ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips: ಮುತ್ತಿನ ಉಂಗುರ ಧರಿಸಲು ಯೋಚಿಸುತ್ತಿದ್ದೀರಾ? ಮೊದಲು ಈ ಜ್ಯೋತಿಷ್ಯ ಸಲಹೆ ತಿಳಿದುಕೊಳ್ಳಿ

ಜ್ಯೋತಿಷ್ಯಶಾಸ್ತ್ರದಲ್ಲಿ ಚಂದ್ರನು ಮನಸ್ಸು, ಭಾವನೆಗಳು ಮತ್ತು ನಿದ್ರೆಯ ಮೇಲೆ ಪ್ರಮುಖ ಪ್ರಭಾವ ಹೊಂದಿರುವ ಗ್ರಹ ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಚಂದ್ರನು ದುರ್ಬಲವಾಗಿದ್ದರೆ ಮಾನಸಿಕ ಅಶಾಂತಿ, ಆತಂಕ ಮತ್ತು ನಿರ್ಧಾರಗಳಲ್ಲಿ ಗೊಂದಲ ಉಂಟಾಗಬಹುದು. ಇಂತಹ ಸಂದರ್ಭಗಳಲ್ಲಿ ಬೆಳ್ಳಿಯ ಉಂಗುರದಲ್ಲಿ ನೈಸರ್ಗಿಕ ಮುತ್ತು ಧರಿಸುವುದರಿಂದ ಮನಶಾಂತಿ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಮುತ್ತಿನ ಉಂಗುರ

ಬೆಂಗಳೂರು: ಜ್ಯೋತಿಷ್ಯಶಾಸ್ತ್ರದಲ್ಲಿ ಚಂದ್ರನಿಗೆ ಮಹತ್ವದ ಸ್ಥಾನವಿದೆ. ಮಾನವನ ಮನಸ್ಸು, ಭಾವನೆಗಳು, ಆಲೋಚನೆಗಳು ಹಾಗೂ ನಿದ್ರೆಯ ಮೇಲೆ ಚಂದ್ರನ ಪ್ರಭಾವ ಹೆಚ್ಚಾಗಿ ಕಾಣಿಸುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಜಾತಕದಲ್ಲಿ ಚಂದ್ರನು ದುರ್ಬಲವಾಗಿದ್ದರೆ ಮಾನಸಿಕ ಅಶಾಂತಿ, ಅತಿಯಾದ ಕೋಪ, ಆತಂಕ, ನಿರ್ಧಾರಗಳಲ್ಲಿ ಗೊಂದಲ ಹಾಗೂ ನಿದ್ರಾಹೀನತೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ ಚಂದ್ರನ ಶಕ್ತಿಯನ್ನು ಬಲಪಡಿಸಲು ಮುತ್ತು (Pearl) ಧರಿಸುವುದು ಉತ್ತಮ ಪರಿಹಾರವೆಂದು ಪರಿಗಣಿಸಲಾಗಿದೆ. ಬೆಳ್ಳಿಯ ಉಂಗುರದಲ್ಲಿ ನೈಸರ್ಗಿಕ ಮುತ್ತನ್ನು ಧರಿಸುವುದರಿಂದ ಮನಸ್ಸಿಗೆ ಶಾಂತಿ ಮತ್ತು ಸಕಾರಾತ್ಮಕ ಶಕ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಹಾಗಾದ್ರೆ ಬನ್ನಿ ಜ್ಯೋತಿಷ್ಯ ಸಲಹೆ(Astro Tips) ಪ್ರಕಾರ ಮುತ್ತನ್ನು ಧರಿಸುವಾಗ ಯಾವ ಕ್ರಮಗಳನ್ನು ಪಾಲಿಸಬೇಕು..? ಯಾವ ರಾಶಿಯವರು ಮುತ್ತು ಧರಿಸಿದ್ರೆ ಒಳ್ಳೆಯದು..? ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ..

ಮೇಷ ಮತ್ತು ಕರ್ಕ ರಾಶಿಯವರಿಗೆ ಲಾಭ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮೇಷ ಮತ್ತು ಕರ್ಕ ರಾಶಿಯವರಿಗೆ ಮುತ್ತು ಧರಿಸುವುದು ವಿಶೇಷವಾಗಿ ಶುಭಕರವಾಗಿದೆ. ಮೇಷ ರಾಶಿಯವರಿಗೆ ಚಂದ್ರನು ನಾಲ್ಕನೇ ಭಾವದ ಅಧಿಪತಿಯಾಗಿರುವುದರಿಂದ, ಮುತ್ತು ಧರಿಸಿದರೆ ಮನೆ, ವಾಹನ ಹಾಗೂ ಇತರೆ ಭೌತಿಕ ಸೌಕರ್ಯಗಳಲ್ಲಿ ಪ್ರಗತಿ ಕಂಡುಬರುವ ಸಾಧ್ಯತೆ ಇದೆ. ಕುಟುಂಬ ಜೀವನದಲ್ಲಿ ಸ್ಥಿರತೆ ಹೆಚ್ಚಾಗಿ, ಉತ್ತಮ ಫಲಿತಾಂಶಗಳು ದೊರೆಯಬಹುದು. ಇನ್ನೊಂದೆಡೆ ಕರ್ಕ ರಾಶಿಯವರು ಚಂದ್ರನ ಸ್ವರಾಶಿಯವರಾಗಿರುವುದರಿಂದ ಮುತ್ತು ಅವರಿಗೆ ಹೆಚ್ಚು ಅನುಕೂಲಕರವೆಂದು ಹೇಳಲಾಗುತ್ತದೆ. ಇದು ಮಾನಸಿಕ ಗೊಂದಲವನ್ನು ಕಡಿಮೆ ಮಾಡಿ, ಕುಟುಂಬದಲ್ಲಿ ಸಾಮರಸ್ಯ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವೃತ್ತಿಜೀವನದಲ್ಲಿಯೂ ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆ ಇದೆ.

Astro Tips: ಸಂಜೆ ದೀಪಾರಾಧನೆ ವೇಳೆ ಈ 4 ಮಂತ್ರ ಪಠಿಸಿದ್ರೆ ಮನೆಯಲ್ಲಿ ಸಂತೋಷ, ಅದೃಷ್ಟ ಹೆಚ್ಚಾಗುತ್ತದೆ

ವೃಶ್ಚಿಕ ಮತ್ತು ಮೀನ ರಾಶಿಗೂ ಅನುಕೂಲ

ವೃಶ್ಚಿಕ ಮತ್ತು ಮೀನ ರಾಶಿಯವರಿಗೂ ಮುತ್ತು ಧರಣೆ ಲಾಭದಾಯಕವಾಗಿದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ವೃಶ್ಚಿಕ ರಾಶಿಯವರು ಕೆಲವೊಮ್ಮೆ ತೀವ್ರ ಸ್ವಭಾವ ಹೊಂದಿರುವುದರಿಂದ, ಮುತ್ತು ಧರಿಸುವುದರಿಂದ ಕೋಪವನ್ನು ನಿಯಂತ್ರಣದಲ್ಲಿಡಲು ಮತ್ತು ಸಮತೋಲನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಸಂಬಂಧಗಳಲ್ಲಿ ಮಧುರತೆ ಹೆಚ್ಚಾಗುತ್ತದೆ ಹಾಗೂ ಆರ್ಥಿಕ ಸ್ಥಿರತೆ ಕೂಡ ಸಾಧ್ಯವಾಗುತ್ತದೆ. ಮೀನ ರಾಶಿಯವರು ಮುತ್ತು ಧರಿಸುವುದರಿಂದ ಮಾನಸಿಕ ಸ್ಪಷ್ಟತೆ ಮತ್ತು ಆತ್ಮಶಾಂತಿಯನ್ನು ಪಡೆಯಬಹುದು. ಗೊಂದಲಮಯ ಸಂದರ್ಭಗಳಲ್ಲಿಯೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ವೃದ್ಧಿಯಾಗುತ್ತದೆ ಎಂದು ನಂಬಲಾಗಿದೆ.

ಮುತ್ತು ಧರಿಸುವ ಸರಿಯಾದ ವಿಧಾನ

ಮುತ್ತು ಧರಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ. ಮುತ್ತನ್ನು ಸಾಮಾನ್ಯವಾಗಿ ಬೆಳ್ಳಿಯ ಉಂಗುರದಲ್ಲಿ ಅಳವಡಿಸಬೇಕು. ಶುಕ್ಲಪಕ್ಷದ ಸೋಮವಾರದಂದು ಹಾಲು ಮತ್ತು ಗಂಗಾಜಲದಿಂದ ಮುತ್ತನ್ನು ಶುದ್ಧೀಕರಿಸಿ ‘ಓಂ ಸೌಂ ಸೋಮಾಯ ನಮಃ’ ಮಂತ್ರವನ್ನು ಜಪಿಸಿದ ನಂತರ ಬಲಗೈಯ ಕಿರುಬೆರಳಿಗೆ ಧರಿಸುವುದು ಶುಭಕರವೆಂದು ಜ್ಯೋತಿಷಿಗಳು ಸೂಚಿಸುತ್ತಾರೆ.

ಜ್ಯೋತಿಷ್ಯ ಲಾಭಗಳ ಜೊತೆಗೆ, ಮುತ್ತು ಧರಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಾಯವಾಗುತ್ತದೆ ಎಂಬ ನಂಬಿಕೆಯೂ ಇದೆ. ಆದ್ದರಿಂದ ನೈಸರ್ಗಿಕ ಮತ್ತು ಗುಣಮಟ್ಟದ ಮುತ್ತನ್ನು ಆಯ್ಕೆ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.