ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

BJP Karnataka: ಕರ್ನಾಟಕದ 23 ಜಿಲ್ಲೆಗಳಿಗೆ ಬಿಜೆಪಿ ನೂತನ ಅಧ್ಯಕ್ಷರ ನೇಮಕ

BJP Karnataka: ಈ ಬಗ್ಗೆ ಬಿಜೆಪಿಯ ರಾಜ್ಯ ಚುನಾವಣಾಧಿಕಾರಿ ಕ್ಯಾ.ಗಣೇಶ್ ಕಾರ್ಮಿಕ್ ಪ್ರಕಟಣೆ ಹೊರಡಿಸಿದ್ದಾರೆ. ಯಾವ ಜಿಲ್ಲೆಗೆ ಯಾರು ಅಧ್ಯಕ್ಷರು ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದ 23 ಜಿಲ್ಲೆಗಳಿಗೆ ಬಿಜೆಪಿ ನೂತನ ಅಧ್ಯಕ್ಷರ ನೇಮಕ

Profile Prabhakara R Jan 29, 2025 8:59 PM

ಬೆಂಗಳೂರು: ರಾಜ್ಯದ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಗದ್ದುಗೆಗಾಗಿ ಗುದ್ದಾಟ ನಡೆಯುತ್ತಿರುವ ನಡುವೆ 23 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಈ ಮೂಲಕ ಮುಂಬರುವಂತ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದೆ.

ಈ ಬಗ್ಗೆ ಬಿಜೆಪಿಯ ರಾಜ್ಯ ಚುನಾವಣಾಧಿಕಾರಿ ಕ್ಯಾ.ಗಣೇಶ್ ಕಾರ್ಮಿಕ್ ಅವರು ಹೊರಡಿಸಿದ್ದಾರೆ. ದೇಶದಾದ್ಯಂತ ಪಕ್ಷದ ಸಂಘಟನಾ ಪರ್ವ 2024-25 ನಡೆಯುತ್ತಿದ್ದು, ಇದರ ಅಂಗವಾಗಿ ರಾಜ್ಯದಲ್ಲಿ ಮೊದಲ ಹಂತದಲ್ಲಿ 23 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಲಾಗಿದೆ. ನೂತನ ಜಿಲ್ಲಾಧ್ಯಕ್ಷರನ್ನು ಜಿಲ್ಲಾ ಚುನಾವಣಾಧಿಕಾರಿಗಳು ಸ್ಥಳೀಯವಾಗಿ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ನೂತನ ಜಿಲ್ಲಾ ಅಧ್ಯಕ್ಷರು ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ಪಕ್ಷ ಸಂಘಟನೆಯನ್ನು ತಳಮಟ್ಟದಲ್ಲಿ ಸದೃಢಗೊಳಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಶ್ರಮಿಸುತ್ತಾರೆಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.

ನೂತನ ಜಿಲ್ಲಾಧ್ಯಕ್ಷ ಪಟ್ಟಿ

  1. ಮೈಸೂರು ನಗರ - ಎಲ್. ನಾಗೇಂದ್ರ
  2. ಚಾಮರಾಜನಗರ - ಸಿ.ಎಸ್. ನಿರಂಜನಕುಮಾರ್
  3. ದಕ್ಷಿಣಕನ್ನಡ - ಸತೀಶ್ ಕುಂಪಲ
  4. ಚಿಕ್ಕಮಗಳೂರು - ದೇವರಾಜ ಶೆಟ್ಟಿ
  5. ಶಿವಮೊಗ್ಗ - ಎನ್.ಕೆ. ಜಗದೀಶ್
  6. ಉತ್ತರಕನ್ನಡ - ನಾರಾಯಣ್ ಶ್ರೀನಿವಾಸ್ ಹೆಗಡೆ
  7. ಹುಬ್ಬಳ್ಳಿ-ಧಾರವಾಡ - ತಿಪ್ಪಣ್ಣ ಮಜ್ಜಗಿ
  8. ಧಾರವಾಡ ಗ್ರಾಮಾಂತರ - ನಿಂಗಪ್ಪ ಡಿ. ಸುತಗಟ್ಟಿ
  9. ಬೆಳಗಾವಿ ಗ್ರಾಮಾಂತರ -ಸುಭಾಷ್ ದುಂಡಪ್ಪ ಪಾಟೀಲ್
  10. ಬೆಳಗಾವಿ ನಗರ - ಗೀತಾ ಸುತಾ
  11. ಚಿಕ್ಕೋಡಿ - ಸತೀಶ್ ಅಪ್ಪಾಜಿಗೋಳ್
  12. ಬೀದರ್ - ಸೋಮನಾಥ್ ಪಾಟೀಲ್
  13. ಕಲಬುರಗಿ ನಗರ - ಚಂದ್ರಕಾಂತ್ ಬಿ. ಪಾಟೀಲ್
  14. ಕಲಬುರಗಿ ಗ್ರಾಮಾಂತರ- ಅಶೋಕ್ ಬಗಲಿ
  15. ಯಾದಗಿರಿ - ಬಸವರಾಜಪ್ಪಗೌಡ ವಿ.
  16. ಕೊಪ್ಪಳ - ದಡೇಸಗೂರು ಬಸವರಾಜ್
  17. ವಿಜಯನಗರ - ಸಂಜೀವ್ ರೆಡ್ಡಿ.
  18. ಚಿಕ್ಕಬಳ್ಳಾಪುರ - ಬಿ.ಸಂದೀಪ್
  19. ಕೋಲಾರ - ಓಂ ಶಕ್ತಿ ಛಲಪತಿ
  20. 20. ಬೆಂಗಳೂರು ಉತ್ತರ- ಎಸ್ ಹರೀಶ್
  21. 21. ಬಳ್ಳಾರಿ - ಅನಿಲ್ ಕುಮಾರ್ ಮೋಕಾ
  22. 22. ಬೆಂಗಳೂರು ಕೇಂದ್ರ - ಎ ಆರ್ ಸಪ್ತಗಿರಿ ಗೌಡ
  23. 23. ಬೆಂಗಳೂರು ದಕ್ಷಿಣ - ಸಿ.ಕೆ ರಾಮಮೂರ್ತಿ



ಈ ಸುದ್ದಿಯನ್ನೂ ಓದಿ | Dr.K.Sudhakar: ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ; ವಿಜಯೇಂದ್ರ ಅಹಂಕಾರಕ್ಕೆ ಧಿಕ್ಕಾರ ಎಂದ ಸಂಸದ ಸುಧಾಕರ್