Bhagappa Harijan Murder case: ಬಾಗಪ್ಪ ಹರಿಜನ ಕೊಲೆ, ನಾಲ್ವರ ಬಂಧನ; ಗುಪ್ತಾಂಗವನ್ನೂ ಕತ್ತರಿಸಿದ್ದರಂತೆ ಹಂತಕರು!
ಬಾಡಿಗೆ ಮನೆ ಮಾಡಿ ನಗರದ ಹೊರ ವಲಯದ ರೇಡಿಯೋ ಕೇಂದ್ರದ ಬಳಿ ಬಾಗಪ್ಪ ವಾಸವಿದ್ದ. ಫೆಬ್ರವರಿ 19ರಂದು ವಿಜಯಪುರ ಕೋರ್ಟ್‌ಗೆ ಹಾಜರಾಗಿ, ತನ್ನ ಮೇಲಿನ ಕೊಲೆ ಯತ್ನ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಹೇಳುವವನಿದ್ದ. ಆದರೆ ಅದಕ್ಕೂ ಮೊದಲೇ ಕೊಲೆ ನಡೆದಿದೆ.

ಬಾಗಪ್ಪ ಹರಿಜನ

ವಿಜಯಪುರ : ಭೀಮಾತೀರದ ಹಂತಕ ಬಾಗಪ್ಪ ಹರಿಜನ್ ಹತ್ಯೆ (Bhagappa Harijan Murder case) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಜಯಪುರದ (Vijayapura news) ಗಾಂಧಿಚೌಕ್ ನ ಪೊಲೀಸರು ಪಿಂಟ್ಯಾ ಸೇರಿದಂತೆ ನಾಲ್ವರು ಅರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಮದೀನಾ ನಗರದಲ್ಲಿ ಬಾಗಪ್ಪ ಹರಿಜನ ಭೀಕರ ಹತ್ಯೆಯಾಗಿತ್ತು. ಕೊಡಲಿ ಸೇರಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈಯಲಾಗಿದೆ. ಬಾಡಿಗೆ ಮನೆ ಮಾಡಿ ನಗರದ ಹೊರ ವಲಯದ ರೇಡಿಯೋ ಕೇಂದ್ರದ ಬಳಿ ಬಾಗಪ್ಪ ವಾಸವಿದ್ದ. ಫೆಬ್ರವರಿ 19 ರಂದು ವಿಜಯಪುರ ಕೋರ್ಟ್‌ಗೆ ಹಾಜರಾಗಿ, ಪ್ರಮುಖ ಸಾಕ್ಷಿ ಹೇಳುವವನಿದ್ದ. ಆದರೆ ಅದಕ್ಕೂ ಮೊದಲೇ ಕೊಲೆ ನಡೆದಿದೆ.
ರಾತ್ರಿ ಬಾಗಪ್ಪ ಊಟ ಮಾಡಿ ವಾಕಿಂಗ್‌ಗೆ ಹೊರಬಂದಿದ್ದ ವೇಳೆ ಕರೆಂಟ್ ಕಟ್ ಮಾಡಿ, ಟಂಟಂನಲ್ಲಿ ಬಂದು ಅಟ್ಯಾಕ್ ಮಾಡಿದ್ದಾರೆ ಎನ್ನುವ ಮಾಹಿತಿ ಸದ್ಯ ಲಭ್ಯವಾಗಿದೆ. ಅಷ್ಟೇ ಅಲ್ಲದೆ, ಸ್ಥಳದಲ್ಲಿ ಮೂರು ಸುತ್ತು ಗುಂಡಿನ ಸದ್ದು ಕೂಡ ಕೇಳಿಬಂದಿದ್ದು, ಕೊಡಲಿಯಿಂದ ಕೊಚ್ಚಿ ಬಾಗಪ್ಪನ ಹತ್ಯೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಎಡಗೈ ಕೂಡ ಕಟ್ ಆಗಿದ್ದು, ಗುಪ್ತಾಂಗವನ್ನೂ ಕತ್ತರಿಸಲಾಗಿದೆ ಎಂದು ಹೇಳಲಾಗಿದೆ.
2017 ಆಗಸ್ಟ್ 8 ರಂದು ಕೋರ್ಟ್ ಆವರಣದಲ್ಲಿ ತನ್ನ ಮೇಲೆ ನಡೆದಿದ್ದ ಫೈರಿಂಗ್ ಕೇಸ್ ನಲ್ಲಿ ಸಾಕ್ಷಿ ನುಡಿಯಲು ಬಾಗಪ್ಪ ಬಂದಿದ್ದ. ಕೋರ್ಟ್ ಆವರಣದಲ್ಲಿ ಮೂರು ಸುತ್ತು ಗುಂಡಿ ದಾಳಿ ನಡೆದಿದ್ದರೂ ಬದುಕುಳಿದಿದ್ದ ಬಾಗಪ್ಪ ಈಗ ಹತ್ಯೆಯಾಗಿದ್ದಾನೆ. ತಾನು ಸಾಕ್ಷಿ ನುಡಿಯಲು ಬರುತ್ತಿದ್ದೇನೆ ಎಂಬುದು ವಿರೋಧಿ ಗ್ಯಾಂಗ್‌ಗಳಿಗೆ ಗೊತ್ತಾಗದಿರಲಿ ಎಂದು ನಗರದ ಹೊರ ವಲಯದಲ್ಲಿ ಬಾಡಿಗೆ ಮನೆ ಮಾಡಿ ವಾಸವಿದ್ದ. ರಾತ್ರಿ ವಾಕಿಂಗ್ ಮಾಡಲು ಬಂದಾಗ ಹಂತಕರು ಬರ್ಬರವಾಗಿ ಹತ್ಯೆಗೈದಿದ್ದಾರೆ.
ಇದನ್ನೂ ಓದಿ: Bhagappa Harijan Murder: ಕೋರ್ಟ್ ಆವರಣದಲ್ಲೇ ಮೂರು ಗುಂಡು ಬಿದ್ದರೂ ಬದುಕುಳಿದಿದ್ದ ಭೀಮಾ ತೀರದ ಬಾಗಪ್ಪ ಹರಿಜನ!