Allu Arjun: 'ಪುಷ್ಪ 2' ಯಶಸ್ಸಿನ ಬೆನ್ನಲ್ಲೇ ಅಲ್ಲು ಅರ್ಜುನ್‌ ಮತ್ತೆ ಬ್ಯುಸಿ; 4ನೇ ಬಾರಿ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್‌ ಸಿನಿಮಾದಲ್ಲಿ ನಟನೆ

Allu Arjun: ʼಪುಷ್ಪ 2ʼ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಅಲ್ಲು ಅರ್ಜುನ್ ಸದ್ಯ ಟಾಲಿವುಡ್‌ ಜನಪ್ರಿಯ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್‌ ಅವರ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

Profile Ramesh B December 29, 2024
ಹೈದರಾಬಾದ್‌: ಟಾಲಿವುಡ್‌ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun) ಸದ್ಯ ಪ್ಯಾನ್‌ ಇಂಡಿಯಾ ಚಿತ್ರ ʼಪುಷ್ಪ 2ʼ (Pushpa 2) ಗೆಲುವಿನ ಸಂಭ್ರಮದಲ್ಲಿದ್ದಾರೆ. ಡಿ. 5ರಂದು ತೆರೆಕಂಡ ಈ ಚಿತ್ರ ವರ್ಷಾಂತ್ಯದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸಿದೆ. ವಿವಿಧ ದಾಖಲೆಗಳನ್ನು ಬ್ರೇಕ್‌ ಮಾಡಿ ಮುನ್ನುಗ್ಗುತ್ತಿರುವ 'ಪುಷ್ಪ 2' ಈಗಾಗಲೇ ಈ ವರ್ಷ ಅತೀ ಹೆಚ್ಚು ಗಳಿಸಿದ ಭಾರತೀಯ ಚಿತ್ರ ಎನಿಸಿಕೊಂಡಿದೆ. ಅಲ್ಲದೆ ದೇಶೀಯ ಚಿತ್ರರಂಗದ ಇತಿಹಾಸದಲ್ಲೇ 3ನೇ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ಮಾಸ್‌ ನಿರ್ದೇಶಕ ಸುಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿರುವ ಇದು 2021ರಲ್ಲಿ ತೆರೆಕಂಡ ʼಪುಷ್ಪʼ ಚಿತ್ರದ ಮುಂದುವರಿದ ಭಾಗ. ಅಲ್ಲು ಅರ್ಜುನ್‌ಗೆ ಜೋಡಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತೊಮ್ಮೆ ಮೋಡಿ ಮಾಡಿದ್ದು, ದೇಶಾದ್ಯಂತ ಪ್ರೇಕ್ಷಕರ ಮನ ಗೆದ್ದಿದೆ. ಈ ಮಧ್ಯೆ ಅಲ್ಲು ಅರ್ಜುನ್‌ ಅವರ ಮುಂದಿನ ಚಿತ್ರದ ಬಗ್ಗೆ ಕುತೂಹಲ ಮನೆ ಮಾಡಿದೆ.
2020ರಿಂದ ಅಲ್ಲು ಅರ್ಜುನ್‌ ಅವರು ಸುಕುಮಾರ್‌ ಅವರ ʼಪುಷ್ಪʼ ಸಿನಿಮಾ ಸರಣಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ಅವರು ಬೇರೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಈ ಮಧ್ಯೆ ʼಪುಷ್ಪ 3ʼ ಬರಲಿದೆ ಎನ್ನುವ ಮಾತೂ ಕೇಳಿದಂದಿದೆ. ಅದಾಗ್ಯೂ ಅವರು ಸದ್ಯ ಆ ಪ್ರಾಜೆಕ್ಟ್‌ ಪಕ್ಕಕ್ಕಿಟ್ಟು ತ್ರಿವಿಕ್ರಂ ಶ್ರೀನಿವಾಸ್‌ (Trivikram Srinivas) ಅವರ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.
THE HIGHEST GROSSER OF INDIAN CINEMA IN 2024 continues to topple records 💥💥#Pushpa2TheRule is the FASTEST INDIAN FILM EVER to collect 1700 CRORES with a gross of 1705 CRORES WORLDWIDE in 21 days ❤️‍🔥Book your tickets now!🎟️ https://t.co/tHogUVEgCt#Pushpa2#WildFirePushpa… pic.twitter.com/vrL2RHqcSq— Mythri Movie Makers (@MythriOfficial) December 26, 2024
ಕಮರ್ಷಿಯಲ್‌ ಚಿತ್ರಗಳ ಮೂಲಕ ಟಾಲಿವುಡ್‌ನಲ್ಲಿ ಜನಪ್ರಿಯರಾಗಿರುವ ತ್ರಿವಿಕ್ರಂ ಈಗಾಗಲೇ ಅಲ್ಲು ಅರ್ಜುನ್‌ ಅವರ 3 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಹೊಸ ಪ್ರಾಜೆಕ್ಟ್‌ ಇವರಿಬ್ಬರು ಜತೆಯಾಗುತ್ತಿರುವ 4ನೇ ಚಿತ್ರವಾಗಲಿದೆ. 2025ರ ಬೇಸಗೆ ವೇಳೆಗೆ ಈ ಚಿತ್ರ ಸೆಟ್ಟೇರಲಿದೆ. ಅದಕ್ಕೂ ಮುನ್ನ ಅಲ್ಲು ಅರ್ಜುನ್‌ ಬಾಡಿ ಲಾಂಗ್ವೇಜ್‌ ಬದಲಾಯಿಸಲಿದ್ದಾರೆ. ನಿರ್ಮಾಪಕ ನಾಗ ವಂಶಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ʼʼಸ್ಕ್ರಿಪ್ಕ್‌ ಕೆಲಸ ಬಹುತೇಕ ಪೂರ್ಣಗೊಂಡಿದೆ. ಅಲ್ಲು ಅರ್ಜುನ್‌ ಶೀಘ್ರದಲ್ಲೇ ತ್ರಿವಿಕ್ರಂ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಇದು ಸಂಪೂರ್ಣ ಭಿನ್ನ ಪಾತ್ರವಾಗಿರಲಿದ್ದು, ಇದಕ್ಕಾಗಿ ಅಲ್ಲು ಅರ್ಜುನ್‌ ಕನಿಷ್ಠ 3 ತಿಂಗಳು ತಯಾರಿ ನಡೆಸಲಿದ್ದಾರೆ. ಮುಂದಿನ ವರ್ಷದ ಬೇಸಗೆಯಲ್ಲಿ ಚಿತ್ರ ಸೆಟ್ಟೇರಲಿದೆ. ಈ ಸಿನಿಮಾ ಪೂರ್ತಿಯಾಗಲು ಕನಿಷ್ಠ 2 ವರ್ಷ ಬೇಕಾಗಬಹುದು. ಸಾಕಷ್ಟು ವಿಎಫ್‌ಎಕ್ಸ್‌ ಕೆಲಸ ಅಗತ್ಯವಿದೆ. ಇದಕ್ಕಾಗಿ ವಿಶೇಷ ಸೆಟ್‌ ಹಾಕಲಿದ್ದೇವೆʼʼ ಎಂದು ನಾಗ ವಂಶಿ ವಿವರಿಸಿದ್ದಾರೆ. ಸದ್ಯ ಚಿತ್ರದಲ್ಲಿ ನಾಯಕಿ ಯಾರಾಗಲಿದ್ದಾರೆ, ತಾರಾಗಣದಲ್ಲಿ ಯಾರೆಲ್ಲ ಇದ್ದಾರೆ ಎನ್ನುವ ಗುಟ್ಟು ರಟ್ಟಾಗಿಲ್ಲ. ಜತೆಗೆ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ.
4ನೇ ಕಾಂಬಿನೇಷನ್‌
ತ್ರಿವಿಕ್ರಂ ಶ್ರೀನಿವಾಸ್‌ ಮತ್ತು ಅಲ್ಲು ಅರ್ಜು ಈ ಹಿಂದೆ ʼಜುಲಾಯಿʼ (2012), ʼS/o ಸತ್ಯಮೂರ್ತಿʼ (2015) ಮತ್ತು ʼಅಲ ವೈಕುಂಠಪುರಮುಲ್ಲೋʼ (2020) ಚಿತ್ರಗಳಲ್ಲಿ ಜತೆಯಾಗಿ ಕೆಲಸ ಮಾಡಿದ್ದರು. ಈ ಮೂರೂ ಚಿತ್ರಗಳೂ ಪ್ರೇಕ್ಷಕರ ಗಮ ಸೆಳೆದಿದ್ದವು. ಹೀಗಾಗಿ ಈ ಹಿಟ್‌ ಕಾಂಬಿನೇಷನ್‌ನ 4ನೇ ಚಿತ್ರ ಈಗಾಗಲೇ ನಿರೀಕ್ಷೆ ಮೂಡಿಸಿದೆ. ಹಿಂದಿಗಿಂತಲೂ ವಿಶೇಷವಾಗಿ, ವಿಭಿನ್ನವಾಗಿ ಚಿತ್ರ ಕಟ್ಟಿಕೊಡುವುದಾಗಿ ತ್ರಿವಿಕ್ರಂ ಶ್ರೀನಿವಾಸ್‌ ಭರವಸೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Pushpa 2 Collection: ರಿಲೀಸ್‌ ಆಗಿ 23 ದಿನ ಕಳೆದರೂ ತಗ್ಗುತ್ತಿಲ್ಲ’ಪುಷ್ಪ 2′ ಹವಾ; ಅಲ್ಲು ಅರ್ಜುನ್‌-ರಶ್ಮಿಕಾ ಚಿತ್ರದ ಗಳಿಕೆ 1,720 ಕೋಟಿ ರೂ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ