AUS vs SL: ತವರಿನಲ್ಲಿ ಶ್ರೀಲಂಕಕ್ಕೆ ಮುಖಭಂಗ, ಆಸ್ಟ್ರೇಲಿಯಾಗೆ ಟೆಸ್ಟ್ ಸರಣಿ!
AUS vs SL 2nd Test Highlights: ಅಲೆಕ್ಸ್ ಕೇರಿ ಶತಕ ಮತ್ತು ನೇಥನ್ ಲಯಾನ್ ಹಾಗೂ ಕುಹ್ನೇಮನ್ ಸ್ಪಿನ್ ಮೋಡಿಯ ಬಲದಿಂದ ಆಸ್ಟ್ರೇಲಿಯಾ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್‌ಗಳ ಗೆಲುವು ಪಡೆದಿದೆ. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಎರಡೂ ಪಂದ್ಯಗಳನ್ನು ಸೋತ ಶ್ರೀಲಂಕಾ ತವರಿನಲ್ಲಿ ಮುಖಭಂಗ ಅನುಭವಿಸಿದೆ.

Australia won 2nd Test by 9 Wickets

ಗಾಲೆ (ಶ್ರೀಲಂಕಾ): ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ, ಎರಡನೇ ಟೆಸ್ಟ್ ಪಂದ್ಯದಲ್ಲಿ (AUS vs SL 2nd Test) ಶ್ರೀಲಂಕಾ ಎದುರು 9 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ತಂಡ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಸತತ ಎರಡೂ ಪಂದ್ಯಗಳನ್ನು ಸೋಲುವ ಮೂಲಕ ಆತಿಥೇಯ ಶ್ರೀಲಂಕಾ ತಂಡ ತವರು ಅಭಿಮಾನಿಗಳ ಎದುರು ಮುಖಭಂಗ ಅನುಭವಿಸಿತು. ಪ್ರಥಮ ಇನಿಂಗ್ಸ್‌ನಲ್ಲಿ 188 ಎಸೆತಗಳಲ್ಲಿ 156 ರನ್‌ಗಳನ್ನು ಗಳಿಸಿದ್ದ ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಥಮ ಇನಿಂಗ್ಸ್‌ನಲ್ಲಿ ಶ್ರೀಲಂಕಾ257 ರನ್‌ಗಳನ್ನು ಕಲೆ ಹಾಕಿದ ಬಳಿಕ, ಪ್ರಥಮ ಇನಿಂಗ್ಸ್ ಮಾಡಿದ್ದ ಆಸ್ಟ್ರೇಲಿಯಾ ತಂಡ, ಸ್ಟೀವನ್ ಸ್ಮಿತ್ ಹಾಗೂ ಅಲೆಕ್ಸ್ ಕೇರಿ ಅವರ ತಲಾ ಶತಕಗಳ ಬಲದಿಂದ 414 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ 157 ರನ್‌ಗಳ ಮುನ್ನಡೆಯನ್ನು ಪಡೆದಿತ್ತು.
SL vs AUS: 156 ರನ್ ಗಳಿಸಿ ಆಡಮ್ ಗಿಲ್‌ಕ್ರಿಸ್ಟ್ ದಾಖಲೆ ಮುರಿದ ಅಲೆಕ್ಸ್ ಕೇರಿ!
ನಂತರ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಶ್ರೀಳಂಕಾ ತಂಡ 231 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 75 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು. ಆಸೀಸ್ ಸಪರ ಸ್ಪಿನ್ ಮೋಡಿ ಮಾಡಿದ್ದ ಎಂ ಕುಹ್ನೇಮನ್ ಹಾಗೂ ನೇಥನ್ ಲಯಾನ್ ಕ್ರಮವಾಗಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು. ಶ್ರೀಲಂಕಾ ಪರ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ 50 ರನ್ ಗಳಿಸಿದರೆ, ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ 76 ರನ್‌ಗಳನ್ನು ಗಳಿಸಿದ್ದರು.
Australia's first series sweep in Asia in almost two decades! #SLvAUS @ARamseyCricket's report from Galle: https://t.co/aZL7gxNJ8t pic.twitter.com/ONkkYehVm5
— cricket.com.au (@cricketcomau) February 9, 2025
ಬಳಿಕ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ 17.4 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿ ಗೆಲುವಿನ ದಡ ಸೇರಿತು. ಆಸ್ಟ್ರೇಲಿಯಾ ಆರಂಭಿಕ ಟ್ರಾವಿಸ್ ಹೆಡ್ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ಉಸ್ಮಾನ್ ಖವಾಜ (27*) ಹಾಗೂ ಮಾರ್ನಸ್ ಲಾಬುಶೇನ್ (26*) ಅಜೇಯರಾಗಿ ಉಳಿದರು. ಪ್ರಭಾತ್ ಜಯಸೂರ್ಯ ಒಂದು ವಿಕೆಟ್ ಪಡೆದರು.
ಉಸ್ಮಾನ್ ಖವಾಜ ವೈಯಕ್ತಿಕ ಗರಿಷ್ಠ ಸ್ಕೋರರ್
ಪ್ಯಾಟ್ ಕಮಿನ್ಸ್ ಅನುಪಸ್ಥಿಯಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸ್ಟೀವನ್ ಸ್ಮಿತ್ ಮುನ್ನಡೆಸಿದ್ದರು. ಉಸ್ಮಾನ್ ಖವಾಜ ಈ ಸರಣಿಯಲ್ಲಿ 295 ರನ್‌ಗಳನ್ನು ಕಲೆ ಹಾಕಿ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಸ್ಟೀವನ್ ಸ್ಮಿತ್ 272 ರನ್‌ಗಳೊಂದಿಗೆ ಎರಡನೇ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಟೆಸ್ಟ್ ಕ್ರಿಕೆಟ್‌ನಲ್ಲಿ 200 ಕ್ಯಾಚ್‌ಗಳನ್ನು ಪೂರ್ಣಗೊಳಿಸಿದ ಮೊದಲನೇ ಆಸೀಸ್ ಆಟಗಾರ ಹಾಗೂ ವಿಶ್ವದ ಐದನೇ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.