Actor Shivarajkumar: ಮಂತ್ರಾಲಯಕ್ಕೆ ನಟ ಶಿವರಾಜ್‌ಕುಮಾರ್ ಕುಟುಂಬ ಭೇಟಿ; ರಾಯರಿಗೆ ವಿಶೇಷ ಪೂಜೆ
Actor Shivarajkumar: ಅನಾರೋಗ್ಯದಿಂದ ಗುಣಮುಖರಾದ ಮೇಲೆ ಮೊದಲ ಬಾರಿಗೆ ಮಂತ್ರಾಲಯಕ್ಕೆ ನಟ ಶಿವರಾಜ್‌ಕುಮಾರ್ ಅವರು ಭೇಟಿ ನೀಡಿದ್ದಾರೆ. ರಾಯರಿಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ ಬಳಿಕ ರಾಘವೇಂದ್ರ ಸ್ವಾಮೀಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.


ರಾಯಚೂರು: ನಟ ಶಿವರಾಜ್‌ಕುಮಾರ್ ಅವರು (Actor Shivarajkumar) ಕುಟುಂಬ ಸಮೇತರಾಗಿ ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದಿದ್ದಾರೆ. ಪತ್ನಿ ಗೀತಾ, ಮಗಳು ಹಾಗೂ ಕುಟುಂಬ ಸದಸ್ಯರೊಂದಿಗೆ ಬಂದ ಶಿವಣ್ಣ ರಾಯರ ವೃಂದಾವನಕ್ಕೆ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅನಾರೋಗ್ಯದಿಂದ ಗುಣಮುಖರಾದ ಮೇಲೆ ಮೊದಲ ಬಾರಿಗೆ ಮಂತ್ರಾಲಯಕ್ಕೆ ಭೇಟಿ ನೀಡಿರುವ ಶಿವಣ್ಣ, ರಾಯರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳ ಆಶೀರ್ವಾದ ಪಡೆದರು. ಶ್ರೀಗಳು ಅನುಗ್ರಹ ಫಲಮಂತ್ರಾಕ್ಷತೆ ಶೇಷ ವಸ್ತ್ರ ನೀಡಿ ಆಶಿರ್ವದಿಸಿದರು.
ಬಳಿಕ ಶ್ರೀಗಳೊಂದಿಗೆ ಶಿವಣ್ಣ ರಾಯರ ಅನುಗ್ರಹದ ಬಗ್ಗೆ ಮೆಲಕು ಹಾಕಿದರು. ಖಾಸಗಿ ಕಾರ್ಯಕ್ರಮಕ್ಕೆಂದು ರಾಯಚೂರಿಗೆ ಬಂದಿದ್ದ ಶಿವಣ್ಣ ಪತ್ನಿಯೊಂದಿಗೆ ಮಂತ್ರಾಲಯಕ್ಕೆ ನೇರವಾಗಿ ಬಂದಿದ್ದ ಶಿವಣ್ಣ ರಾಯರ ದರ್ಶನ ಪಡೆದು ಬೆಂಗಳೂರಿಗೆ ತೆರಳಿದ್ದಾರೆ.
ಈ ಸುದ್ದಿಯನ್ನೂ ಓದಿ | Vijay Sethupathi: ಕಾರ್ಮಿಕರ ಮನೆ ನಿರ್ಮಾಣಕ್ಕೆ 1.30 ಕೋಟಿ ರೂ. ದೇಣಿಗೆ ನೀಡಿದ ವಿಜಯ್ ಸೇತುಪತಿ
'ನಿಂಬಿಯಾ ಬನಾದ ಮ್ಯಾಗ' ಪೇಜ್-1 ಚಿತ್ರದ ಟೀಸರ್‌ಗೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮೆಚ್ಚುಗೆ

ಬೆಂಗಳೂರು: ಭಾರತೀಯ ಚಿತ್ರರಂಗದ ಮೇರು ನಟ ಡಾ. ರಾಜಕುಮಾರ್ ಅವರ ಕುಟುಂಬದ ಮತ್ತೊಂದು ಕುಡಿ ಷಣ್ಮುಖ ಗೋವಿಂದರಾಜ್ 'ನಿಂಬಿಯಾ ಬನಾದ ಮ್ಯಾಗ' ಪೇಜ್ 1 (Nimbiya Banada Myaga - Page 1) ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಷಣ್ಮುಖ, ಡಾ.ರಾಜಕುಮಾರ್ ಪುತ್ರಿ ಲಕ್ಷ್ಮೀ ಹಾಗೂ ಗೋವಿಂದರಾಜು ಅವರ ಪುತ್ರ. ವಿ.ಮಾದೇಶ್ ನಿರ್ಮಾಣದ, ಅಶೋಕ್ ಕಡಬ ನಿರ್ದೇಶಿಸಿರುವ ಈ ಚಿತ್ರದ ಟೀಸರ್ ಇತ್ತೀಚಿಗೆ A2 music ಮೂಲಕ ಬಿಡುಗಡೆಯಾಗಿ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಟೀಸರ್ ಅನ್ನು ವಿಕ್ಷಿಸಿದ ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಟೀಸರ್ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಟ್ರೇಲರ್ ಅನ್ನು ಸದ್ಯದಲ್ಲೇ ಶಿವರಾಜಕುಮಾರ್ ಅವರೆ ಬಿಡುಗಡೆ ಮಾಡಲಿದ್ದಾರೆ. ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಶ್ರೀಮುರಳಿ ಸಹ ಟೀಸರ್ ನೋಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.
ಮಲೆನಾಡ ಭಾಗದ ಬೆಂಗಾಡಿಯಲ್ಲಿ ಮೇಲ್ ಬೈಲ್ ದೊಡ್ಡ ಮನೆಯ ನಾಲ್ಕು ವರ್ಷದ ಮಗು ಅಚ್ಚು ( ಅಚ್ಚಣ್ಣ ) ಕಾಣೆಯಾಗಿದೆ. ಆ ತಾಯಿ ಇಂದಲ್ಲ ನಾಳೆ ಮಗು ಬಂದೆ ಬರುತ್ತೆ ಅನ್ನೋ ನಂಬಿಕೆಯಲ್ಲೇ ಕಾಯುತ್ತಿದ್ದಾಳೆ. ಕಾಲ ಉರುಳಿದಂತೆ 25 ವರ್ಷದ ನಂತರ ಮೇಲ್ ಬೈಲ್ ದೊಡ್ಡಮನೆಯಲ್ಲಿ ಸಂತೋಷದ ವಾತಾವರಣ. ಕಾರಣ ಕಳೆದು ಹೋದ ಮಗ ಅಚ್ಚಣ್ಣ ಬಂದಿದ್ದಾನೆ. ಮುಂದೆ ಏನೂ ಎಂಬುದು 'ನಿಂಬಿಯಾ ಬನಾದ ಮ್ಯಾಗ - ಪೇಜ್ - 1' ಚಿತ್ರದ ಕಥಾ ಸಾರಾಂಶ ಎನ್ನುತ್ತಾರೆ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿರುವ ಅಶೋಕ್ ಕಡಬ.

ಇತ್ತೀಚಿಗೆ ಚಿತ್ರದ ಮೊದಲ ಪ್ರತಿ ಸಿದ್ದವಾಗಿದ್ದು, ಡಾ. ರಾಜಕುಮಾರ್ ಕುಟುಂಬದ ಸದಸ್ಯರು ಚಿತ್ರವನ್ನು ವೀಕ್ಷಿಸಿ ಸಂತೋಷ ಪಟ್ಟಿದ್ದಾರೆ. 'ನಿಂಬಿಯಾ ಬನಾದ ಮ್ಯಾಗ' ಚಿತ್ರದ ಪೇಜ್ 1 ಹಾಗೂ ಪೇಜ್ 2 ಎಂದು ಎರಡು ಭಾಗಗಳಲ್ಲಿ ಬರಲಿದೆ. ಮೊದಲ ಪೇಜ್ 1 ಬಿಡುಗಡೆಯಾಗಲಿದೆ. ಪೇಜ್ 2 ಚಿತ್ರೀಕರಣ ಬಿರುಸಿನಿಂದ ಸಾಗಿದೆ.

ಷಣ್ಮುಖ ಅವರಿಗೆ ನಾಯಕಿಯಾಗಿ ತನುಶ್ರೀ ಅಭಿನಯಿಸಿದ್ದಾರೆ. 25 ವರ್ಷಗಳ ನಂತರ 'ಮೇಘಮಾಲೆ' ಚಿತ್ರದ ಖ್ಯಾತಿಯ ಸುನಾದ್ ರಾಜ್ ಈ ಚಿತ್ರದಲ್ಲಿ ನಟಿಸಿದ್ದಾರೆ. ತ್ರಿಶಾ (ಚೆನ್ನೈ), ಪಂಕಜ್ ನಾರಾಯಣ್, ಸಂಗೀತ, ಭವ್ಯ, ರಾಮಕೃಷ್ಣ, ಮೂಗು ಸುರೇಶ್, ಪದ್ಮಾ ವಾಸಂತಿ, ಭವ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಈ ಸುದ್ದಿಯನ್ನೂ ಓದಿ | Pinafore Dress Fashion 2025: ಮುಂಬರುವ ಸೀಸನ್‌ಗೆ ಈಗಲೇ ಲಗ್ಗೆ ಇಟ್ಟ ಪೈನಾಪೋರ್ ಔಟ್‌ಫಿಟ್ಸ್!
ಆಶೋಕ್ ಕಡಬ ನಿರ್ದೇಶನದ 5 ನೇ ಚಿತ್ರ 'ನಿಂಬಿಯಾ ಬನಾದ ಮ್ಯಾಗ'. ಆರೋನ್ ಕಾರ್ತಿಕ್ ಸಂಗೀತ ನೀಡಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಪಳನಿ ಡಿ ಸೇನಾಪತಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿದ್ದು ಕಾಂಚನಹಳ್ಳಿ ಛಾಯಾಗ್ರಹಣ, ರವಿತೇಜ ಸಂಕಲನ ಹಾಗೂ ಮದನ್ ಹರಿಣಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.