ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

USA Horror: ಅಮೆರಿಕದಲ್ಲಿ ಭಾರತೀಯರ ಹತ್ಯೆ; ಮದ್ಯದಂಗಡಿ ತೆರೆದಿಲ್ಲವೆಂದು ಗುಜರಾತ್‌ ಮೂಲದ ತಂದೆ- ಮಗಳ ಕೊಲೆ

ಅಮೆರಿಕದ ವರ್ಜೀನಿಯಾದಲ್ಲಿರುವ ಡಿಪಾರ್ಟ್‌ಮೆಂಟಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಭಾರತೀಯ ಮಹಿಳೆ ಮತ್ತು ಆಕೆಯ 56 ವರ್ಷದ ತಂದೆಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಗುರುವಾರ ಅಕೋಮ್ಯಾಕ್ ಕೌಂಟಿಯಲ್ಲಿ ಅಂಗಡಿ ತೆರೆದ ಸ್ವಲ್ಪ ಸಮಯದ ನಂತರ ಗುಂಡಿನ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ಮದ್ಯದಂಗಡಿ ತೆರೆದಿಲ್ಲವೆಂದು ಗುಜರಾತ್‌ ಮೂಲದ ತಂದೆ- ಮಗಳ ಹತ್ಯೆ

Profile Vishakha Bhat Mar 23, 2025 2:50 PM

ವಾಷಿಂಗ್ಟನ್:‌ ಅಮೆರಿಕದ ವರ್ಜೀನಿಯಾದಲ್ಲಿರುವ ಡಿಪಾರ್ಟ್‌ಮೆಂಟಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಭಾರತೀಯ ಮಹಿಳೆ ಮತ್ತು ಆಕೆಯ 56 ವರ್ಷದ ತಂದೆಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. (USA Horror) ಗುರುವಾರ ಅಕೋಮ್ಯಾಕ್ ಕೌಂಟಿಯಲ್ಲಿ ಅಂಗಡಿ ತೆರೆದ ಸ್ವಲ್ಪ ಸಮಯದ ನಂತರ ಗುಂಡಿನ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ (44) ಎಂಬಾತನನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಆರೋಪಿ ಗುರುವಾರ ಮುಂಜಾನೆ ಮದ್ಯ ಖರೀದಿಸಲು ಅಂಗಡಿ ತೆರಳಿದ್ದ ಆಗ ವಾಗ್ವಾದ ಪ್ರಾರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು ಗುಜರಾತಿನ ಮೆಹ್ಸಾನಾ ಜಿಲ್ಲೆಯವರಾಗಿದ್ದು, ಆರು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಪ್ರದೀಪ್ ಪಟೇಲ್ ಹಾಗೂ ಅವರ ಪುತ್ರಿ ಉರ್ಮಿ ಗುಂಡೇಟಿಗೆ ಬಲಿಯಾಗಿದ್ದಾರೆ. ಪ್ರದೀಪ್ ಪಟೇಲ್‌ ಅವರ ಪತ್ನಿ ಕೂಡ ಅಮೆರಿಕದಲ್ಲಿಯೇ ನೆಲೆಸಿದ್ದರು. ಗುರುವಾರ ಮುಂಜಾನೆ ಮದ್ಯ ಖರೀದಿಸಲು ಅಂಗಡಿಗೆ ಬಂದು ನಿನ್ನೆ ರಾತ್ರಿ ಅಂಗಡೆಯೇಕೆ ಮುಚ್ಚಿದೆ ಎಂದು ಕೇಳಿದ್ದಾನೆ. ನಂತರ ತಂದೆ-ಮಗಳ ಮೇಲೆ ಗುಂಡು ಹಾರಿಸಿದ. ಪ್ರದೀಪ್ ಪಟೇಲ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಅವರ ಮಗಳು ಉರ್ಮಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಈ ಕೊಲೆಯ ಬಗ್ಗೆ ಮಾತನಾಡಿದ ಸಂಬಂಧಿ ಪರೇಶ್ ಪಟೇಲ್, ನನ್ನ ಸೋದರಸಂಬಂಧಿಯ ಪತ್ನಿ ಮತ್ತು ಆಕೆಯ ತಂದೆ ಇಂದು ಬೆಳಿಗ್ಗೆ ಕೆಲಸ ಮಾಡುತ್ತಿದ್ದರು. ಯಾರೋ ವ್ಯಕ್ತಿ ಅವರಿಗೆ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ. ಪ್ರದೀಪ್ ಪಟೇಲ್ ಮತ್ತು ಹಂಸಬೆನ್ ಇನ್ನೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ - ಒಬ್ಬರು ಕೆನಡಾದಲ್ಲಿ ವಾಸಿಸುತ್ತಿದ್ದಾರೆ, ಇನ್ನೊಬ್ಬರು ಅಹಮದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Missing Case: 2023ರಲ್ಲಿಯೇ ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ ಮನೆಗೆ ವಾಪಸ್‌, ಆಕೆಯ ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ನಾಲ್ವರು

ಆರೋಪಿಯನ್ನು ವಾರ್ಟನ್‌ ಎಂದು ಗುರುತಿಸಲಾಗಿದ್ದು, ಆತನ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಸದ್ಯ ಅಮೆರಿಕದಲ್ಲಿ ಭಾರತೀಯರ ಸರಣಿ ಕೊಲೆಗಳು ನಡೆಯುತ್ತಿವೆ. ಭಾರತೀಯರಿಗೆ ಅಮೆರಿಕದಲ್ಲಿ ರಕ್ಷಣೆ ಇಲ್ಲದಂತಾಗಿದೆ. ಇತ್ತೀಚೆಗೆ ತ್ತರ ಕೆರೊಲಿನಾದಲ್ಲಿ ಕನ್ವೀನಿಯನ್ಸ್ ಸ್ಟೋರ್ ನಡೆಸುತ್ತಿದ್ದ 36 ವರ್ಷದ ಭಾರತೀಯ ಮೂಲದ ಮೈನಾಂಕ್ ಪಟೇಲ್ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದರು.