Budget News: ಕರ್ನಾಟಕ ವಿರೋಧಿ ಬಜೆಟ್: ಶಾಸಕ ಯಶವಂತರಾಯಗೌಡ ಪಾಟೀಲ
ಕೇಂದ್ರಕ್ಕೆ ಕರ್ನಾಟಕ ತೆರಿಗೆ ಅಧಿಕ ಯೋಜನೆ ಮಾತ್ರ ಶೂನ್ಯ ಕೃಷ್ಣಾ ಮೇಲದಂಡೆ ಯೋಜನೆಗೆ 5300 ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದರೂ ಇಲ್ಲಿಯವರೆಗೂ ಒಂದು ರೂಪಾಯಿ ಬಂದಿಲ್ಲ ಒಟ್ಟಾರೆ ಕೇಂದ್ರ ಪ್ರಧಾನಿ ಮೋದಿ ಸರಕಾರದ ಬಜೇಟ್ ಕರ್ನಾಟಕಕ್ಕೆ ಚೊಂಬು ಕೊಡುವುದು ಮುಂದುವರೆಸಿದ್ದಾರೆ
ಇಂಡಿ: ಕೇಂದ್ರ ,ರಾಜ್ಯ ಸರಕಾರಗಳು ಸಮನ್ವಯತೆ ಕೊಂಡಿ ಅಂದರೆ ತಪ್ಪಾಗಲಾರದು. ಆದರೆ ಕೇಂದ್ರ ಬಿಜೆಪಿ ಸರಕಾರ ಒಡೆದಾಳುವ ನೀತಿ ಬಜೆಟ್ ನಲ್ಲಿಯೂ ಕೂಡಾ ಅನುಸರಿಸುತ್ತಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೇಟ್ ನಿರಾಶಾದಾಯಕ ಕರ್ನಾಟಕ ವಿರೋ ಧಿ ಬಜೆಟ್ ಆಗಿದೆ. ಕೇಂದ್ರಕ್ಕೆ ಕರ್ನಾಟಕ ತೆರಿಗೆ ಅಧಿಕ ಯೋಜನೆ ಮಾತ್ರ ಶೂನ್ಯ ಕೃಷ್ಣಾ ಮೇಲ ದಂಡೆ ಯೋಜನೆಗೆ 5300 ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದರೂ ಇಲ್ಲಿಯವರೆಗೂ ಒಂದು ರೂ ಪಾಯಿ ಬಂದಿಲ್ಲ ಒಟ್ಟಾರೆ ಕೇಂದ್ರ ಪ್ರಧಾನಿ ಮೋದಿ ಸರಕಾರದ ಬಜೇಟ್ ಕರ್ನಾಟಕಕ್ಕೆ ಚೊಂಬು ಕೊಡುವುದು ಮುಂದುವರೆಸಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಟೀಕಿಸಿದ್ದಾರೆ.
ಇದನ್ನೂ ಓದಿ: Union Budget 2025: ಬಡ, ಮಧ್ಯಮ ವರ್ಗದ ಪ್ರಗತಿಗೆ ಕೇಂದ್ರ ಬಜೆಟ್ ಪೂರಕ: ಪ್ರಲ್ಹಾದ್ ಜೋಶಿ
ನರೇಂದ್ರ ಮೋದಿ ನೈತೃತ್ವದ ಕೇಂದ್ರ ಸರಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೇಟ್ 2025-26ರ ಪೂರ್ಣ ಪ್ರಮಾಣದ ಬಜೆಟ್ ಶಿಕ್ಷಣ, ಆರೋಗ್ಯ ಸೇರಿದಂತೆ ಮಧ್ಯಮ ವರ್ಗ ಜನರಿಗೆ ಸಹಕಾರಿಯಾಗಿದೆ, ತೆರಿಗೆ ನೀತಿಯಲ್ಲಿ ಮಾಡಿರುವ ಕ್ರಾಂತಿಕಾರಿ ಬದಲಾವ ಣೆಗಳಿಂದ ಬಹುಸಂಖ್ಯಾತ ಜನರಿಗೆ ಅನುಕೂಲವಾಗಿದೆ. ಸರ್ವಜನ ಹಿತ ಕಾಯುವ ಶ್ರೇಷ್ಠ ಬಜೆಟ್ ಇದಾಗಿದೆ ಎಂದು ಬಿಜೆಪಿ ಮುಖಂಡ ಅನೀಲ ಜಮಾದಾರ ಹೇಳಿದರು.
ಅಭಿವೃದ್ದಿಪರ ಭಾರತ ಗುರಿಯನ್ನು ಇಟ್ಟುಕೊಂಡು ಮುಂದಿನ ಜನಾಂಗದ ಆರ್ಥಿಕ ಅಭಿವೃದ್ದಿಗೆ 140 ಕೋಟಿ ಜನರ ಭರವಸೆ ಈಡೇರಿಸಿದೆ. ಉದ್ಯೋಗ ಸೃಷ್ಠಿ, ಆರೋಗ್ಯ ಶಿಕ್ಷಣ ಅನೇಕ ಚಿಂತನೆ ಯುಳ್ಳ ಬಜೆಟ್ ಇದಾಗಿದೆ ಎಂದು ಬಿಜೆಪಿ ಮುಖಂಡ ಬಾಳು ಮುಳಜಿ ಹೇಳಿದರು.