Pahalgam Terror Attack: ಪಹಲ್ಗಾಮ್ ಬಳಿಕ ಉರಿ ಗಡಿಯಲ್ಲಿ ನುಸುಳಲು ಯತ್ನಿಸಿದ ಉಗ್ರರು, ಗುಂಡಿನ ಚಕಮಕಿ
ಬಾರಾಮುಲ್ಲಾದ ಉರಿ ನಾಲಾದ ಸರ್ಜೀವನ್ ಸಾಮಾನ್ಯ ಪ್ರದೇಶದ ಮೂಲಕ ಸರಿಸುಮಾರು 2-3 ಅಪರಿಚಿತ ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸಿದರು. ನಿಯಂತ್ರಣ ರೇಖೆಯಲ್ಲಿದ್ದ ಭದ್ರತಾ ಯೋಧರ ಪಡೆ ಅವರನ್ನು ತಡೆಯಿತು. ಇದರ ಪರಿಣಾಮವಾಗಿ ಗುಂಡಿನ ಚಕಮಕಿ ನಡೆಯಿತು. ಆಪರೇಶನ್ ಇನ್ನೂ ಪ್ರಗತಿಯಲ್ಲಿದೆ.

ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯ (pahalgam terror attack) ನಂತರ, ಉರಿ (Uri) ಜಿಲ್ಲೆಯಲ್ಲಿ ಭದ್ರತಾ ಪಡೆಗಳು (Security Forces) ಮತ್ತು ಭಯೋತ್ಪಾದಕರ (Terrorists) ನಡುವೆ ಗುಂಡಿನ ಚಕಮಕಿ (Encounter) ನಡೆದಿದೆ. ಭಾರತೀಯ ಸೇನೆ ನೀಡಿದ ಮಾಹಿತಿಯ ಪ್ರಕಾರ, ಬುಧವಾರ ಸುಮಾರು ಎರಡರಿಂದ ಮೂರು ಭಯೋತ್ಪಾದಕರು ಉರಿ ಗಡಿ ಮೂಲಕ ಒಳನುಸುಳಲು ಪ್ರಯತ್ನಿಸಿದರು. ಕೂಡಲೇ ಪಡೆಗಳು ಈ ಚಲನವಲನವನ್ನು ತಡೆದವು. ಈ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆಯಿತು.
“ಏಪ್ರಿಲ್ 23, 2025ರಂದು, ಬಾರಾಮುಲ್ಲಾದ ಉರಿ ನಾಲಾದ ಸರ್ಜೀವನ್ ಸಾಮಾನ್ಯ ಪ್ರದೇಶದ ಮೂಲಕ ಸರಿಸುಮಾರು 2-3 ಅಪರಿಚಿತ ಭಯೋತ್ಪಾದಕರು ಒಳನುಸುಳಲು ಪ್ರಯತ್ನಿಸಿದರು. ನಿಯಂತ್ರಣ ರೇಖೆಯಲ್ಲಿದ್ದ ಯೋಧರ ಪಡೆ ಅವರನ್ನು ತಡೆಯಿತು. ಇದರ ಪರಿಣಾಮವಾಗಿ ಗುಂಡಿನ ಚಕಮಕಿ ನಡೆಯಿತು. ಕಾರ್ಯಾಚರಣೆ ಪ್ರಗತಿಯಲ್ಲಿದೆ" ಎಂದು ಭಾರತೀಯ ಸೇನೆಯು ಸೋಶಿಯಲ್ ಮೀಡಿಯಾ ಎಕ್ಸ್ ಅಕೌಂಟ್‌ನಲ್ಲಿ ತಿಳಿಸಿದೆ. ಉಗ್ರರ ನಿರ್ಮೂಲನೆ ಆಪರೇಶನ್ ನಡೆಯುತ್ತಿದೆ ಮತ್ತು ಈ ಪ್ರದೇಶದಲ್ಲಿ ಪಡೆಗಳು ಹೆಚ್ಚಿನ ಎಚ್ಚರಿಕೆಯಲ್ಲಿವೆ.
ಇದಕ್ಕೂ ಮುನ್ನ, ಮಂಗಳವಾರ ಲಷ್ಕರ್-ಎ-ತೈಬಾ (ಎಲ್‌ಇಟಿ) ಗೆ ಸಂಬಂಧಿಸಿದ ಭಯೋತ್ಪಾದಕರ ಗುಂಪು ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿರುವ ಜನಪ್ರಿಯ ಪ್ರವಾಸಿ ತಾಣದಲ್ಲಿ ಮಂಗಳವಾರ ಭೀಕರ ದಾಳಿ ನಡೆಸಿತ್ತು. ಕನಿಷ್ಠ 28 ಪ್ರವಾಸಿಗರು ಸಾವನ್ನಪ್ಪಿ ಹಲವಾರು ಜನರು ಗಾಯಗೊಂಡಿದ್ದರು. ಸಾವನ್ನಪ್ಪಿದ 28 ಪ್ರವಾಸಿಗರಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಸೇರಿದ್ದರು. ಉಗ್ರರು ಪ್ರವಾಸಿಗರ ಹೆಸರು ಕೇಳಿ, ಹಿಂದೂ ಎಂದು ಖಚಿತಪಡಿಸಿಕೊಂಡು ಅವರಿಗೆ ಗುಂಡಿಕ್ಕಿದ್ದರು. ಪ್ರಧಾನ ಮಂತ್ರಿ ಮೋದಿಯವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಉರಿಯಲ್ಲಿ ಉಗ್ರರು ಒಳನುಸುಳಲು ಯತ್ನಿಸಿದ್ದಾರೆ. ಹೀಗಾಗಿ, ಕಾಶ್ಮೀರದಲ್ಲಿ ವ್ಯಾಪಕ ನರಮೇಧಕ್ಕೆ ಇಸ್ಲಾಮಿಕ್ ಉಗ್ರರು ಸಿದ್ಧತೆ ನಡೆಸಿದ್ದಾರೆಯೇ ಎಂಬ ಶಂಕೆ ಮೂಡಿದೆ.
ಇದನ್ನೂ ಓದಿ: Pahalgam terror attack: ಪಹಲ್ಗಾಮ್ ಉಗ್ರರ ದಾಳಿ; ಸಹಾಯಕ್ಕಾಗಿ ಈ ನಂಬರ್‌ಗೆ ಕರೆ ಮಾಡಿ