FIFA Rankings; 134ನೇ ಸ್ಥಾನಕ್ಕೆ ಕುಸಿದ ಭಾರತ; ಸ್ಪೇನ್ ನಂ.1
ಸ್ಪೇನ್ ತಂಡ ಅರ್ಜೆಂಟೀನಾವನ್ನು ಹಿಂದಿಕ್ಕಿ ಮತ್ತೆ 11 ವರ್ಷಗಳ ಬಳಿಕ ಮೊದಲ ಬಾರಿಗೆ ನಂ.1 ಸ್ಥಾನಕ್ಕೆ ಏರಿತು. ಆದರೆ ಜರ್ಮನಿ ಅಗ್ರ 10 ರಿಂದ ಸಂಪೂರ್ಣವಾಗಿ ಹೊರಬಿದ್ದಿತು. ಕಳೆದ ಎರಡು ವರ್ಷಗಳಿಂದ ಅಗ್ರಸ್ಥಾನಿಯಾಗಿದ್ದ ಅರ್ಜೆಂಟೀನಾ ತಂಡ ಎರಡು ಸ್ಥಾನಗಳ ಕುಸಿತದೊಂದಿಗೆ 3ನೇ ಸ್ಥಾನ ಪಡೆಯಿತು.

-

ನವದೆಹಲಿ: ಇತ್ತೀಚೆಗಷ್ಟೇ ಫಿಫಾ ರ್‍ಯಾಂಕಿಂಗ್(FIFA Rankings) ಪಟ್ಟಿಯಲ್ಲಿ ಆರು ಸ್ಥಾನಗಳ ಕುಸಿತ ಕಂಡಿದ್ದ ಭಾರತ(India) ಫುಟ್‌ಬಾಲ್ ತಂಡವು ಮತ್ತೊಂದು ಸ್ಥಾನದ ಕುಸಿತ ಕಂಡಿದೆ. ನೇಷನ್ಸ್ ಕಪ್‌ನಲ್ಲಿ ಬಲವಾದ ಪ್ರದರ್ಶನ ನೀಡಿದ್ದರೂ ಭಾರತ 134ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದು ಟೀಮ್ ಇಂಡಿಯಾ ಪಾಲಿಗೆ ಕಳೆದ 9 ವರ್ಷಗಳಲ್ಲೇ ಅತ್ಯಂತ ಕಳಪೆ ಶ್ರೇಯಾಂಕವಾಗಿದೆ. 2016ರ ಡಿಸೆಂಬರ್‌ನಲ್ಲಿ 135ನೇ ಸ್ಥಾನ ಪಡೆದಿತ್ತು. 1996ರ ಫೆಬ್ರುವರಿಯಲ್ಲಿ 94ನೇ ಸ್ಥಾನಕ್ಕೆ ಏರಿದ್ದು ಶ್ರೇಷ್ಠ ಸಾಧನೆಯಾಗಿತ್ತು.
ಸ್ಪೇನ್ ತಂಡ ಅರ್ಜೆಂಟೀನಾವನ್ನು ಹಿಂದಿಕ್ಕಿ ಮತ್ತೆ 11 ವರ್ಷಗಳ ಬಳಿಕ ಮೊದಲ ಬಾರಿಗೆ ನಂ.1 ಸ್ಥಾನಕ್ಕೆ ಏರಿತು. ಆದರೆ ಜರ್ಮನಿ ಅಗ್ರ 10 ರಿಂದ ಸಂಪೂರ್ಣವಾಗಿ ಹೊರಬಿದ್ದಿತು. ಕಳೆದ ಎರಡು ವರ್ಷಗಳಿಂದ ಅಗ್ರಸ್ಥಾನಿಯಾಗಿದ್ದ ಅರ್ಜೆಂಟೀನಾ ತಂಡ ಎರಡು ಸ್ಥಾನಗಳ ಕುಸಿತದೊಂದಿಗೆ 3ನೇ ಸ್ಥಾನ ಪಡೆಯಿತು. ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಈಕ್ವೆಡಾರ್ ವಿರುದ್ಧದ ಸೋಲು ಅರ್ಜೆಂಟೀನಾ ತಂಡದ ಕುಸಿತಕ್ಕೆ ಕಾರಣ. ಫ್ರಾನ್ಸ್(2) ಇಂಗ್ಲೆಂಡ್(4), ಪೋರ್ಚುಗಲ್(5)ನೇ ಸ್ಥಾನದಲ್ಲಿದೆ.
ನೂತನ ಕೋಚ್ ಖಾಲಿದ್ ಜಮಿಲ್ ನೇತೃತ್ವದಲ್ಲಿ, ಭಾರತ ತಂಡವು ವರ್ಷದ ಆರಂಭದಲ್ಲಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಓಮನ್ ತಂಡವನ್ನು ಪೆನಾಲ್ಟಿ ಶೂಟರ್‌ನಲ್ಲಿ ಸೋಲಿಸುವ ಮೂಲಕ ಎಂಟು ರಾಷ್ಟ್ರಗಳ ಟೂರ್ನಮೆಂಟ್‌ನಲ್ಲಿ ಮೂರನೇ ಸ್ಥಾನ ಪಡೆದಿತ್ತು. ಅಕ್ಟೋಬರ್‌ನಲ್ಲಿ ನಡೆಯಲಿರುವ ಎರಡೂ ಪಂದ್ಯಗಳಲ್ಲಿ ಭಾರತ ತಂಡವು ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಸುತ್ತಿನಲ್ಲಿ ಸಿಂಗಾಪುರ ವಿರುದ್ಧ ಮುಂದಿನ ಪಂದ್ಯದಲ್ಲಿ ಆಡಲಿದೆ. ಇಲ್ಲಿ ಉತ್ತಮ ಪ್ರದರ್ಶನ ತೋರಿದರೆ ರ್‍ಯಾಂಕಿಂಗ್‌ನಲ್ಲಿ ಮೇಲೇರುವ ಅವಕಾಶವಿದೆ.
ಇದನ್ನೂ ಓದಿ Asia Cup 2025: ಪಾಕ್ ವಿರುದ್ಧ ಕ್ರಮಕ್ಕೆ ಮುಂದಾದ ಐಸಿಸಿ
ಟಾಪ್-10 ದೇಶಗಳು
- ಸ್ಪೇನ್
- ಫ್ರಾನ್ಸ್
- ಅರ್ಜೆಂಟೀನಾ
- ಇಂಗ್ಲೆಂಡ್
- ಪೋರ್ಚುಗಲ್
- ಬ್ರೆಜಿಲ್
- ನೆದರ್ಲ್ಯಾಂಡ್ಸ್
- ಬೆಲ್ಜಿಯಂ
- ಕ್ರೊಯೇಷಿಯಾ
- ಇಟಲಿ