ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಜ್ಜಿ or ತಾಯಿ? ಅತುಲ್‌ ಸುಭಾಷ್‌ ಪುತ್ರ ಯಾರ ಜೊತೆ ಇರಬೇಕೆಂದು ತೀರ್ಪು ನೀಡಿದ ಸುಪ್ರೀಂ!

ಆತ್ಮಹತ್ಯೆ ಮಾಡಿಕೊಂಡಿದ್ದ ಬೆಂಗಳೂರಿನ ಟೆಕ್ಕಿ ಅತುಲ್‌ ಸುಭಾಷ್‌ ಅವರ ಪುತ್ರ ಯಾರ ಜೊತೆ ಇರಬೇಕೆಂದು ಸುಪ್ರೀಂ ಕೋರ್ಟ್‌ ಸೋಮವಾರ (ಜನವರಿ 20) ಅಂತಿಮ ತೀರ್ಪು ನೀಡಿದೆ. ಅತುಲ್‌ ಅವರ ಪತ್ನಿ ನಿಖಿತಾ ಸಿಂಘಾನಿಯಾ ಅವರ ಜೊತೆ ಇರಬೇಕೆಂದು ಕೋರ್ಟ್‌ ತೀರ್ಪು ನೀಡಿದೆ.

ಅತುಲ್‌ ಸುಭಾಷ್‌ ಮಗ ತಾಯಿ ಜೊತೆ ಇರಲಿ: ಸುಪ್ರೀಂ

Profile Ramesh Kote Jan 20, 2025 7:48 PM

ನವದೆಹಲಿ: ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆಯ ಬಳಿಕ ಅವರ ನಾಲ್ಕು ವರ್ಷದ ಮಗ ಯಾರೊಂದಿಗೆ ಇರಬೇಕೆಂಬ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ (ಜನವರಿ 20) ಅಂತಿಮ ತೀರ್ಪು ನೀಡಿದೆ. ಅತುಲ್ ಸುಭಾಷ್ ಅವರ ಮಗ ತನ್ನ ತಾಯಿಯೊಂದಿಗೆ (ಅಗಲಿದ ಅತುಲ್‌ ಸುಭಾಷ್‌ರ ಪತ್ನಿ ) ನೆಲೆಸಬೇಕೆಂದು ನ್ಯಾಯಾಲಯ ತೀರ್ಪು ನೀಡಿದೆ. ಆ ಮೂಲಕ ತಮ್ಮ ಮೊಮ್ಮಗ ತನ್ನ ಬಳಿಯೇ ಇರಬೇಕೆಂದು ಮನವಿ ಮಾಡಿದ್ದ ಅತುಲ್‌ ಸುಭಾಷ್‌ ಅವರ ತಾಯಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿ ಹಾಕಿದೆ.

ನಿಕಿತಾ ಮತ್ತು ಅವರ ಕುಟುಂಬದವರು ತಮ್ಮ ಮಗನನ್ನು (ಅತುಲ್‌ ಸುಭಾಷ್‌) ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಹಣಕ್ಕಾಗಿ ಕಿರುಕುಳ ನೀಡಿದ್ದರು, ಇದರಿಂದ ತಮ್ಮ ಪುತ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂಥಾ ಮನಸ್ಥಿತಿ ಇರುವವರ ಬಳಿ ತನ್ನ ಮೊಮ್ಮಗ ಸುರಕ್ಷಿತವಾಗಿಲ್ಲ ಎಂದು ತಮ್ಮ ಅರ್ಜಿಯಲ್ಲಿ ಅಜ್ಜಿ ಆರೋಪ ಮಾಡಿದ್ದರು. ಆದರೆ, ನಾಲ್ಕು ವರ್ಷದ ಮಗನ ಪಾಲನೆಯನ್ನು ಅವನ ತಾಯಿಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿದೆ. ನ್ಯಾಯಮೂರ್ತಿ ಬಿವಿ ನಾಗರತ್ನ ಮತ್ತು ನ್ಯಾಯಮೂರ್ತಿ ಎಸ್‌ಸಿ ಶರ್ಮಾ ಅವರು ವಿಡಿಯೋ ಲಿಂಕ್ ಮೂಲಕ ಮಗುವಿನೊಂದಿಗೆ ಮಾತನಾಡಿ ಈ ತೀರ್ಪು ನೀಡಿದ್ದಾರೆ.

ಜಾಮೀನಿ ಪಡೆದಿದ್ದ ನಿಖಿತಾ ಕುಟುಂಬದ

ಅತುಲ್‌ ಸುಭಾಷ್‌ ಆತ್ಮಹತ್ಯೆ ಪ್ರಕರಣ ಸಂಬಂಧ ನಿಖಿತಾ ಸಿಂಘಾನಿಯಾ, ಅವರ ತಾಯಿ ಮತ್ತು ಸಹೋದರನನ್ನು ಪೊಲೀಸರು ಬಂಧಿಸಿದ್ದರು. ನಂತರ ಜನವರಿ 4 ರಂದು ಇವರೆಲ್ಲರಿಗೂ ಬೇಲ್‌ ಸಿಕ್ಕಿ ಜೈಲಿನಿಂದ ಬಿಡುಗಡೆಯಾಗಿದ್ದರು. ನಿಖಿತಾ ಅವರನ್ನು ಹರಿಯಾಣದ ಗುರುಗ್ರಾಮ್‌ನಲ್ಲಿ ಬಂಧಿಸಿದ್ದರೆ, ಅವರ ತಾಯಿ ನಿಶಾ ಸಿಂಘಾನಿಯಾ ಮತ್ತು ಆಕೆಯ ಸಹೋದರ ಅನುರಾಗ್‌ ಸಿಂಘಾನಿಯಾ ಅವರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಡಿಸೆಂಬರ್‌ 14 ರಂದು ಪೊಲೀಸರು ಬಂಧಿಸಿದ್ದರು.

ಆನ್‌ಲೈನ್‌ ಮೂಲಕ ಮಗನನ್ನು ಮಾತನಾಡಿಸಿದ್ದ ಕೋರ್ಟ್‌

45 ನಿಮಿಷಗಳ ವಿರಾಮದ ನಂತರ ತೀರ್ಪುಗಾರರು ಆನ್‌ಲೈನ್ ಮಾಧ್ಯಮದ ಮೂಲಕ ಮಗುವಿನೊಂದಿಗೆ ಮಾತನಾಡಿದರು. ಈ ಅವಧಿಯಲ್ಲಿ ನ್ಯಾಯಾಲಯದ ಕಲಾಪಗಳನ್ನು ಆಫ್‌ಲೈನ್‌ನಲ್ಲಿ ತೆಗೆದುಕೊಳ್ಳಲಾಗಿತ್ತು. ಮಗುವಿನ ಗುರುತನ್ನು ಮರೆಮಾಡಲು ನ್ಯಾಯಾಲಯದ ಪ್ರಕ್ರಿಯೆಗಳನ್ನು ಆಫ್‌ಲೈನ್‌ನಲ್ಲಿ ತೆಗೆದುಕೊಳ್ಳಲಾಗಿದೆ.