CBSE Recruitment 2025: CBSEಯಲ್ಲಿ ಖಾಲಿ ಇದೆ 212 ಹುದ್ದೆ; ದ್ವಿತೀಯ ಪಿಯು ಪಾಸಾದವರು ಅರ್ಜಿ ಸಲ್ಲಿಸಿ
CBSE Recruitment 2025: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (CBSE Recruitment 2025). ಸೂಪರಿಟೆಂಡೆಂಟ್, ಜೂನಿಯರ್ ಅಸಿಸ್ಟಂಟ್ ಸೇರಿ 212 ಹುದ್ದೆಗಳಿವೆ. ದ್ವಿತೀಯ ಪಿಯು ಪಾಸಾದವರು ಅರ್ಜಿ ಸಲ್ಲಿಸಬಹುದು. ಉದ್ಯೋಗದ ಸ್ಥಳ: ಬೆಂಗಳೂರು ಸೇರಿ ದೇಶಾದ್ಯಂತ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ 2025ರ ಜ. 31.
Ramesh B
January 1, 2025
ಬೆಂಗಳೂರು: ಕೇಂದ್ರ ಸರ್ಕಾರದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (Central Board of Secondary Education) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (CBSE Recruitment 2025). ಸೂಪರಿಟೆಂಡೆಂಟ್, ಜೂನಿಯರ್ ಅಸಿಸ್ಟಂಟ್ ಸೇರಿ 212 ಹುದ್ದೆಗಳಿವೆ. ದ್ವಿತೀಯ ಪಿಯು ಪಾಸಾದವರು ಅರ್ಜಿ ಸಲ್ಲಿಸಬಹುದು. ಉದ್ಯೋಗದ ಸ್ಥಳ: ಬೆಂಗಳೂರು ಸೇರಿ ದೇಶಾದ್ಯಂತ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ 2025ರ ಜ. 31 (Job Guide).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಸೂಪರಿಟೆಂಡೆಂಟ್ ಪೇ ಲೆವೆಲ್-6 - 142 ಹುದ್ದೆ, ವಿದ್ಯಾರ್ಹತೆ: ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಪದವಿ. ಜತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವುದು ಅಗತ್ಯ. ವಿಂಡೋಸ್, ಎಂ.ಎಸ್.ಆಫೀಸ್, ಇಂಟರ್‌ನೆಟ್ ಬಳಕೆ ತಿಳಿದಿರಬೇಕು.ಜೂನಿಯರ್ ಅಸಿಸ್ಟಂಟ್ ಪೇ ಲೆವೆಲ್-2 - 70 ಹುದ್ದೆ, ವಿದ್ಯಾರ್ಹತೆ: ಯಾವುದೇ ಅಂಗೀಕೃತ ಶಿಕ್ಷಣ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ. ಜತೆಗೆ ಇಂಗ್ಲಿಷ್, ಹಿಂದಿಯಲ್ಲಿ ವೇಗವಾಗಿ ಟೈಪ್ ಮಾಡುವಂತಿರಬೇಕು ಎಂದು ಅಧಿಸೂಚನೆ ತಿಳಿಸಿದೆ.
ವಯೋಮಿತಿ
ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ
ಅರ್ಜಿ ಶುಲ್ಕವಾಗಿ ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್ ಅಭ್ಯರ್ಥಿಗಳು 800 ರೂ. ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಾಜಿ ಸೈನಿಕರು/ಮಹಿಳೆಯರು ಅರ್ಜಿ ಶುಲ್ಕ ಶುಲ್ಕ ಪಾವತಿಬೇಕಾಗಿಲ್ಲ. ಅರ್ಜಿ ಶುಲ್ಕ ಪಾವತಿ ವಿಧಾನ: ಆನ್‌ಲೈನ್.
ಆಯ್ಕೆ ವಿಧಾನ
ಪ್ರಿಲಿಮಿನರಿ ಪರೀಕ್ಷೆ ಮತ್ತು ಮೈನ್ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ ಬೆಂಗಳೂರು, ಅಜ್ಮೀರ್, ಅಲಹಾಬಾದ್, ಭುವನೇಶ್ವರ, ಭೋಪಾಲ್, ಚೆನ್ನೈ, ಚಂಡೀಗಢ, ಡೆಹ್ರಾಡೂನ್, ದಿಲ್ಲಿ, ಗುವಾಹಟಿ, ನೋಯ್ಡಾ, ಪಾಟ್ನಾ, ಪುಣೆ, ತಿರುವನಂತಪುರಂ, ವಿಜಯವಾಡ, ರಾಯ್‌ಬರೇಲಿ ಮುಂತಾದ ಕಡೆಗಳಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
CBSE Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (https://www.cbse.gov.in/cbsenew/recruitment.html)
ಹೆಸರು ನೋಂದಾಯಿಸಿ.
ಎಚ್ಚರಿಕೆಯಿಂದ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
ಅಗತ್ಯ ಡಾಕ್ಯುಮೆಂಟ್, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್ ಮಾಡಿ.
ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ಸಿಬಿಎಸ್‌ಇ ಅದಿಕೃತ ವೆಬ್‌ಸೈಟ್ ವಿಳಾಸ: cbse.nic.inಗೆ ಭೇಟಿ ನೀಡಿ.
ಈ ಸುದ್ದಿಯನ್ನೂ ಓದಿ: IPPB Recruitment 2025: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿದೆ ವಿವಿಧ ಹುದ್ದೆ; ಇಂದೇ ಅರ್ಜಿ ಸಲ್ಲಿಸಿ