ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Trivikram: ಮುದ್ದು ಲಕ್ಷ್ಮೀ ಧಾರಾವಾಹಿ ವಿರುದ್ಧ ತ್ರಿವಿಕ್ರಮ್ ಫ್ಯಾನ್ಸ್ ಆಕ್ರೋಶ: ಕಾರಣ ಇಲ್ಲಿದೆ

ಕಲರ್ಸ್ ಕನ್ನಡದಲ್ಲಿ ಸದ್ಯದಲ್ಲೇ ಮುದ್ದು ಸೊಸೆ ಎಂಬ ಹೊಸ ಧಾರಾವಾಹಿ ಶುರುವಾಗಲಿದೆ. ಕಲರ್ಸ್ ಕನ್ನಡದಲ್ಲಿ ಸದ್ಯದಲ್ಲೇ ಹೊಸ ಧಾರಾವಾಹಿ ಒಂದು ಶುರುವಾಗಲಿದೆ. ಆದರೆ, ಇದೀಗ ಈ ಧಾರಾವಾಹಿ ವಿರುದ್ಧ ತ್ರಿವಿಕ್ರಮ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೋಸ್ಟರ್ ಗಳನ್ನು ಹಾಕುವ ಮೂಲಕ ಅಭಿಮಾನಿಗಳು ತಮ್ಮ ಮನದಾಸೆಯನ್ನು ಹೇಳಿ ಅಭಿಯಾನವನ್ನ ಆರಂಭಿಸಿದ್ದಾರೆ.

ಮುದ್ದು ಲಕ್ಷ್ಮೀ ಧಾರಾವಾಹಿ ವಿರುದ್ಧ ತ್ರಿವಿಕ್ರಮ್ ಫ್ಯಾನ್ಸ್ ಆಕ್ರೋಶ

Muddu Lakshmi Serial Trivikram

Profile Vinay Bhat Feb 27, 2025 7:05 AM

ಬಿಗ್ ​ಬಾಸ್ ಕನ್ನಡ ಸೀಸನ್ 11ರ ಬಳಿಕ ರನ್ನರ್-ಅಪ್ ತ್ರಿವಿಕ್ರಮ್​ ಏನ್​ ಮಾಡುತ್ತರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಸಿನಿಮಾ ಮಾಡ್ತಾರಾ ಅಥವಾ ಪುನಃ ಧಾರಾವಾಹಿಗೆ ಮರಳುತ್ತಾರ ಎಂಬುದು ಯಕ್ಷ ಪ್ರಶ್ನೆಯಾಗಿತ್ತು. ಈ ಎಲ್ಲ ಗೊಂದಲಗಳಿಗೆ ಸ್ವತಃ ಕಲರ್ಸ್​ ಕನ್ನಡವೇ ಮೊನ್ನೆಯಷ್ಟೆ ಸ್ಪಷ್ಟನೆ ನೀಡಿತು. ಹೊಸ ಧಾರಾವಾಹಿಯ ಪ್ರೊಮೋ ಒಂದನ್ನು ಬಿಡುಗಡೆ ಮಾಡುವ ಮೂಲಕ ತ್ರಿವಿಕ್ರಮ್ ಮತ್ತೆ ವೀಕ್ಷಕರ ಮುಂದೆ ಬರಲಿದ್ದಾರೆ ಎಂಬ ಸರ್​ಪ್ರೈಸ್ ನೀಡಿತು.

ಹೌದು, ಕಲರ್ಸ್​ ಕನ್ನಡದಲ್ಲಿ ಸದ್ಯದಲ್ಲೇ ಹೊಸ ಧಾರಾವಾಹಿ ಒಂದು ಶುರುವಾಗಲಿದೆ. ಈ ಸೀರಿಯಲ್​ಗೆ ತ್ರಿವಿಕ್ರಮ್​ ನಾಯಕನಾಗಿ ಆಯ್ಕೆ ಆಗಿದ್ದಾರೆ. ಕಿರುತೆರೆಯಲ್ಲಿ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹೊಸ ಧಾರಾವಾಹಿಗೆ ಮುದ್ದು ಸೊಸೆ ಎಂದು ಹೆಸರಿಡಲಾಗಿದೆ. ಈಗಾಗಲೇ ಪ್ರೋಮೋ ಕೂಡ ರಿಲೀಸ್​ ಆಗಿದೆ.

ಈ ಸೀರಿಯಲ್​ಗೆ ನಾಯಕಿಯಾಗಿ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಟಿಸುತ್ತಿದ್ದಾರೆ. ಈ ಪ್ರೋಮೋದಲ್ಲಿ ತ್ರಿವಿಕ್ರಮ್ ಹೆಣ್ಣು ನೋಡುವ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಪದ್ಮಾವತಿ ಧಾರಾವಾಹಿಯಲ್ಲಿ ಸಾಮ್ರಾಟ್‌ ಪಾತ್ರದಲ್ಲಿ ತ್ರಿವಿಕ್ರಮ್‌ ಕಾಣಿಸಿಕೊಂಡಿದ್ದರು. ಮೇಲ್ನೋಟಕ್ಕೆ ಮುದ್ದು ಸೊಸೆ ಧಾರಾವಹಿ ಬಾಲ್ಯವಿವಾಹದ ಕಥೆ ಎಂದು ಕಾಣುತ್ತಿದೆ.

ಆದರೆ, ಇದೀಗ ಈ ಧಾರಾವಾಹಿ ವಿರುದ್ಧ ತ್ರಿವಿಕ್ರಮ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೋಸ್ಟರ್ ಗಳನ್ನು ಹಾಕುವ ಮೂಲಕ ಅಭಿಮಾನಿಗಳು ತಮ್ಮ ಮನದಾಸೆಯನ್ನು ಹೇಳಿ ಅಭಿಯಾನವನ್ನ ಆರಂಭಿಸಿದ್ದಾರೆ. ಮೊದಲೇ ಹೇಳಿದಂತೆ ತ್ರಿವಿಕ್ರಮ್​ಗೆ ಅಭಿಮಾನಿಗಳು ಬಿಗ್ ಬಾಸ್ ನಿಂದ ಬಂದ ಮೇಲೆ ಜಾಸ್ತಿಯಾಗಿದ್ದಾರೆ. ಹಾಗೇ ಕ್ರೇಜ್ ಕೂಡ ಹೆಚ್ಚಾಗಿದೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಎರಡು ಫ್ಯಾನ್ ಪೇಜ್‌ಗಳು ಓಪನ್ ಆಗಿದ್ದವು. ಒಂದು ತ್ರಿಮೋಕ್ಷಿ (ತ್ರಿವಿಕ್ರಮ್-ಮೋಕ್ಷಿತಾ) ಇನ್ನೊಂದು ತ್ರಿವ್ಯ (ತ್ರಿವಿಕ್ರಮ್-ಭವ್ಯಾ). ಈ ಎರಡೂ ಪೇಜ್​ಗೆ ಇಂದು ದೊಡ್ಡ ಫಾಲೋವರ್ಸ್ ಇದ್ದಾರೆ.

ತ್ರಿವಿಕ್ರಮ್ ಜೊತೆಗೆ ಮೋಕ್ಷಿತಾ ಅಥವಾ ಭವ್ಯಾ ಅವರನ್ನ ಜೋಡಿಯಾಗಿ ನೋಡುವುದಕ್ಕೆ ಫ್ಯಾನ್ಸ್ ಇಷ್ಟಪಡುತ್ತಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಮುದ್ದು ಸೊಸೆ ಧಾರಾವಾಹಿಯಲ್ಲಿ ಮೊದಲು ಹೀರೋಯಿನ್ ಬದಲಾಯಿಸಿ. ಮೋಕ್ಷಿತಾ ಅಥವಾ ಭವ್ಯಾ ಅವರನ್ನ ಹಾಕಿ ಎಂದು ಅನೇಕರು ಹೇಳುತ್ತಿದ್ದಾರೆ. ಆದರೆ, ಈಗಾಗಲೇ ಈ ಧಾರಾವಾಹಿಯ ಕೆಲ ಎಪಿಸೋಡ್​ಗಳು ಶೂಟ್ ಆಗಿರುವ ಕಾರಣ ಹೀರೋಯಿನ್ ಬದಲಾಯಿಸುವುದು ಅಸಾಧ್ಯ.

ಈಗಾಗಲೇ ರಿಲೀಸ್‌ ಆಗಿರುವ ಮುದ್ದು ಸೊಸೆ ಧಾರಾವಾಹಿ ಪ್ರೋಮೋದಲ್ಲಿ ಹೈಸ್ಕೂಲ್‌ನಲ್ಲಿ ಓದುತ್ತಿರುವ ವಿದ್ಯಾಗೆ ಓದುವ ಹುಚ್ಚು. ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿನಿ ಪಟ್ಟ ಪಡೆದುಕೊಳ್ಳುವ ಅವಳಿಗೆ ತಂದೆ ಬೇಗ ಮದುವೆ ಮಾಡಲು ರೆಡಿಯಾಗುತ್ತಾರೆ. ಅಜ್ಜಿಗೆ ಹುಷಾರಿಲ್ಲ ಎಂದು ಹೇಳಿ ಶಾಲೆಯಿಂದ ಮಗಳನ್ನು ಕರೆದುಕೊಂಡು ಬರುತ್ತಾನೆ. ಆಗ ಮನೆಗೆ ಗಂಡಿನ ಕಡೆಯವರು ಬರುತ್ತಾರೆ. ಆ ಗಂಡೇ ತ್ರಿವಿಕ್ರಮ್.‌ ಹುಡುಗನ ಕಡೆಯವರು ವಿದ್ಯಾಳನ್ನು ಒಪ್ಪುತ್ತಾರೆ, ಮದುವೆಯಾದಮೇಲೆ ವಿದ್ಯಾ ಓದುವುದು ಬೇಡ ಎನ್ನುತ್ತಾರೆ. ಆಗ ವಿದ್ಯಾ ಬೇಸರ ಮಾಡಿಕೊಳ್ಳುತ್ತಾಳೆ. ಅಂದಹಾಗೆ ಮುದ್ದು ಸೊಸೆ ತಮಿಳು ಧಾರಾವಾಹಿಯ ರಿಮೇಕ್​ ಆಗಿದೆ.

Aishwarya Shindogi: ಐಶ್ವರ್ಯಾಗೆ ಪ್ರಪೋಸ್ ಮಾಡೇ ಬಿಟ್ರಾ ಶಿಶಿರ್?: ವಿಡಿಯೋ ವೈರಲ್