಿಡಿಯೋದಲ್ಲಿ ಹೇಳಿದ ವಿಷಯಗಳ ಸತ್ಯಾಸತ್ಯತೆ ಹೇಗೆ ದೃಢಪಡಿಸಿದ್ದೀರಿ? ಜನರಲ್ಲಿ ಗೊಂದಲ ಅಥವಾ ದ್ವೇಷ ಹುಟ್ಟಿಸಲು ಉದ್ದೇಶಿಸಿದ್ದೀರಾ? ಎಐ ವಿಡಿಯೋ ಮಾಡಿರುವ ಉದ್ದೇಶ ಏನು? ಈ ವಿಷಯದ ಬಗ್ಗೆ ವಿಡಿಯೋ ಮಾಡಲು ಪ್ರೇರೇಪಿಸಿದ್ಯಾರು? ಧೂತ ಚಾನಲ್‌ ಜೊತೆ ಇನ್ನೂ ಯಾರು ಭಾಗಿಯಾಗಿದ್ದಾರೆ? ವಿಡಿಯೋ ಮಾಡಲು ಹಣ ಅಥವಾ ಬೆಂಬಲ ದೊರಕಿದೆಯೇ? ಸಾಕ್ಷಿದಾರನನ್ನು ಮೊದಲ ಬಾರಿ ಯಾವಾಗ, ಎಲ್ಲಿ ಭೇಟಿಯಾದೆ? ಭೇಟಿಯ ಸಂದರ್ಭದ ದಾಖಲೆ, ಸಾಕ್ಷಿ ನಿನ್ನ ಬಳಿ ಇದೆಯಾ? ಸಾಕ್ಷಿದಾರನಿಂದ ನೀನು ಯಾವ ಯಾವ ಮಾಹಿತಿಯನ್ನು ಪಡದೆ? ಸಾಕ್ಷಿದಾರ, ನಿಮ್ಮ ನಡುವೆ ಹಣಕಾಸು ವ್ಯವಹಾರ ನಡೆದಿದೆಯೇ? ಸಾಕ್ಷಿದಾರನ ಸಂಪರ್ಕ ನಿಮಗೆ ಹೇಗೆ ಸಿಕ್ಕಿತು- ಮೊದಲಾದ 45ಕ್ಕೂ ಅಧಿಕ ಪ್ರಶ್ನೆಗಳನ್ನು ಹಾಕಿ ಸಮೀರ್‌ನನ್ನು ತನಿಖೆಗೊಳಪಡಿಸಲಾಗಿದೆ.

ಇದನ್ನೂ ಓದಿ: Dharmasthala Case: ಯೂಟ್ಯೂಬರ್‌ ಸಮೀರ್‌ ಮನೆ ಸುತ್ತುವರಿದ ಪೊಲೀಸರು, ಸಮೀರ್‌ ಪರಾರಿ