ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೈಲು ಹಾದು ಹೋಗುತ್ತಿದ್ದರೆ ಸೇತುವೆಯ ಕೆಳಗೆ ಕಾಯುತ್ತ ನಿಂತ ಜನ; ಕಾರಣ ಕೇಳಿದ್ರೆ ನೀವೂ ದಂಗಾಗ್ತೀರಿ

ರೈಲು ಮೇಲ್ಸೇತುವೆಯಲ್ಲಿ ಹಾದುಹೋಗುವಾಗ ಬೈಕ್ ಸವಾರರು ರಸ್ತೆಯಲ್ಲಿ ನಿಂತು ಕಾಯುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರೈಲು ಮೇಲ್ಸೇತುವೆಯಲ್ಲಿ ಹೋಗುತ್ತಿದ್ದರೆ ವಾಹನ ಸವಾರರು ಯಾಕೆ ರೈಲು ಹೋಗುವ ತನಕ ಕಾಯುತ್ತಿದ್ದಾರೆ ಎಂಬುದು ಜನರನ್ನು ಗೊಂದಲಕ್ಕೀಡು ಮಾಡಿದೆ.

ರೈಲು ಹಾದು ಹೋಗುತ್ತಿದ್ದರೆ ಸೇತುವೆಯ ಕೆಳಗೆ ಕಾದುನಿಂತ ಜನ

Priyanka P Priyanka P Aug 9, 2025 8:24 PM

ದೆಹಲಿ: ರೈಲು ಮೇಲ್ಸೇತುವೆ (Overbridge) ಹಾದುಹೋಗುವಾಗ ಬೈಕ್ ಸವಾರರು ರಸ್ತೆಯಲ್ಲಿ ಕಾದು ನಿಂತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ (Viral Video). ರೈಲು ಮೇಲ್ಸೇತುವೆಯಲ್ಲಿ ಹೋಗುತ್ತಿದ್ದರೆ ವಾಹನ ಸವಾರರು ಯಾಕೆ ರೈಲು ಹೋಗುವ ತನಕ ಕಾಯುತ್ತಿದ್ದಾರೆ ಎಂಬುದು ಅರ್ತವಾಗದೆ ನೆಟ್ಟಿಗರು ತಲೆ ಕೆರೆದುಕೊಂಡಿದ್ದಾರೆ.

ವೈರಲ್ ವಿಡಿಯೊಗೆ ನೆಟ್ಟಿಗರು ಭಾರತೀಯ ದೃಷ್ಟಿಕೋನದಿಂದ ಕಮೆಂಟ್‌ ಮಾಡಿದ್ದಾರೆ. ಪ್ರಯಾಣಿಕರು ತಮ್ಮ ಮೇಲೆ ಬೀಳಬಹುದಾದ ಮಾನವ ತ್ಯಾಜ್ಯದಿಂದ ರಕ್ಷಿಸಿಕೊಳ್ಳಲು ಈ ರೀತಿ ಕಾಯುತ್ತ ನಿಂತಿದ್ದಾರೆ ಎಂದು ಹಲವರು ತಿಳಿಸಿದ್ದಾರೆ.

ಈ ವಿಡಿಯೊದಲ್ಲಿ ಮುಂದೆ ಹೋಗುವ ರಸ್ತೆ ಖಾಲಿ ಇದ್ದರೂ, ಬೈಕ್‌ಗಳು ಮತ್ತು ಇತರ ವಾಹನಗಳ ಸವಾರರು ಸೇತುವೆಯ ಕೆಳಗೆ ನಿಂತಿರುವುದನ್ನು ಕಂಡು ಬಂದಿದೆ. ಕಾರಣ ನಿಮಗೆ ತಿಳಿದಿಲ್ಲದಿದ್ದರೆ ಈ ವಿಡಿಯೊ ನಿಮ್ಮನ್ನು ಗೊಂದಲಕ್ಕೆ ಸಿಲುಕಿಸಬಹುದು. ಅರೆ ಇವರೇನು ದಡ್ಡರೇ ಎಂದು ತಿಳಿದುಕೊಳ್ಳಬಹುದು. ಇನ್ನೂ ಕೆಲವರು ಬಹುಶಃ ಸುರಕ್ಷತಾ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿರಬಹುದು ಎಂದು ಅಂದುಕೊಂಡಿರಬಹುದು. ಆದರೆ ಇದ್ಯಾವುದೂ ಅಲ್ಲ. ರೈಲುಗಳಿಂದ ಬೀಳುವ ಮಾನವ ತ್ಯಾಜ್ಯಗಳು ತಮ್ಮ ಮೇಲೆ ಬೀಳುತ್ತೆ ಎಂಬ ಭಯದಿಂದ ರೈಲು ಹೋಗುವವರೆಗೆ ಹೀಗೆ ಕಾಯುತ್ತಿದ್ದಾರೆ.

ವಿಡಿಯೊ ವೀಕ್ಷಿಸಿ:



ಇನ್ನು ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. “ಸೇತುವೆಯ ಮೇಲೆ ರೈಲು ಇದೆ, ರಸ್ತೆಯಲ್ಲಿ ಯಾವುದೇ ಅಡೆತಡೆ ಇಲ್ಲ. ಆದರೆ ನಾವು ಇನ್ನೂ ಕಾಯುತ್ತಿದ್ದೇವೆ” ಎಂದು ಕ್ಯಾಪ್ಶನ್‌ ಬರೆದು ವಿಡಿಯೊ ಪೋಸ್ಟ್ ಮಾಡಲಾಗಿದೆ. ಅದಕ್ಕೆ ಪ್ರತಿಕ್ರಿಯಿಸಿದ ಒಬ್ಬ ಬಳಕೆದಾರರು ಸೇತುವೆ ನಿರ್ಮಾಣದ ಗುಣಮಟ್ಟದ ಬಗ್ಗೆ ಅವರಿಗೆ ತಿಳಿದಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಶೌಚಾಲಯದ ತ್ಯಾಜ್ಯ ನೇರವಾಗಿ ಬೀಳದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸವಾರರು ಈ ರೀತಿ ನಿಂತಿದ್ದಾರೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈಗ ರೈಲ್ವೆಗಳು ಜೈವಿಕ ಶೌಚಾಲಯಗಳನ್ನು ಅಳವಡಿಸಿಕೊಂಡಿವೆ. ಆದರೆ 10 ವರ್ಷಗಳ ಹಿಂದೆ, ರೈಲು ಹಾದು ಹೋಗುವಾಗ ನೀರು ತೊಟ್ಟಿಕ್ಕುತ್ತಿತ್ತು. ಅದು ಹೊರಡುವವರೆಗೂ ನಾವು ಕಾಯುತ್ತಿದ್ದೆವು ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.