ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ: ಕೋರ್ಟ್‌ಗೆ ದರ್ಶನ್‌ ಹಾಜರು, ವಿಚಾರಣೆ ಆ.12ಕ್ಕೆ ಮುಂದೂಡಿಕೆ

ಆಗಸ್ಟ್ 12ರಂದು ಎಲ್ಲಾ ಆರೋಪಿಗಳು ವಿಚಾರಣೆಗೆ ಹಾಜರಾಗಬೇಕು ಎಂದು ಪೀಠ ಆದೇಶ ಹೊರಡಿಸಿತು. ಪ್ರಕರಣದ ಎ2 ಆರೋಪಿ ನಟ ದರ್ಶನ್ (Actor Darshan) ಹಾಜರಾಗಿದ್ದರೆ, ಎ1 ಪವಿತ್ರಗೌಡ, ಧನರಾಜ್, ವಿನಯ್ ಸೇರಿದಂತೆ ಬಹುತೇಕ ಆರೋಪಿಗಳು ಗೈರುಹಾಜರಾಗಿದ್ದರು. ಹೀಗಾಗಿ ಮತ್ತೆ ಹಾಜರಾಗಲು ಆದೇಶ ನೀಡಲಾಗಿದೆ.

ರೇಣುಕಾಸ್ವಾಮಿ ಕೊಲೆ: ಕೋರ್ಟ್‌ಗೆ ದರ್ಶನ್‌ ಹಾಜರು, ವಿಚಾರಣೆ ಆ.12ಕ್ಕೆ

ದರ್ಶನ್

ಹರೀಶ್‌ ಕೇರ ಹರೀಶ್‌ ಕೇರ Jul 10, 2025 2:50 PM

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ (Renukaswamy murder case) ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಆರೋಪಿ ನಟ ದರ್ಶನ್ (Actor Darshan) ಬೆಂಗಳೂರಿನ 64ನೇ ಸಿಸಿಎಚ್ ಕೋರ್ಟಿಗೆ ವಿಚಾರಣೆಗೆ ಹಾಜರಾದರು. ಈ ವೇಳೆ ವಿಚಾರಣೆ ನಡೆಸಿದ ಕೋರ್ಟ್, ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿತು. ಆಗಸ್ಟ್ 12ರಂದು ಎಲ್ಲಾ ಆರೋಪಿಗಳು ವಿಚಾರಣೆಗೆ ಹಾಜರಾಗಬೇಕು ಎಂದು ಪೀಠ ಆದೇಶ ಹೊರಡಿಸಿತು. ಪ್ರಕರಣದ ಎ2 ಆರೋಪಿ ನಟ ದರ್ಶನ್ ಹಾಜರಾಗಿದ್ದರೆ, ಎ1 ಪವಿತ್ರಗೌಡ, ಧನರಾಜ್, ವಿನಯ್ ಸೇರಿದಂತೆ ಬಹುತೇಕ ಆರೋಪಿಗಳು ಗೈರುಹಾಜರಾಗಿದ್ದರು. ಹೀಗಾಗಿ ಮತ್ತೆ ಹಾಜರಾಗಲು ಆದೇಶ ನೀಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಸದ್ಯ ಜಾಮೀನು ಮೇಲೆ ಹೊರಗಿದ್ದಾರೆ. ದರ್ಶನ್ ಅಭಿಮಾನಿ ರೇಣುಕಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ ಆರೋಪದ ಮೇಲೆ ನಟ ದರ್ಶನ್, ಪವಿತ್ರಾ ಮತ್ತು ಇತರರನ್ನು ಜೂನ್ 11, 2024ರಂದು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಹೈಕೋರ್ಟ್ ದರ್ಶನ್‌ಗೆ ಜಾಮೀನು ನೀಡುವಾಗ ಹಲವು ಷರತ್ತು ವಿಧಿಸಿತ್ತು. ಅನುಮತಿ ಇಲ್ಲದೇ ದೇಶ ತೊರೆಯುವಂತಿಲ್ಲ ಎಂದು ಹೇಳಿತ್ತು. ನಂತರ ನಟ ದರ್ಶನ್ ಅವರು, ಜುಲೈ 11 ರಿಂದ 30 ರವರೆಗೆ ಡೆವಿಲ್‌ ಚಿತ್ರದ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿದ್ದರು. ಅವರ ಮನವಿ ಮೇರೆಗೆ 57 ಸಿಸಿಎಚ್ ಕೋರ್ಟ್ ಜುಲೈ 11ರಿಂದ 25ರವರೆಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ.

ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ದರ್ಶನ್ ಮತ್ತವರ ಸಹಚರರು ಅಪಹರಿಸಿ ತಂದು ಹಲ್ಲೆ ಮಾಡಿದ್ದರು. ಆರ್‌ಆರ್‌ ನಗರದ ಶೆಡ್‌ನಲ್ಲಿ ಮಾರಣಾಂತಿಕ ಹಲ್ಲೆಯಿಂದ ಮೃತಪಟ್ಟ ಆತನನ್ನು ರಾಜಕಾಲುವೆಗೆ ಬಿಸಾಕಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ವಿವರಿಸಲಾಗಿದೆ. ದರ್ಶನ್, ಪವಿತ್ರಾ ಸೇರಿ 17 ಮಂದಿಯನ್ನು ಬಂಧಿಸಿದ್ದರು. ಎಲ್ಲರೂ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಸದ್ಯ ದರ್ಶನ್ ಶೂಟಿಂಗ್‌ಗೆ ವಿದೇಶಕ್ಕೆ ತೆರಳಲಿದ್ದು, ಅದಕ್ಕು ಮುನ್ನ ವಿಚಾರಣೆಗೆ ಹಾಜರಾಗಿದ್ದಾರೆ.

ಇದನ್ನೂ ಓದಿ: Madenuru Manu: ಡಿ ಬಾಸ್ ಆ ವಾಯ್ಸ್‌ ನನ್ನದೇ; ನಟ ದರ್ಶನ್‌ಗೆ ಕ್ಷಮೆಯಾಚಿಸಿದ ಮಡೆನೂರು ಮನು!