ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Bhagya Lakshmi Serial: ಮೋಸ ಮಾಡಿದ ತಾಂಡವ್​ನ ಬೆಂಡೆತ್ತಲು ಬಂದ ಭಾಗ್ಯಾ ತಂಗಿ ಲಕ್ಷ್ಮೀ

ಮದುವೆ ಮುಗಿದ ಬಳಿಕ ತಾಂಡವ್-ಶ್ರೇಷ್ಠಾ ತಮ್ಮ ಮನೆಗೆ ಬಂದಿದ್ದಾರೆ. ಆದರೆ, ತಾಂಡವ್‌ ಮಾತ್ರ ಖುಷಿಯಾಗಿಲ್ಲ. ಯಾಕಂದ್ರೆ, ತಾಂಡವ್ ಸೊಕ್ಕಿಗೆ ಬಲವಾದ ಪೆಟ್ಟು ಬಿದ್ದಿದೆ. ಭಾಗ್ಯಾ ಆಡಿದ ಒಂದೊಂದು ಮಾತು ತಾಂಡವ್ಗೆ ಸರಿಯಾಗೇ ನಾಟಿದೆ. ಇದರಿಂದ ಕೋಪಗೊಂಡಿದ್ದಾನೆ.

ಮೋಸ ಮಾಡಿದ ತಾಂಡವ್​ನ ಬೆಂಡೆತ್ತಲು ಬಂದ ಭಾಗ್ಯಾ ತಂಗಿ ಲಕ್ಷ್ಮೀ

Bhagya Lakshmi serial

Profile Vinay Bhat Feb 27, 2025 12:28 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಧಾರಾವಾಹಿ ಯಶಸ್ವಿಯಾಗುತ್ತಿದೆ. ಭಾಗ್ಯಾಳ ಹೊಸ ಪಯಣ ಇನ್ನೇನು ಶುರುವಾಗಲಿದೆ. ಭಾಗ್ಯ, ತನ್ನ ಗಂಡ ತಾಂಡವ್ ಕಟ್ಟಿರುವ ತಾಳಿಯನ್ನು ಕಿತ್ತು ತೆಗೆದು, ಅವನಿಗೇ ವಾಪಸ್ ಕೊಟ್ಟಿದ್ದಾಳೆ. ತಾಯಿಯ ಮಾತನ್ನೂ ಧಿಕ್ಕರಿಸಿ ಅತ್ತೆ-ಮಾವನ ಮಾತಿಗೆ ಬೆಲೆ ಕೊಟ್ಟು ಭಾಗ್ಯ ತಾಳಿ ತೆಗೆದು ತಾಂಡವ್ ಕೈಗೆ ಕೊಟ್ಟಿದ್ದಾಳೆ. ಇದನ್ನೆಲ್ಲ ಕಂಡು ತಾಂಡವ್​ಗೆ ದೊಡ್ಡ ಶಾಕ್ ಆದರೆ, ಅತ್ತ ಶ್ರೇಷ್ಠಾ ಖುಷಿಯ ಅಲೆಯಲ್ಲಿ ತೇಲಾಡುತ್ತಿದ್ದಾಳೆ.

ತಾಂಡವ್-ಶ್ರೇಷ್ಠಾ ಮದುವೆ ಆಗೋಗಿದೆ. ಭಾಗ್ಯ, ತಾಂಡವ್ ಬಳಿ ಬಂದು ಇಷ್ಟು ದಿನ ನೀವೇನು ಸ್ವಾತಂತ್ರ್ಯ ಬೇಕು ಅಂತ ಒದ್ದಾಡುತ್ತಿದ್ರೊ.. ಅದನ್ನ ನಾನಿವತ್ತು ನಿಮ್ಗೆ ಕೊಡ್ತಾ ಇದ್ದೇನೆ.. ಇಷ್ಟುದಿನ ನಿಮ್ಮ ಜೀವನವನ್ನು ಚೆಂದಗಾಣಿಸುತ್ತಿದ್ದ ಈ ಶ್ರೇಷ್ಠಾ ಜೊತೆ ಇನ್ಮುಂದೆ ಖುಷಿಯಾಗಿರಿ.. ಇಷ್ಟು ದಿನ ನಿಮ್ಮ ಆಸೆ ಈಡೇರಿಸೋಕೆ ನಾನು ಬಿಡ್ತಾ ಇರಲಿಲ್ಲ.. ಈಗ ಬಿಡ್ತಾ ಇದ್ದೇನೆ.. ನಿಮ್ಮ ಶ್ರೇಷ್ಠಾ ಜೊತೆ ನೀವು ಅಂದುಕೊಂಡ ಹಾಗೆ ನಿಮ್ಮದಿಯಲ್ಲಿ ಜೀವನ ಮಾಡಿ.. ನಿಮ್ಗೆ ಇನ್ಮುಂದೆ ಯಾವ ತೊಂದ್ರೆನೂ ಕೊಡಲ್ಲ.. ಮದುವೆಗೆ ಬಂದ ಮೇಲೆ ಖಾಲಿ ಕೈಯಲ್ಲಿ ಹೋಗಬಾರದು ಏನಾದರು ಉಡೊಗೊರೆ ತಗೊಂಡು ಬರ್ಬೇಕು ಎಂದು ಹೇಳಿ ತನ್ನ ತಾಳಿಯನ್ನೇ ತೆಗೆದು ತಾಂಡವ್​ನ ಕೈಗೆ ಕೊಟ್ಟು ಬಿಟ್ಟಿದ್ದಾಳೆ.



ಅತ್ತ ಕುಸುಮಾ ಇಂತ ಮಗ ಬೇಡ.. ನನ್ನ ಮಗನನ್ನು ಸರಿ ದಾರಿಯಲ್ಲಿ ನಡೆಸೋದ್ರಲ್ಲಿ ನಾನು ಸೋತಿದ್ದೇನೆ. ಆದ್ರೆ, ಅತ್ತೆಯಾಗಿ ನಾನು ಆ ತಪ್ಪು ಮಾಡೋದಿಲ್ಲ.. ಇವತ್ತಿಗೆ ಈ ಒತ್ತಾಯದ ಸಂಬಂಧ ಮುಗೀತು. ನನ್ನ ಮಗ ನಾಲಾಯಕ್.. ನಮ್ಮ ಸೊಸೆ, ಮಗಳಿಗಿಂತ ಹೆಚ್ಚಿನ ಪ್ರೀತಿ, ಕಾಳಜಿ ತೋರಿದ್ದಾಳೆ, ಅವಳೇ ನಮಗೆ ಎಲ್ಲವೂ, ಮಗ ಹೋದರೆ ಹೋಗಲಿ, ಮಗಳಾಗಿ ನಮ್ಮ ಜೊತೆ ಇರು ಎಂದು ಭಾಗ್ಯಗೆ ಹೇಳಿದ್ದಾರೆ.

ಇನ್ನು ಮದುವೆ ಮುಗಿದ ಬಳಿಕ ತಾಂಡವ್-ಶ್ರೇಷ್ಠಾ ತಮ್ಮ ಮನೆಗೆ ಬಂದಿದ್ದಾರೆ. ಆದರೆ, ತಾಂಡವ್‌ ಮಾತ್ರ ಖುಷಿಯಾಗಿಲ್ಲ. ಯಾಕಂದ್ರೆ, ತಾಂಡವ್ ಸೊಕ್ಕಿಗೆ ಬಲವಾದ ಪೆಟ್ಟು ಬಿದ್ದಿದೆ. ಭಾಗ್ಯಾ ಆಡಿದ ಒಂದೊಂದು ಮಾತು ತಾಂಡವ್​ಗೆ ಸರಿಯಾಗೇ ನಾಟಿದೆ. ಇದರಿಂದ ಕೋಪಗೊಂಡಿದ್ದಾನೆ. ಆ ದಡ್ಡಿ ಭಾಗ್ಯಾಗೆ ಅಷ್ಟೊಂದು ಧೈರ್ಯ ಹೇಗೆ ಬಂತು.. ಅವಳ ಕಾನ್ಫಿಡೆನ್ಸ್ ನನ್ಗೆ ಅರಗಿಸಿಕೊಳ್ಳಲು ಆಗ್ತಾ ಇಲ್ಲ.. ಆ ಸಂಬಂಧ ಬೇಡ ನನ್ಗೆ.. ಅವ್ಳು ಯಾವುದೇ ಕಾರಣಕ್ಕೂ ನನ್ನ ಸೋಲಿಸಬಾರದು ಎಂದು ಹೇಳಿದ್ದಾನೆ. ಆಗ ತಾಂಡವ್ ಅವ್ರ ಮನೆ ಇದೇನಾ..? ಎಂಬ ಧ್ವನಿ ಕೇಳಿಸುತ್ತದೆ. ಅಲ್ಲಿಗೆ ಬಂದಿರೋದು ಲಕ್ಷ್ಮೀ.



ಭಾಗ್ಯ ಬದುಕಿನಲ್ಲಿ ಇಷ್ಟೆಲ್ಲಾ ಆಗಿರುವಾಗ ಲಕ್ಷ್ಮೀ ಯಾಕೆ ಇನ್ನೂ ಬಂದಿಲ್ಲ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ತಾಂಡವ್‌ನ ಪ್ರಶ್ನೆ ಮಾಡೋಕೆ, ತಾಂಡವ್ - ಶ್ರೇಷ್ಠಾಗೆ ಬುದ್ಧಿ ಕಲಿಸೋಕೆ ಲಕ್ಷ್ಮೀ ಎಂಟ್ರಿಕೊಟ್ಟಿದ್ದಾಳೆ. ತಾಂಡವ್ ಅವ್ರ ಮನೆ ಇದೇನಾ..? ಎಂದು ಕೇಳುತ್ತಾ ಮನೆಯೊಳಗೆ ಬಂದಿದ್ದಾಳೆ. ಭಾಗ್ಯಾ ತಂಗಿಯನ್ನು ನೋಡಿ ತಾಂಡವ್​ಗೆ ಶಾಕ್ ಆಗಿದೆ. ಲಕ್ಷ್ಮೀ ಎಂಟ್ರಿಯಿಂದ ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಯಾವ ರೀತಿಯ ತಿರುವು ಸಿಗಬಹುದು ಎಂಬುದು ಈಗ ಕುತೂಹಲ ಕೆರಳಿಸಿದ್ದು, ಮುಂದಿನ ಎಪಿಸೋಡ್ ಮತ್ತಷ್ಟು ರೋಚಕತೆ ಸೃಷ್ಟಿಸಿದೆ.

Trivikram: ಮುದ್ದು ಲಕ್ಷ್ಮೀ ಧಾರಾವಾಹಿ ವಿರುದ್ಧ ತ್ರಿವಿಕ್ರಮ್ ಫ್ಯಾನ್ಸ್ ಆಕ್ರೋಶ: ಕಾರಣ ಇಲ್ಲಿದೆ