ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bomb Threat: ರಾಜ್ಯಪಾಲರ ಕಚೇರಿಗೆ ಬಾಂಬ್​ ಬೆದರಿಕೆ; ಆರ್ ಡಿಎಕ್ಸ್ ಬ್ಲಾಸ್ಟ್​ ಮಾಡ್ತೇವೆಂದು ಇಮೇಲ್‌!

ರಾಜ್ಯಪಾಲರ ಕಚೇರಿಗೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ. ಆರ್ ಡಿಎಕ್ಸ್, ಐಇಡಿ ಬಾಂಬ್ ಇಟ್ಟಿದ್ದು ಮಧ್ಯಾಹ್ನವೇ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಬರೆದಿದ್ದ ಇಮೇಲ್ ಒಂದು ರಾಜ್ಯಪಾಲರ ಕಚೇರಿಗೆ ಬಂದಿದೆ ಎಂದು ತಿಳಿದು ಬಂದಿದೆ. ಇದೇ ತಿಂಗಳ 14 ರಂದು ಈ ಹುಸಿ ಬಾಂಬ್ ಬೆದರಿಕೆ ಇಮೇಲ್ ಬಂದಿದೆ.

ಸಂಗ್ರಹ ಚಿತ್ರ

ಬೆಂಗಳೂರು : ರಾಜ್ಯಪಾಲರ ಕಚೇರಿಗೆ ಬಾಂಬ್​ ಬೆದರಿಕೆ ಇಮೇಲ್ (Bomb threat) ಬಂದಿದೆ. ಆರ್ ಡಿಎಕ್ಸ್, ಐಇಡಿ ಬಾಂಬ್ ಇಟ್ಟಿದ್ದು ಮಧ್ಯಾಹ್ನವೇ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಬರೆದಿದ್ದ ಇಮೇಲ್ ಒಂದು ರಾಜ್ಯಪಾಲರ ಕಚೇರಿಗೆ ಬಂದಿದೆ ಎಂದು ತಿಳಿದು ಬಂದಿದೆ. ಇದೇ ತಿಂಗಳ 14 ರಂದು ಈ ಹುಸಿ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಆರ್ ಡಿಎಕ್ಸ್, ಐಇಡಿ ಬಾಂಬ್ ಇಟ್ಟಿದ್ದು ಮಧ್ಯಾಹ್ನ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಇಮೇಲ್​ನಲ್ಲಿ ಬರೆಯಲಾಗಿದೆ. ಐಇಡಿ ಬಾಂಬ್ ಇಟ್ಟು, ಇಬ್ಬರು ಟ್ರಿಗರ್ ಇಟ್ಟುಕೊಂಡಿದ್ದಾರೆ ಎಂದು ಬರೆದಿದ್ದು ಇಮೇಲ್ ನಿಂದ ಈ ಸಂದೇಶ ಕಳುಹಿಸಲಾಗಿದೆ.

ಬಳಿಕ ಕಚೇರಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ಮಾಡಿದ್ದು, ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೀತಿ ನಿರಾಕರಿಸಿದ್ದಕ್ಕೆ ಬಾಂಬ್‌ ಬೆದರಿಕೆ

ತನ್ನ ಪ್ರೇಮ ಪ್ರಸ್ತಾವನೆಯನ್ನು ನಿರಾಕರಿಸಿದ ಯುವತಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು, ಆಕೆಯ ಹೆಸರಿನಲ್ಲಿ ನಕಲಿ ಸೋಶಿಯಲ್ ಮೀಡಿಯಾ ಖಾತೆ ತೆರೆದು ಪುರಿ ಜಗನ್ನಾಥ ದೇವಾಲಯಕ್ಕೆ ಬಾಂಬ್ ಬೆದರಿಕೆ ಹಾಕಿದ್ದ 30 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸ್ಥಳೀಯ ನಿವಾಸಿ ಪ್ರತೀಕ್ ಮಿಶ್ರಾ ಎಂದು ಗುರುತಿಸಲಾಗಿದೆ. ಏನಿದು ಘಟನೆ? ಪ್ರತೀಕ್ ಮಿಶ್ರಾ ಇತ್ತೀಚೆಗೆ ಯುವತಿಯೊಬ್ಬಳಿಗೆ ಪ್ರೇಮ ಪ್ರಸ್ತಾವನೆ ಸಲ್ಲಿಸಿದ್ದ. ಆದರೆ ಆಕೆ ಅದನ್ನು ತಿರಸ್ಕರಿಸಿದ್ದಳು.

ಇದರಿಂದ ಆಕ್ರೋಶಗೊಂಡ ಪ್ರತೀಕ್, ಆಕೆಗೆ ತಕ್ಕ ಪಾಠ ಕಲಿಸಲು ಸಂಚು ರೂಪಿಸಿದ್ದ. ಜ. 11 ರಂದು ಆ ಯುವತಿಯ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿದ್ದ. ಅದರಲ್ಲಿ, "ಪುರಿ ಜಗನ್ನಾಥ ದೇವಾಲಯ ಮತ್ತು ನಗರದ ಗ್ರಾಂಡ್ ಸೆಂಟರ್ ಶಾಪಿಂಗ್ ಮಾಲ್ ಅನ್ನು ಬಾಂಬ್ ಇಟ್ಟು ಸ್ಪೋಟಿಸುವುದು, ಮಾತ್ರವಲ್ಲದೆ ಬಿಜೆಡಿ ಸಂಸದ ಸುಭಾಶಿಷ್ ಖುಂಟಿಯಾ (Subhasish Khuntia) ಅವರ ಮೇಲೆ ಗುಂಡಿನ ದಾಳಿ ನಡೆಸುವುದಾಗಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ.

Bomb Threat: ಬೆಂಗಳೂರಿನ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್‌ ಬೆದರಿಕೆ; ಸ್ಥಳದಲ್ಲಿ ಆತಂಕ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪುರಿ ಪೊಲೀಸರು ಮತ್ತು ಸೈಬರ್ ಕ್ರೈಂ ಪೊಲೀಸರ ತನಿಖೆ ಆರಂಭಿಸಿದರು. ಡಿಜಿಟಲ್ ಫೋರೆನ್ಸಿಕ್ ಮತ್ತು ಕಾಲ್ ರೆಕಾರ್ಡ್‌ಗಳ ಆಧಾರದ ಮೇಲೆ ತನಿಖೆ ನಡೆಸಿದಾಗ, ಈ ಕೃತ್ಯದ ಹಿಂದೆ ಪ್ರತೀಕ್ ಮಿಶ್ರಾ ಇರುವುದು ಬೆಳಕಿಗೆ ಬಂದಿದೆ. ಬುಧವಾರ ತಡರಾತ್ರಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.