ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Madenuru Manu: ಡಿ ಬಾಸ್ ಆ ವಾಯ್ಸ್‌ ನನ್ನದೇ; ನಟ ದರ್ಶನ್‌ಗೆ ಕ್ಷಮೆಯಾಚಿಸಿದ ಮಡೆನೂರು ಮನು!

Madenuru Manu: ಡಿ ಬಾಸ್​ ನಾನೊಬ್ಬ ಪುಟ್ಟ ಕಲಾವಿದ. ಒಂದು ಸಂಘ, ಸಹವಾಸಗಳನ್ನು ಮಾಡಿ, ಜತೆಯಲ್ಲಿ ಇರುವವರನ್ನು ನಂಬಿ ಈ ಆಡಿಯೋದಿಂದ ನಾನು ಬಲಿಯಾಗಿದ್ದೇನೆ. ದಯವಿಟ್ಟು ನನ್ನ ಕ್ಷಮಿಸಿ. ಇಡೀ ಡಿ ಬಾಸ್​ ಅಭಿಮಾನಿಗಳು, ಕರ್ನಾಟಕದ ಜನತೆಗೆ ನನಗೆ ಒಂದು ಜೀವದಾನ ಕೊಟ್ಟಿದ್ದೀರಿ. ನನ್ನ ಉಸಿರು ಇರುವವರೆಗೂ ನಿಮ್ಮನ್ನು ಮರೆಯೋದಿಲ್ಲ ಎಂದು ಮಡೆನೂರು ಮನು ತಿಳಿಸಿದ್ದಾರೆ.

ಆ ವಾಯ್ಸ್‌ ನನ್ನದೇ; ನಟ ದರ್ಶನ್‌ಗೆ ಕ್ಷಮೆಯಾಚಿಸಿದ ಮಡೆನೂರು ಮನು!

Profile Prabhakara R Jul 6, 2025 7:06 PM

ಬೆಂಗಳೂರು: ಕನ್ನಡದ ಸ್ಟಾರ್‌ ನಟರಾದ ಶಿವರಾಜ್‌ಕುಮಾರ್, ದರ್ಶನ್ ಹಾಗೂ ಧ್ರುವ ಸರ್ಜಾ ಬಗ್ಗೆ ನಟ ಮಡೆನೂರು ಮನು ಅವಹೇಳನಕಾರಯಾಗಿ ಮಾತನಾಡಿದ್ದ ಆಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದರಿಂದ ನಟರ​ ಅಭಿಮಾನಿಗಳು ತೀವ್ರ ಆಕ್ರೋಶ ಹೊರ ಹಾಕಿದ್ದರು. ಈ ವಿಚಾರವಾಗಿ ಇತ್ತೀಚೆಗೆ ಶಿವರಾಜ್‌ಕುಮಾರ್‌ ಅವರಿಗೆ ಕ್ಷಮೆಯಾಚಿಸಿದ್ದ ನಟ ಮಡೆನೂರು ಮನು ಇದೀಗ ನಟ ದರ್ಶನ್ ಅವರಿಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.

ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ಮಡೆನೂರು ಮನು, ದರ್ಶನ್​ ಅಭಿಮಾನಿಗಳು ನನಗೆ ಕಾಲ್​ ಹಾಗೂ ಮೆಸೇಜ್​ಗಳನ್ನು ಮಾಡಿದ್ದರು. ಕ್ಷಮೆ ಕೇಳಿದ್ರಾ, ಅವರನ್ನು ಭೇಟಿಯಾದ್ರಾ ಎಂದು ಕೇಳಿದ್ದಾರೆ. ಒಂದು ಸರಿ ಭೇಟಿಯಾಗಿ ಅಂತ ಸುಮಾರು ಜನ ಹೇಳಿದ್ದಾರೆ. ಆದರೆ ನಟ ದರ್ಶನ್ ಅವರು ಬ್ಯುಸಿಯಾಗಿದ್ದಾರೆ ಎಂದು ಗೊತ್ತಾಯ್ತು. ಡಿ ಬಾಸ್​ ನಾನೊಬ್ಬ ಪುಟ್ಟ ಕಲಾವಿದ. ಒಂದು ಸಂಘ, ಸಹವಾಸಗಳನ್ನು ಮಾಡಿ, ಜತೆಯಲ್ಲಿ ಇರುವವರನ್ನು ನಂಬಿ ಈ ಆಡಿಯೋದಿಂದ ನಾನು ಬಲಿಯಾಗಿದ್ದೇನೆ. ದಯವಿಟ್ಟು ನನ್ನ ಕ್ಷಮಿಸಿ. ಇಡೀ ಡಿ ಬಾಸ್​ ಅಭಿಮಾನಿಗಳು, ಕರ್ನಾಟಕದ ಜನತೆಗೆ ನನಗೆ ಒಂದು ಜೀವದಾನ ಕೊಟ್ಟಿದ್ದೀರಿ. ನನ್ನ ಉಸಿರು ಇರುವವರೆಗೂ ನಿಮ್ಮನ್ನು ಮರೆಯೋದಿಲ್ಲ. ಈ ಪುಟ್ಟ ಕಲಾವಿದನನ್ನು ಕ್ಷಮಿಸಿ ಅಂತ ಅಂಗಲಾಚಿ ಬೇಡಿಕೊಂಡಿದ್ದಾರೆ.

ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಬಿಡುಗಡೆ ಹೊತ್ತಲ್ಲಿ ನಟ ಮಡೇನೂರು ಮನು ಅವರ ಆಡಿಯೋ ವೈರಲ್‌ ಆಗಿತ್ತು. ಜತೆಗೆ ಸಹನಟಿ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿ ಬಂಧನವಾಗಿದ್ದರು. ಅಷ್ಟೇ ಅಲ್ಲದೇ ಸ್ಟಾರ್ ನಟರ ಬಗ್ಗೆ ಮನು ಮಾತನಾಡಿದ್ದ ಮಾತುಗಳಿಗೆ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಇದೀಗ ದರ್ಶನ್‌ ಅವರಿಗೆ ಮಡೆನೂರು ಮನು ಕ್ಷಮೆ ಕೇಳಿದ್ದಾರೆ.

ನಾನು ಊರಲ್ಲಿ ಮನೆ ಕಟ್ಟಬೇಕಾದರೆ ನನಗೆ 69,000 ರೂಪಾಯಿ ಸಹಾಯ ಮಾಡಿದ್ದು ಡಿ ಬಾಸ್ ಅವರ ಫ್ಯಾನ್ಸ್. ಹೀಗಾಗಿ ಇಷ್ಟೆಲ್ಲ ಸಹಾಯ ಮಾಡಿದವರನ್ನು ನಾನು ಯಾವತ್ತೂ ಬಯ್ಯಲ್ಲ. ಉದ್ದೇಶಪೂರ್ವಕವಾಗಿ ನಾನು ಮಾತನಾಡಿಲ್ಲ. ಆದರೆ, ಆ ಧ್ವನಿ ನನ್ನದೇ. ನನಗೆ ಪ್ರಜ್ಞೆ ಇಲ್ಲದಂತೆ ಟ್ರಿಗರ್‌ ಮಾಡಿ ಮಾತನಾಡಿಸಿರುವ ಮಾತುಗಳು. ಇದೆಲ್ಲ ಪ್ರೀಪ್ಲ್ಯಾನ್‌ ಮಾಡಿದ್ದಾರೆ. ನನಗೆ ಗೊತ್ತಿಲ್ಲ, ರೆಕಾರ್ಡ್‌, ವಿಡಿಯೋ ಕಂಪನಿಗಳು ನನಗೆ ಗೊತ್ತಿಲ್ಲ, ನಂದು ಆ ಕೆಲಸನೂ ಅಲ್ಲ, ನಾನು ಬಂದಿರುವ ಉದ್ದೇಶವೇ ಬೇರೆ ಎಂದು ಮಡೆನೂರು ಎಂದಿದ್ದಾರೆ.