ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BIFFes: 17ನೇ ಬೆಂಗಳೂರು ಫಿಲ್ಮ್‌ಫೆಸ್ಟ್‌ಗೆ ಸಿದ್ಧತೆ ಪ್ರಾರಂಭ ; ಸ್ಪರ್ಧಾ ವಿಭಾಗಕ್ಕೆ ಸಿನಿಮಾಗಳ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

BIFFes: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ. ಕರ್ನಾಟಕ ಸರ್ಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಗಳ ಮೂಲಕ, ಜನವರಿ 29 ರಿಂದ ಫೆಬ್ರವರಿ 6, 2026 ವರೆಗೆ ಚಲನಚಿತ್ರೋತ್ಸವನ್ನು ಆಯೋಜಿಸಿದೆ.17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡ, ಭಾರತೀಯ ಮತ್ತು ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗಕ್ಕೆ ಚಲನಚಿತ್ರಗಳ ಆಹ್ವಾನ ಮಾಡಲಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

17ನೇ ಬೆಂಗಳೂರು ಫಿಲ್ಮ್‌ಫೆಸ್ಟ್‌; ಸ್ಪರ್ಧಾ ವಿಭಾಗಕ್ಕೆ ಸಿನಿಮಾಗಳ ಆಹ್ವಾನ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ -

Yashaswi Devadiga
Yashaswi Devadiga Dec 4, 2025 7:28 PM

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡ, ಭಾರತೀಯ ಮತ್ತು ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗಕ್ಕೆ ಚಲನಚಿತ್ರಗಳ ಆಹ್ವಾನ ಮಾಡಲಾಗಿದೆ. ಸಿನಿಮಾಸಕ್ತರಿಗೆ ಸುವರ್ಣಾವಕಾಶ ಸಿಕ್ಕಿದೆ. FIAPF ಸಂಸ್ಥೆಯ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು, ಕರ್ನಾಟಕ ರಾಜ್ಯದ ಮತ್ತು ಬೆಂಗಳೂರು ಮಹಾನಗರದ ಮಹತ್ವದ ಸಾಂಸ್ಕೃತಿಕ ಹಬ್ಬವಾಗಿದೆ.

ಕರ್ನಾಟಕ ಸರ್ಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಗಳ ಮೂಲಕ, ಜನವರಿ 29 ರಿಂದ ಫೆಬ್ರವರಿ 6, 2026 ವರೆಗೆ ಚಲನಚಿತ್ರೋತ್ಸವನ್ನು ಆಯೋಜಿಸಿದೆ. 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ.

ಇದನ್ನೂ ಓದಿ: OTT Entry Movie: ಕಾಂತಾರ ಸಿನಿಮಾದ ಜೊತೆಗೆ ಸಾಲು ಸಾಲು ಹಿಟ್ ಸಿನಿಮಾ ಒಟಿಟಿಗೆ ಎಂಟ್ರಿ: ಯಾವುದೆಲ್ಲ ಗೊತ್ತಾ?

ಅರ್ಹ ಚಲನಚಿತ್ರಗಳಿಗೆ ಆಹ್ವಾನ

ಎಂದಿನಂತೆ ಈ ಬಾರಿಯೂ “ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ, ಭಾರತೀಯ ಚಲನಚಿತ್ರಗಳನ್ನು ಪ್ರತಿನಿಧಿಸುವ "ಚಿತ್ರಭಾರತಿ” ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ ಮತ್ತು "ಏಷಿಯನ್ ಸಿನಿಮಾ" ಸ್ಪರ್ಧಾ ವಿಭಾಗಗಳಿಗೆ, ಆಯ್ಕೆಗಾಗಿ ಅರ್ಹ ಚಲನಚಿತ್ರಗಳನ್ನು ಆಹ್ವಾನಿಸಲಾಗಿದೆ.

"ಕನ್ನಡ ಸಿನಿಮಾ ಸ್ಪರ್ಧಾ" ವಿಭಾಗ

"ಕನ್ನಡ ಸಿನಿಮಾ ಸ್ಪರ್ಧಾ" ವಿಭಾಗದಲ್ಲಿ ಆಯ್ಕೆಗಾಗಿ ಸಲ್ಲಿಸಬೇಕಾದ ಕಥಾ ಚಿತ್ರಗಳು ಕನಿಷ್ಠ 70 ನಿಮಿಷದ ಅವಧಿಯಾಗಿದ್ದು, ಜನವರಿ 1, 2025 ರಿಂದ ಡಿಸೆಂಬರ್ 31, 2025 ರ ಒಳಗೆ (ಎರಡೂ ದಿನಗಳನ್ನು ಒಳಗೊಂಡಂತೆ) ನಿರ್ಮಾಣಗೊಂಡಿರಬೇಕು. ಕನ್ನಡ ಮತ್ತು ಕರ್ನಾಟಕ ರಾಜ್ಯದ ಯಾವುದೇ ಉಪಭಾಷೆಯಲ್ಲಿ ತಯಾರಾಗಿರುವ ಕಥಾ ಚಿತ್ರಗಳು, ಸ್ಪರ್ಧಾ ವಿಭಾಗದ ಆಯ್ಕೆಗೆ ಪ್ರವೇಶ ಪಡೆಯಲು ಅರ್ಹವಾಗುತ್ತವೆ.

ಭಾರತೀಯ ಚಲನಚಿತ್ರಗಳ ಸ್ಪರ್ಧಾ ವಿಭಾಗ

"ಚಿತ್ರಭಾರತಿ” -ಭಾರತೀಯ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಆಯ್ಕೆಗಾಗಿ ಸಲ್ಲಿಸಲಿರುವ ಚಿತ್ರಗಳು ಜನವರಿ 1, 2025 ರಿಂದ ಡಿಸೆಂಬರ್ 31, 2025ರ ಒಳಗೆ (ಎರಡೂ ದಿನಗಳನ್ನು ಒಳಗೊಂಡಂತೆ) ನಿರ್ಮಾಣಗೊಂಡಿರಬೇಕು. ಹಾಗೂ, ಭಾರತದ ಯಾವುದೇ ಭಾಷೆಯ ಕಥಾ ಚಿತ್ರವಾಗಿದ್ದು, ಕನಿಷ್ಠ 70 ನಿಮಿಷಗಳ ಅವಧಿಯ ಚಿತ್ರಗಳು ಸ್ಪರ್ಧಾ ವಿಭಾಗದ ಆಯ್ಕೆಗೆ ಪ್ರವೇಶ ಪಡೆಯಲು ಅರ್ಹವಾಗುತ್ತದೆ.

ಏಷಿಯಾ ಸಿನಿಮಾ ಸ್ಪರ್ಧಾ ವಿಭಾಗ

“ಏಷಿಯಾ ಸಿನಿಮಾ ಸ್ಪರ್ಧಾ ವಿಭಾಗ"ದಲ್ಲಿ, ಏಷಿಯಾದ ಯಾವುದೇ ದೇಶದಲ್ಲಿ, ಜನವರಿ 1, 2025 ರಿಂದ ಡಿಸೆಂಬರ್ 31, 2025ರ ಒಳಗೆ (ಎರಡೂ ದಿನಗಳನ್ನು ಒಳಗೊಂಡಂತೆ) ತಯಾರಾದ, ಕನಿಷ್ಠ 70 ನಿಮಿಷಗಳ ಅವಧಿಯ ಚಿತ್ರಗಳು ಸ್ಪರ್ಧಾತ್ಮಕ ವಿಭಾಗದ ಆಯ್ಕೆಗೆ ಪ್ರವೇಶ ಪಡೆಯಲು ಅರ್ಹವಾಗುತ್ತದೆ.

'ಕನ್ನಡ ಚಲನಚಿತ್ರ", "ಚಿತ್ರಭಾರತಿ" - ಭಾರತೀಯ ಚಲನಚಿತ್ರ" ಮತ್ತು "ಏಷಿಯನ್ ಚಲನಚಿತ್ರ” ಸ್ಪರ್ಧಾ ವಿಭಾಗಕ್ಕೆ ಪ್ರವೇಶ ಬಯಸುವ ಕನ್ನಡ ಮತ್ತು ಭಾರತೀಯ ಭಾಷಾ ಚಲನಚಿತ್ರಗಳಿಗೆ, ಕೇಂದ್ರೀಯ ಚಲನಚಿತ್ರ ಪಮಾಣೀಕೃತ ಮಂಡಳಿ (CBFC), ನೀಡುವ ಪ್ರಮಾಣ ಪತ್ರದಲ್ಲಿ ನಮೂದಾಗುವ ದಿನಾಂಕವೇ, ಚಲನಚಿತ್ರ ನಿರ್ಮಾಣ ದಿನಾಂಕದ ಮಾನದಂಡವಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗಗಳಲ್ಲಿ ಆಯ್ಕೆಗಾಗಿ ಚಲನಚಿತ್ರಗಳನ್ನು ಸಲ್ಲಿಸುವ ಪ್ರಕ್ರಿಯೆ ದಿನಾಂಕ: ಡಿಸೆಂಬರ್ 06.12.2025 ರಿಂದ ಪ್ರಾರಂಭವಾಗಲಿದ್ದು, ಸ್ಪರ್ಧಾತ್ಮಕ ವಿಭಾಗಗಳಿಗೆ ಚಲನಚಿತ್ರಗಳ ಅರ್ಜಿ ಸಲ್ಲಿಸಲು www.biffes.org ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

17th Bangalore International Film Festival Films invited for the competition section  how to apply Here are the complete details

ಪ್ರವೇಶ ಶುಲ್ಕ ಏನು?

ಅರ್ಜಿಯೊಂದಿಗೆ ಸಿನಿಮಾಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನೂ ನೀಡಬೇಕು, "ಕನ್ನಡ ಸಿನಿಮಾ", "ಚಿತ್ರಭಾರತಿ - ಭಾರತೀಯ ಸಿನಿಮಾ' ಹಾಗೂ 'ಏಷಿಯನ್ ಸಿನಿಮಾ' ಸ್ಪರ್ಧಾ ವಿಭಾಗಕ್ಕೆ ಅರ್ಜಿ ಸಲ್ಲಿಸುವ, ಕರ್ನಾಟಕದ ಹಾಗೂ ಭಾರತದ ಪ್ರತಿ ಚಿತ್ರದ, ಪ್ರತಿ ಅರ್ಜಿಗೂ ರೂ.3,000/- ಪ್ರವೇಶ ಶುಲ್ಕವಿರುತ್ತದೆ.

ಇದನ್ನೂ ಓದಿ: Nimbiya Banada Myaga Page 1 Movie: ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಪಡೆದುಕೊಂಡ ʼನಿಂಬಿಯಾ ಬನಾದ ಮ್ಯಾಗ ಪೇಜ್ 1ʼ ಚಿತ್ರ

ಇಂಗ್ಲೀಷ್ ಉಪ ಶೀರ್ಷಿಕೆಗಳನ್ನೊಳಗೊಂಡ ಚಲನಚಿತ್ರದ ಆನ್‌ಲೈನ್ ಸ್ಕಿನರ್‌ನೊಂದಿಗೆ, ಆನ್‌ಲೈನ್‌ನಲ್ಲಿ ಪ್ರವೇಶ ಶುಲ್ಕವನ್ನು ಪಾವತಿಸಿಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31.12.2025 ( ಡಿಸೆಂಬರ್ 31, 2025) ಆಗಿದೆ. ಹೆಚ್ಚಿನ ಮಾಹಿತಿಗೆ, +91 8904645529 ಅಥವಾ biffesblr@gmail.com & www.biffes.org ಸಂಪರ್ಕಿಸಬಹುದು. ಇದು ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಣೆ.