ತಮ್ಮ ದಾಖಲೆಯನ್ನು ಮುರಿಯುವ ಹಾದಿಯಲ್ಲಿರುವ ಜೋ ರೂಟ್ ಬಗ್ಗೆ ಸಚಿನ್ ಹೇಳಿದ್ದಿದು!
ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 13000 ರನ್‌ಗಳನ್ನು ಪೂರ್ಣಗೊಳಿಸಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಅವರ ಬಗ್ಗೆ ಇದೇ ಮೊದಲ ಬಾರಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ. ಸಚಿನ್ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 15921 ರನ್‌ಳನ್ನು ದಾಖಲಿಸಿದ್ದಾರೆ. ಜೋ ರೂಟ್ 13543 ರನ್ ಗಳಿಸಿದ್ದಾರೆ.

ಜೋ ರೂಟ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಸಚಿನ್ ತೆಂಡೂಲ್ಕರ್.

ನವದೆಹಲಿ: ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನ ಸಕ್ರಿಯರಾಗಿರುವ ಆಟಗಾರರ ಪೈಕಿ ಇಂಗ್ಲೆಂಡ್ (England) ಮಾಜಿ ನಾಯಕ ಜೋ ರೂಟ್ (Joe Root) ಒಬ್ಬರು. ಅವರು ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ 13 ಸಾವಿರಕ್ಕೂ ಅಧಿಕ ರನ್ ಗಳಿಸಿರುವ ಜೋ ರೂಟ್ ಅವರು, ಸಚಿನ್ ತೆಂಡೂಲ್ಕರ್ (Sachin Tendulkar) ಅವರ ದಾಖಲೆಯನ್ನು ಮುರಿಯಬಲ್ಲರು ಎಂದು ಹಲವರು ಭವಿಷ್ಯ ನುಡಿದಿದ್ದಾರೆ. ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೇ ಇದೀಗ ಜೋ ರೂಟ್ ಅವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಜೋ ರೂಟ್ ಅವರನ್ನು ಮೊದಲ ಬಾರಿ ನೋಡಿದಾಗ ತಮ್ಮ ಮನಸಿನಲ್ಲಿ ಮೂಡಿದ ಸಂಗತಿಗಳನ್ನು ಕ್ರಿಕೆಟ್ ದೇವರು ಬಹಿರಂಗಪಡಿಸಿದ್ದಾರೆ.
ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ರೂಟ್ ಅವರು 158 ಟೆಸ್ಟ್ ಪಂದ್ಯಗಳಿಂದ 13543 ರನ್‌ಗಳನ್ನು ಕಲೆ ಹಾಕಿದ್ದಾರೆ ಹಾಗೂ ಅವರು ಇನ್ನೂ ಕನಿಷ್ಠ ನಾಲ್ಕು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಲಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ 200 ಟೆಸ್ಟ್ ಪಂದ್ಯಗಳಿಂದ 15921 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದೀಗ ಸಚಿನ್ ತೆಂಡೂಲ್ಕರ್ ಅವರ ಟೆಸ್ಟ್ ರನ್‌ಗಳ ದಾಖಲೆಯನ್ನು ಮುರಿಯುವ ಹಾದಿಯಲ್ಲಿ ಜೋ ರೂಟ್ ಸಾಗುತ್ತಿದ್ದಾರೆ. ಜೋ ರೂಟ್ ಮುಂದಿನ ಎರಡು ವರ್ಷಗಳ ಕಾಲ ಟೆಸ್ಟ್ ಆಡಿದರೆ, ಸುಲಭವಾಗಿ ಸಚಿನ್ ದಾಖಲೆಯನ್ನು ಮುರಿಯಬಹುದು.
Asia Cup 2025: ಏಷ್ಯಾಕಪ್ ಇತಿಹಾಸದಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಬೌಲರ್‌ಗಳ ಪಟ್ಟಿ ಹೀಗಿದೆ
ರೆಡಿಟ್‌ನಲ್ಲಿ ಅಭಿಮಾನಿ ಜೊತೆ ಸಂಭಾಷಣೆ ನಡೆಸಿದ ಸಚಿನ್ ತೆಡೂಲ್ಕರ್, "13000 ರನ್‌ಗಳನ್ನು ದಾಟಿರುವುದು ಗಮನಾರ್ಹ ಸಾಧನೆ ಮತ್ತು ಅವರು ಇನ್ನೂ ಬಲಿಷ್ಠರಾಗಿದ್ದಾರೆ. 2012 ರಲ್ಲಿ ನಾಗ್ಪುರದಲ್ಲಿ ಅವರ ಚೊಚ್ಚಲ ಟೆಸ್ಟ್ ಪಂದ್ಯದ ಸಮಯದಲ್ಲಿ ನಾನು ಅವರನ್ನು ಮೊದಲ ಬಾರಿ ನೋಡಿದಾಗ, ನನ್ನ ತಂಡದ ಆಟಗಾರರಿಗೆ ಅವರು ಇಂಗ್ಲೆಂಡ್‌ನ ಭವಿಷ್ಯದ ನಾಯಕನನ್ನು ನೋಡುತ್ತಿದ್ದಾರೆ ಎಂದು ಹೇಳಿದ್ದೆ. ಅವರು ಪಿಚ್ ಅನ್ನು ನಿರ್ಣಯಿಸುವ ರೀತಿ ಮತ್ತು ಅವರು ಸ್ಟ್ರೈಕ್ ಅನ್ನು ಹೇಗೆ ತಿರುಗಿಸಿದರು ಎಂಬುದು ನನ್ನನ್ನು ಹೆಚ್ಚು ಪ್ರಭಾವಿತಗೊಳಿಸಿತು. ಆ ಕ್ಷಣದಲ್ಲಿ ಅವರು ದೊಡ್ಡ ಆಟಗಾರನಾಗುತ್ತಾರೆ ಎಂದು ನನಗೆ ತಿಳಿದಿತ್ತು," ಎಂದು ಶ್ಲಾಘಿಸಿದ್ದಾರೆ.
Join my Reddit AMA on r/IndiaCricket this 25th August at 5 PM IST 🏏 Your chance to ask me anything – cricket, life, and everything else! See you soon! @Reddit #AskSachin #RedditAMA #Partnership pic.twitter.com/ZtkJoebMKT
— Sachin Tendulkar (@sachin_rt) August 20, 2025
ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಹಿಂದಿಕ್ಕಲು ಜೋ ರೂಟ್‌ಗೆ ಇನ್ನೂ 2379 ರನ್ ಅಗತ್ಯವಿದೆ. ಭಾರತದ ಮಾಜಿ ನಾಯಕ 2013ರ ನವೆಂಬರ್‌ನಲ್ಲಿ ನಿವೃತ್ತಿ ಪಡೆದಿದ್ದರು. ಜೋ ರೂಟ್ ತಮ್ಮ ವೃತ್ತಿಜೀವನವನ್ನು 15 ಸಾವಿರ ರನ್‌ಗಳ ಒಳಗಾಗಿ ಮುಗಿಸಿದರೆ, ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಉಳಿಯುತ್ತಾರೆ. ಸಚಿನ್ ತೆಂಡೂಲ್ಕರ್ 463 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಈ ಸ್ವರೂಪದಲ್ಲಿ 18426 ರನ್ ಗಳಿಸಿದ್ದಾರೆ. 2010 ರಲ್ಲಿ ಅವರು ಏಕದಿನ ಪಂದ್ಯಗಳಲ್ಲಿ ತ್ರಿಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.