Bhagya Lakshmi Serial: ಫೀಸ್ ಕಟ್ಟಲು ಅಪ್ಪನ ಸಹಾಯ ಪಡೆದ ತನ್ವಿ: ಭಾಗ್ಯಾಳಿಂದ ಕೈಜಾರುತ್ತಿದೆ ಕುಟುಂಬ
ಭಾಗ್ಯಾ ಕಾಲೇಜಿಗೆ ಬಂದು ಪ್ರಿನ್ಸಿಪಲ್ ಜೊತೆ ಹಣದ ಸಮಸ್ಯೆಯಿದೆ.. ಸ್ವಲ್ಪ ತಡವಾಗಿ ಫೀಸ್ ಕಟ್ಟಿದರೆ ಸಾಕಾ ಎಂದು ಕೇಳಲು ಮುಂದಾಗುತ್ತಾಳೆ. ಆದರೆ, ಅದಾಗಲೇ ತಾನ್ವಿ ತಂದೆ ತಾಂಡವ್ ಸಹಾಯ ಪಡೆದು ಫೀಸ್ ಕಟ್ಟಿರುತ್ತಾಳೆ. ತನ್ವಿ ಮತ್ತು ಅವರ ತಂದೆ ಫೀಸ್ ಕಟ್ಟಿ ಕೋರ್ಸ್ ಬಗ್ಗೆ ಎಲ್ಲ ಡಿಟೇಲ್ಸ್ ಕೇಳಿಕೊಂಡು ಹೋದ್ರಲ್ಲ ಎಂದು ಪ್ರಿನ್ಸಿಪಪ್ ಹೇಳುತ್ತಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ( Bhagya Lakshmi Serial ) ಸದ್ಯದಲ್ಲೇ ಹೊಸ ತಿರುವನ್ನು ಪಡೆದುಕೊಳ್ಳಲಿದೆ. ಕೆಲವೇ ದಿನಗಳಲ್ಲಿ ಭಾಗ್ಯಾಳ ಹೊಸ ಪಯಣ ಶುರುವಾಗಿದೆ. ಕನ್ನಿಕಾ ಜೊತೆ ಸೇರಿಕೊಂಡು, ಭಾಗ್ಯಾಳನ್ನು ಕೆಲಸದಿಂದ ತೆಗೆಸುವ ಶ್ರೇಷ್ಠಾಳ ಪ್ಲ್ಯಾನ್ ವರ್ಕ್ ಆಗಿದೆ. ಹೋಟೆಲ್ ಮ್ಯಾನೇಜರ್ ಜೊತೆ ಪ್ಲ್ಯಾನ್ ಮಾಡಿದ ಕನ್ನಿಕಾ ಭಾಗ್ಯಾಳನ್ನು ಕೆಲಸದಿಂದ ತೆಗೆಯುವಲ್ಲಿ ಯಶಸ್ವಿಯಾಗಿದ್ದಾಳೆ. ತಪ್ಪು ಮಾಡಿಲ್ಲದಿದ್ದರೂ ಮಾಧ್ಯಮದವರಲ್ಲಿ, ಇದು ನನ್ನದೇ ತಪ್ಪು, ಆಗಿರುವ ತಪ್ಪಿಗೆ ಕ್ಷಮೆ ಕೋರಿ, ಕೆಲಸಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾಳೆ.
ಈ ವಿಚಾರ ತಿಳಿದು ಸೂರ್ಯವಂಶಿ ಕುಟುಂಬದಲ್ಲಿ ದೊಡ್ಡ ಕೋಲಾಹಲ ಎಬ್ಬಿದೆ. ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಹಣ ಇಲ್ಲದೆ ಮನೆಯನ್ನು ಹೇಗೆ ಸಾಗಿಸುವುದು ಎಂಬ ಟೆನ್ಶನ್ನಲ್ಲಿ ಭಾಗ್ಯಾ ಇದ್ದಾಳೆ. ಇದರ ಮಧ್ಯೆ ತನ್ವಿ ಕಾಲೇಜಿನಿಂದ ಬಂದು, ಕೋರ್ಸ್‌ಗೆ ಸೇರಲು 80,000 ರೂಪಾಯಿ ಬೇಕಾಗಿದೆ, ನಾಳೆಯೇ ಕೊನೆಯ ದಿನ ಎಂದು ಹೇಳುತ್ತಾಳೆ.
ಮೊದಲೇ ಬೇಜಾರಿನಲ್ಲಿದ್ದ ಮನೆಯವರು ತನ್ವಿ ಹೀಗೆ ಬಂದು ಕೇಳಿದಾಗ ಕೋಪ ಬರುತ್ತದೆ. ಕುಸುಮಾ ಕೋಪಗೊಂಡು ತನ್ವಿಗೆ ಹೊಡೆಯಲು ಹೋಗುತ್ತಾರೆ. ಆಗ ಧರ್ಮರಾಜ್ ಬಂದು ತಡೆಯುತ್ತಾರೆ. ಮಕ್ಕಳ ಜವಾಬ್ದಾರಿ ಅಮ್ಮನ ಮೇಲೆ ಮಾತ್ರ ಇರುವುದಲ್ಲ, ತಾಂಡವ್‌ನದ್ದೂ ಆಗಿರುತ್ತದೆ, ಅವನಲ್ಲಿ ಕೇಳು, ಅವನಿಗೆ ಫೀಸ್ ಕೊಡಲು ಸಾಧ್ಯವಿಲ್ಲವೇ ಎಂದು ಕುಸುಮಾ ಕೋಪದಲ್ಲಿ ಹೇಳಿದ್ದಾರೆ. ಆಗ ಭಾಗ್ಯ, ಏನಾದರೂ ಮಾಡಿ ಹಣ ಹೊಂದಿಸೋಣ, ಈಗ ಗಲಾಟೆ ಮಾಡಬೇಡ ಎಂದು ಸಮಾಧಾನ ಮಾಡುತ್ತಾಳೆ.
ಮರುದಿನ ಭಾಗ್ಯಾ ಕಾಲೇಜಿಗೆ ಬಂದು ಪ್ರಿನ್ಸಿಪಲ್ ಜೊತೆ ಹಣದ ಸಮಸ್ಯೆಯಿದೆ.. ಸ್ವಲ್ಪ ತಡವಾಗಿ ಫೀಸ್ ಕಟ್ಟಿದರೆ ಸಾಕಾ ಎಂದು ಕೇಳಲು ಮುಂದಾಗುತ್ತಾಳೆ. ಆದರೆ, ಅದಾಗಲೇ ತಾನ್ವಿ ತಂದೆ ತಾಂಡವ್ ಸಹಾಯ ಪಡೆದು ಫೀಸ್ ಕಟ್ಟಿರುತ್ತಾಳೆ. ತನ್ವಿ ಮತ್ತು ಅವರ ತಂದೆ ಫೀಸ್ ಕಟ್ಟಿ ಕೋರ್ಸ್ ಬಗ್ಗೆ ಎಲ್ಲ ಡಿಟೇಲ್ಸ್ ಕೇಳಿಕೊಂಡು ಹೋದ್ರಲ್ಲ ಎಂದು ಪ್ರಿನ್ಸಿಪಪ್ ಹೇಳುತ್ತಾರೆ. ಇದನ್ನ ಕೇಳಿ ಭಾಗ್ಯಾಗೆ ಆಘಾತ ಆಗುತ್ತದೆ. ಹೊರಗಡೆ ಬಂದಾಗ ತನ್ವಿ ತಾಂಡವ್ ಜೊತೆ ಖುಷಿಯಿಂದ ಮಾತನಾಡುತ್ತಾ ನಗುತ್ತಾ ಕ್ಲಾಸ್ ರೂಮ್ಗೆ ತೆರಳುತ್ತಾಳೆ. ಅತ್ತ ತಾಂಡವ್, ಭಾಗ್ಯಾ ಬಳಿ ಬಂದು ತನ್ವಿ ಖುಷಿಯಾಗಿರೋದು ಅವಳ ಅಪ್ಪನಿಂದ ಮಾತ್ರ ಎಂದು ಹೇಳುತ್ತಾಳೆ.
ಮತ್ತೊಂದೆಡೆ ಭಾಗ್ಯಾಳ ಹಣಕಾಸಿನ ಕಷ್ಟ ಕಂಡು ಮಾವ ಧರ್ಮರಾಜ್ ತನ್ನ ಸೇವಿಂಗ್ಸ್ ಹಣವನ್ನು ಕೊಡಲು ಮುಂದಾಗುತ್ತಾರೆ. ಮುಂದೆ ಏಬಾದರು ಕಷ್ಟ ಬಂದರೆ ಅಂತ ನಾನು ಒಂದಿಷ್ಟು ಹಣವನ್ನು ಸೇವಿಂಗ್ಸ್ ಮಾಡಿಟ್ಟಿದ್ದೆ. ಇದನ್ನು ನೀನು ಈಗ ಉಪಯೋಗಿಸುವ ಎಂಬ ಚೆಕ್ ಕೊಡುತ್ತಾರೆ. ಆದರೆ, ಭಾಗ್ಯಾ ಇದನ್ನು ತಿರಸ್ಕರಿಸುತ್ತಾಳೆ. ಇದು ನಿಮ್ಮ ಕಷ್ಟಕಾಲಕ್ಕೆ ಅಂತ ಇಟ್ಟುಕೊಂಡಿದ್ದೀರಿ.. ಇದನ್ನು ನಾನು ತೆಗೆದುಕೊಳ್ಳುವುದು ಸರಿಯಲ್ಲ ಮಾವ ಎಂದು ಹೇಳುತ್ತಾಳೆ. ಇದನ್ನು ನೋಡಿ ಧರ್ಮರಾಜ್ ಈ ಮಗು ಒಂದು ದಿನ ಆದ್ರೂ ಅವಳ ಖುಷಿಗೋಸ್ಕರ ಬದುಕುವ ಹಾಗೆ ಮಾಡಲ್ಲ ಎಂದು ಕೇಳಿಕೊಳ್ಳುತ್ತಾನೆ. ಸದ್ಯ ಭಾಗ್ಯಾ ಈ ಕಷ್ಟದಿಂದ ಹೇಗೆ ಹೊರಬರುತ್ತಾಳೆ?, ಹೊಸ ಕೆಲಸ ಹುಡುಕುತ್ತಾಳಾ?, ಸಿಗುತ್ತಾ? ಎಂಬುದು ಮುಂದಿನ ಸಂಚಿಕೆಯಲ್ಲಿ ತಿಳಿದುಬರಬೇಕಿದೆ.
Mokshitha Pai, BBK 11: ತಪ್ಪೇ ಮಾಡಿಲ್ಲ ಕ್ಲಾರಿಫಿಕೇಷನ್ ಯಾಕೆ ಕೊಡ್ಬೇಕು?: ಮೋಕ್ಷಿತಾ ಖಡಕ್ ಮಾತು