ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್‌ ಎಸ್ಟೇಟ್‌ ಉದ್ಯಮಿಯ ಕೊಲೆ, ಕೊಲೆ ಹಿಂದೆ ಲವ್‌ ಸ್ಟೋರಿ

ತಂದೆ-ತಾಯಿಯನ್ನು ಕಳೆದುಕೊಂಡಿದ್ದ‌ ಲೋಕನಾಥ್ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿಕೊಂಡಿದ್ದ. ಒಬ್ಬ ತಮ್ಮನಿಗೆ ಮದುವೆ ಮಾಡಿ ತಾನೂ ಮದುವೆಗೆ ಸಿದ್ದವಾಗಿದ್ದ.‌ ಲೋಕನಾಥ್ ಹುಡುಗಿಯೊಬ್ಬಳ ಪ್ರೇಮಪಾಶಕ್ಕೆ ಬಿದ್ದಿದ್ದು, ಅದರಿಂದಲೇ ಈ ಘಟನೆ ಆಗಿರಬಹುದು ಎಂದು ಕುಟುಂಬಸ್ಥರು ದೂರಿದ್ದಾರೆ.

ಬೆಂಗಳೂರು: ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಬಿಜಾಡಿಯ ಗ್ರಾಮದ ಬಿಜಿಎಸ್ ಲೇಔಟ್​​ನಲ್ಲಿ ನಿನ್ನೆ ಸಂಜೆ ರಿಯಲ್ ಎಸ್ಟೇಟ್ (real estate) ಯುವ ಉದ್ಯಮಿ ಲೋಕನಾಥ್‌ ಸಿಂಗ್​ ಎಂಬವರ (murder case) ಹತ್ಯೆಯಾಗಿದೆ. ಇವರು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಈ ಸಂಬಂಧದಲ್ಲಿ ಕೊಲೆಯಾಗಿದೆ ಎಂದು ಶಂಕಿಸಲಾಗಿದೆ. ಲೋಕನಾಥ್ ಸಹೋದರ ಸೋಲದೇವನಹಳ್ಳಿ (Bengaluru Crime news) ಠಾಣೆಯಲ್ಲಿ ಅಣ್ಣನ ಕೊಲೆ ಬಗ್ಗೆ ದೂರು‌ ನೀಡಿದ್ದಾರೆ.

ನಿನ್ನೆ ಸಂಜೆ ಲೋಕನಾಥ್‌ ಕೊಲೆಯಾಗಿದೆ. ಮಾಗಡಿ ಮೂಲದ ಲೋಕನಾಥ್ ಸಿಂಗ್​ಗೆ ವಯಸ್ಸಿನ್ನೂ 28. ತಂದೆ-ತಾಯಿಯನ್ನು ಕಳೆದುಕೊಂಡಿದ್ದ‌ ಲೋಕನಾಥ್ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿಕೊಂಡಿದ್ದ. ಒಬ್ಬ ತಮ್ಮನಿಗೆ ಮದುವೆ ಮಾಡಿ ತಾನೂ ಮದುವೆಗೆ ಸಿದ್ದವಾಗಿದ್ದ.‌ ಲೋಕನಾಥ್ ಹುಡುಗಿಯೊಬ್ಬಳ ಪ್ರೇಮಪಾಶಕ್ಕೆ ಬಿದ್ದಿದ್ದು, ಅದರಿಂದಲೇ ಈ ಘಟನೆ ಆಗಿರಬಹುದು ಎಂದು ಕುಟುಂಬಸ್ಥರು ದೂರಿದ್ದಾರೆ.

ಲೋಕನಾಥ್ ದೂರದ ಸಂಬಂಧಿ ಹುಡುಗಿಯನ್ನು 2 ವರ್ಷದಿಂದ ಪ್ರೀತಿಸುತ್ತಿದ್ದ. 2023ರಲ್ಲಿ ಹೆಣ್ಣು ಕೇಳಲು ಹೋದಾಗ 2 ಕುಟುಂಬಗಳ ಮಧ್ಯೆ ಗಲಾಟೆಯಾಗಿದೆ. ದೀಪಕ್ ಸಿಂಗ್ ಎಂಬವರು ಮಧ್ಯಸ್ಥಿಕೆ ಮಾಡಿದಾಗಲೂ ಗಲಾಟೆಯಾಗಿದೆ. ಹುಡುಗಿಯ ಅಪ್ಪ ಲೋಕನಾಥ್​ನಿಂದಾಗಿ ತನ್ನ ಮನೆಯಲ್ಲಿ ದುರ್ಘಟನೆ ಆಗಿದೆ ಅಂತ ಕೋಪಗೊಂಡಿದ್ದ. ದುರ್ಘಟನೆಯಲ್ಲಿ ಲೋಕನಾಥ್ ಕೈವಾಡ ಇದ್ರೆ ಧೀರಜ್ ಆತ‌ನನ್ನು ಕೊಲೆ ಮಾಡ್ತಾನೆ ಅಂತ ವಾರ್ನ್ ಮಾಡಿದ್ದ. ನಿನ್ನೆ ಬೆಳಗ್ಗೆ 4 ಬಿಯರ್ ಬಾಟಲ್ ಕಾರಿನಲ್ಲಿ ಹಾಕಿಕೊಂಡ ಲೋಕನಾಥ್ ಬೆಂಗಳೂರಿಗೆ ಹೋಗಿದ್ದಾಗ ಕೊಲೆಯಾಗಿದ್ದಾನೆ.

ತಾನು ತಂದಿದ್ದ ಕಾರಿನಲ್ಲೇ ಲೋಕನಾಥ್ ಸಿಂಗ್ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಕಾರಿನಿಂದ ಓಡಿ ಬಂದ ಲೋಕನಾಥ್ 1000 ಮೀಟರ್ ದೂರದಲ್ಲಿದ್ದ ಆಟೋ ಹತ್ತಿ ಪ್ರಾಣ ಬಿಟ್ಟಿದ್ದ. ಕೊಲೆಯಾದ ವೇಳೆ ಲೋಕನಾಥ್ ಸಿಂಗ್ ಬಾಡಿಗಾರ್ಡ್ ಸ್ಥಳದಲ್ಲಿ ತಾನಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ನಡೆದಿದ್ದ ರಿಕವರಿ ಹಣ ದುರ್ಬಳಕೆ ಕೇಸ್​ನಲ್ಲಿ ಲೋಕನಾಥ್ ಸಿಂಗ್ ಎರಡನೇ ಆರೋಪಿಯಾಗಿದ್ದ. ಈ ಕೇಸ್​ನ‌ ಮೊದಲ ಆರೋಪಿ ಇನ್ಸ್ಪೆಕ್ಟರ್ ಶಂಕರ್ ನಾಯಕ್​ಗೆ ಲೋಕನಾಥ್ ಸಿಂಗ್ ಸಾಥ್ ನೀಡಿದ್ದರಿಂದ ಸಿಸಿಬಿ ಪೊಲೀಸರು ಈತನನ್ನ ಬಂಧಿಸಿದ್ದರು. ಈತನ ಕೊಲೆ ಕೇಸ್ ತನಿಖೆಗೆ ವಿಶೇಷ ತಂಡ ನೇಮಿಸಿದ್ದು, ಎಲ್ಲಾ ಕೋನಗಳಲ್ಲೂ ತನಿಖೆ‌ ನಡೆಯುತ್ತಿದೆ.

ಇದನ್ನೂ ಓದಿ: USA Horror: ಅಮೆರಿಕದಲ್ಲಿ ಭಾರತೀಯರ ಹತ್ಯೆ; ಮದ್ಯದಂಗಡಿ ತೆರೆದಿಲ್ಲವೆಂದು ಗುಜರಾತ್‌ ಮೂಲದ ತಂದೆ- ಮಗಳ ಕೊಲೆ

ಹರೀಶ್‌ ಕೇರ

View all posts by this author