ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Naxalites Surrender : ಛತ್ತೀಸ್‌ಗಢದಲ್ಲಿ 7 ಮಹಿಳೆಯರು ಸೇರಿದಂತೆ 29 ನಕ್ಸಲೈಟ್‌ಗಳ ಶರಣಾಗತಿ

ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಏಳು ಮಹಿಳೆಯರು ಸೇರಿದಂತೆ 29 ನಕ್ಸಲೈಟ್‌ಗಳು ಶರಣಾಗಿದ್ದಾರೆ. ಗಡಿ ಭದ್ರತಾ ಪಡೆ ಹಾಗೂ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಎದುರು ನಕ್ಸಲೈಟ್‌ಗಳು ಶರಣಾಗಿದ್ದಾರೆ.

ಛತ್ತೀಸ್‌ಗಢದಲ್ಲಿ  29  ನಕ್ಸಲೈಟ್‌ಗಳ ಶರಣಾಗತಿ ;

Naxalites Surrender

Profile Vishakha Bhat Jan 30, 2025 8:19 AM

ರಾಯ್ಪುರ್:‌ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಏಳು ಮಹಿಳೆಯರು ಸೇರಿದಂತೆ 29 ನಕ್ಸಲೈಟ್‌ಗಳು ಶರಣಾಗಿದ್ದಾರೆ (Naxalites Surrender) ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಗಡಿ ಭದ್ರತಾ ಪಡೆ (BSF) ಹಾಗೂ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಎದುರು ನಕ್ಸಲೈಟ್‌ಗಳು ಶರಣಾಗಿದ್ದಾರೆ. ಮಾವೋವಾದಿಗಳ ಸುಳ್ಳು ಭರವಸೆಗಳು ಹಾಗೂ ಸಿದ್ಧಾಂತದಿಂದ ಬೇಸತ್ತು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಾರಾಯಣಪುರದ ಮಾಡ್ ಪ್ರದೇಶದಲ್ಲಿ ತ್ವರಿತ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಂದ ಪ್ರಭಾವಿತರಾಗಿದ್ದೇವೆ. ಇನ್ನು ಮುಂದೆ ಸಾಮಾನ್ಯ ಜೀವನ ನಡೆಸಲು ಬಯಸುತ್ತೇವೆ ಎಂದು ಶರಣಾಗತ ನಕ್ಸಲೈಟ್‌ಗಳು ಹೇಳಿದ್ದಾರೆ.



ಶರಣಾದ ನಕ್ಸಲೈಟ್‌ಗಳು ಜನತಾನ ಸರ್ಕಾರ್, ಮಿಲಿಷಿಯಾ, ಚೇತನ ನಾಟ್ಯ ಮಂಡಳಿ ಮತ್ತು ಮಾವೋವಾದಿಗಳ ಕೆಳ ಹಂತದ ಸದಸ್ಯರಾಗಿದ್ದರು. ಜನವರಿ 2024 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 71 ಹಿರಿಯ ಮತ್ತು ಕೆಳಹಂತದ ನಕ್ಸಲೈಟ್‌ಗಳು ಶರಣಾಗಿದ್ದಾರೆ.

ಈ ಸುದ್ದಿಯನ್ನೂ ಓದಿ : Naxalites Encounter: ಛತ್ತೀಸ್‌ಗಢದಲ್ಲಿ ಎನ್ಕೌಂಟರ್;‌ 12 ನಕ್ಸಲರ ಹೆಡೆಮುರಿ ಕಟ್ಟಿದ ಭದ್ರತಾ ಪಡೆ!



ಸಂಘಟನೆಯಲ್ಲಿ ಹೆಚ್ಚುತ್ತಿರುವ ಭಿನ್ನಾಭಿಪ್ರಾಯ ಹಿನ್ನಲೆಯಲ್ಲಿ 29 ನಕ್ಸಲೈಟ್‌ಗಳು ಶರಣಾಗಿದ್ದಾರೆ ಎಂದು ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾತ್‌ ಕುಮಾರ್‌ ತಿಳಿಸಿದ್ದಾರೆ. ಶರಣಾದವರಿಗೆ ಮನೆ ಮತ್ತು ಉದ್ಯೋಗಗಳನ್ನು ಒದಗಿಸುವ ಸರ್ಕಾರದ ಪುನರ್ವಸತಿ ನೀತಿ ಅವರನ್ನು ಆಕರ್ಷಿಸಿದೆ. ಪೊಲೀಸರ 'ಮಾದ್ ಬಚಾವೋ ಅಭಿಯಾನ' ಅವರಿಗೆ ಹೊಸ ಭರವಸೆಯನ್ನು ನೀಡಿದೆ. ನಾವು ಎಲ್ಲಾ ನಕ್ಸಲೀಯರಲ್ಲಿ ಮನವಿ ಮಾಡುತ್ತೇವೆ. ಹೊರಗಿನವರ ದಾರಿತಪ್ಪಿಸುವ ವಿಚಾರಧಾರೆಯಿಂದ ಹೊರಬನ್ನಿ ಮತ್ತು ನೀವು ಭಯವಿಲ್ಲದೆ ಸಾಮಾನ್ಯ ಜೀವನವನ್ನು ನಡೆಸಬಹುದು" ಎಂದು ಪ್ರಭಾತ್‌ ಕುಮಾರ್‌ ಹೇಳಿದ್ದಾರೆ. ಶರಣಾದ ಎಲ್ಲ ನಕ್ಸಲೀಯರಿಗೆ ತಲಾ 25,000 ರೂಪಾಯಿ ಆರ್ಥಿಕ ನೆರವು ನೀಡಲಾಗಿದ್ದು, ಸರ್ಕಾರದ ನೀತಿಯಂತೆ ಮತ್ತಷ್ಟು ಪುನರ್ವಸತಿ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.