SL vs AUS: 156 ರನ್ ಗಳಿಸಿ ಆಡಮ್ ಗಿಲ್‌ಕ್ರಿಸ್ಟ್ ದಾಖಲೆ ಮುರಿದ ಅಲೆಕ್ಸ್ ಕೇರಿ!
Alex Carey breaks Adam Gilchrist Record: ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಅವರು 156 ರನ್‌ಗಳನ್ನು ಕಲೆ ಹಾಕುವ ಮೂಲಕ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಗಾಲೆ (ಶ್ರೀಲಂಕಾ): ಶ್ರೀಲಂಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅಲೆಕ್ಸ್ ಕೇರಿ ಅವರು ತಮ್ಮ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ಅವರ ಏಷ್ಯಾ ದಾಖಲೆಯೊಂದನ್ನು ಮುರಿದ್ದಾರೆ. ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅತ್ಯುತ್ತಮ ಬ್ಯಾಟ್ ಮಾಡಿದ್ದ ಅಲೆಕ್ಸ್ ಕೇರಿ, ಎರಡನೇ ದಿನ ಮೂರಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಿದ್ದರು. ಇದೀಗ ಮೂರನೇ ದಿನವಾದ ಶನಿವಾರ ಎದುರಿಸಿದ 188 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ 156ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಆಡಮ್ ಗಿಲ್‌ಕ್ರಿಸ್ಟ್ ಅವರ ದೀರ್ಘಾವಧಿ ಏಷ್ಯಾ ನೆಲದ ಟೆಸ್ಟ್ ದಾಖಲೆಯನ್ನು ಮುರಿದಿದ್ದಾರೆ.
ತಮ್ಮ ವೃತ್ತಿ ಜೀವನದ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅಲೆಕ್ಸ್ ಕೇರಿ ಏಷ್ಯಾ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಆ ಮೂಲಕ 2004ರಲ್ಲಿ ಶ್ರೀಲಂಕಾದಲ್ಲಿ ಆಡಮ್ ಗಿಲ್‌ಕ್ರಿಸ್ಟ್ ಅವರು 144 ರನ್‌ಗಳನ್ನು ಕಲೆ ಹಾಕಿದ್ದರು. ಶ್ರೀಲಂಕಾದಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ ಅಲೆಕ್ಸ್ ಕೇರಿ. ಶ್ರೀಲಂಕಾದಲ್ಲಿ 150ಕ್ಕೂ ಅಧಿಕ ಟೆಸ್ಟ್ ರನ್ ಗಳಿಸಿದ ಏಷ್ಯಾ ಹೊರಗಡೆ ವಿಕೆಟ್ ಕೀಪರ್‌ಗಳ ಎಲೈಟ್ ಲಿಸ್ಟ್‌ಗೆ ಸೇರ್ಪಡಯಾಗಿದ್ದಾರೆ. ಜಿಂಬಾ ಬ್ವೆಯ ಆಂಡಿ ಫ್ಲವರ್ (232* ಹಾಗೂ 183*), ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ( 164), ಜಿಂಬಾಬ್ವೆಯ ಟಟೆಂಡಾ ತೈಬು (153), ವೆಸ್ಟ್ ಇಂಡೀಸ್‌ನ ಕ್ಲೈಡ್ ವಾಲ್ಕಟ್ (152) ಹಾಗೂ ನ್ಯೂಜಿಲೆಂಡ್‌ನ ವರೇನ್ ಲೀಸ್ (152) ಅವರನ್ನು ಒಳಗೊಂಡ ಎಲೈಟ್ ಲಿಸ್ಟ್‌ಗೆ ಇದೀಗ ಅಲೆಕ್ಸ್ ಕೇರಿ ಸೇರಿಕೊಂಡಿದ್ದಾರೆ.
SL vs AUS: ಏಷ್ಯಾ ನೆಲದಲ್ಲಿ ಟೆಸ್ಟ್ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಅಲೆಕ್ಸ್ ಕೇರಿ!
ಪಂದ್ಯದ ಎರಡನೇ ದಿನ ಪ್ರಥಮ ಇನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜ ಹಾಗೂ ಮಾರ್ನಸ್ ಲಾಬುಶೇನ್ ಅವರ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾಗಿದ್ದ ಸ್ಟೀವನ್ ಸ್ಮಿತ್ ಹಾಗೂ ಅಲೆಕ್ಸ್ ಕೇರಿ ಜೋಡಿ 259 ರನ್‌ಗಳ ಜೊತೆಯಾಟವನ್ನು ಕಲೆ ಹಾಕುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ಮೇಲೆತ್ತಿದ್ದರು. ಇವರಿಬ್ಬರೂ ತಲಾ ಶತಕಗಳನ್ನು ಸಿಡಿಸುವ ಮೂಲಕ ಶ್ರೀಲಂಕಾ ತಂಡದ ಬೌಲರ್‌ಗಳ ಮೇಲೆ ಒತ್ತಡವನ್ನು ಹೇರಿದ್ದರು.
Alex Carey etches his name in history! 👏
— FanCode (@FanCode) February 8, 2025
A masterclass with the bat as he becomes only the fourth Australian Test wicketkeeper to score 150+ and the first to achieve this milestone in Asia.#SLvAUSonFanCode pic.twitter.com/UNqWKXYDzl
414 ರನ್‌ಗಳನ್ನು ಕಲೆ ಹಾಕಿದ ಆಸ್ಟ್ರೇಲಿಯಾ
ಸ್ಟೀವನ್ ಸ್ಮಿತ್ ಹಾಗೂ ಅಲೆಕ್ಸ್ ಕೇರಿ ತಲಾ ಶತಕಗಳ ಮೂಲಕ ಆಸ್ಟ್ರೇಲಿಯಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 106.4 ಓವರ್‌ಗಳಿಗೆ 414 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ಪ್ರವಾಸಿ ಆಸೀಸ್ 157 ರನ್‌ಗಳ ಮುನ್ನಡೆಯನ್ನು ಪಡೆದಿದೆ. ಇದಕ್ಕೂ ಮುನ್ನ ಶ್ರೀಲಂಕಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 97.4 ಓವರ್‌ಗಳಿಗೆ 257 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇದೀಗ ಭಾರಿ ಹಿನ್ನಡೆಯೊಂದಿಗೆ ದ್ವಿತೀಯನಲ್ಲಿ ಬ್ಯಾಟ್ ಮಾಡುತ್ತಿರುವ ಶ್ರೀಲಂಕಾ ತಂಡ, 51 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 173 ರನ್‌ಗಳನ್ನು ಗಳಿಸಿದೆ ಹಾಗೂ 16 ರನ್ ಮುನ್ನಡೆ ಗಳಿಸಿದೆ.