ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಪೊಲೀಸ್‌ ಜೀಪ್‌ ಮೇಲೆ ಹತ್ತಿ ಹುಚ್ಚಾಟ ಮೆರೆದ ಯುವ ಜೋಡಿ; ವಿಡಿಯೋ ವೈರಲ್‌

ಅಪ್ರಾಪ್ತ ಬಾಲಕಿ ಮತ್ತು ಯುವಕ ಪೊಲೀಸ್ ಜೀಪ್ ಹತ್ತಿ ಗಲಾಟೆ ಮಾಡಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸೆಪ್ಟೆಂಬರ್ 19 ರಂದು ರಾಂಪುರ ಪ್ರದೇಶದಲ್ಲಿ ಓಡಿಹೋಗಲು ಯತ್ನಿಸುತ್ತಿದ್ದ ಜೋಡಿಯನ್ನು ಬಂಧಿಸಲು ಪೊಲೀಸರು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ.

ಪೊಲೀಸ್‌ ಜೀಪ್‌ ಮೇಲೆ ಹತ್ತಿ ಹುಚ್ಚಾಟ ಮೆರೆದ ಯುವ ಜೋಡಿ!

-

Vishakha Bhat Vishakha Bhat Sep 22, 2025 4:17 PM

ಜೈಪುರ: ಅಪ್ರಾಪ್ತ ಬಾಲಕಿ ಮತ್ತು ಯುವಕ ಪೊಲೀಸ್ ಜೀಪ್ ಹತ್ತಿ ಗಲಾಟೆ ಮಾಡಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Viral News) ಆಗಿದೆ. ಸೆಪ್ಟೆಂಬರ್ 19 ರಂದು ರಾಂಪುರ (Rajasthan) ಪ್ರದೇಶದಲ್ಲಿ ಓಡಿಹೋಗಲು ಯತ್ನಿಸುತ್ತಿದ್ದ ಜೋಡಿಯನ್ನು ಬಂಧಿಸಲು ಪೊಲೀಸರು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ. 22 ವರ್ಷದ ಯುವಕ ಕುಡಿದ ಅಮಲಿನಲ್ಲಿದ್ದ ಎಂದು ವರದಿಯಾಗಿದ್ದು, 17 ವರ್ಷದ ಬಾಲಕಿ ಪೊಲೀಸ್ ಜೀಪಿನ ಮೇಲೆ ಹತ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಹದಿಹರೆಯದ ಹುಡುಗಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು, ಇದರಿಂದಾಗಿ ಆಕೆಯ ಕುಟುಂಬವು ಕೋಟಾದ ಹೊರವಲಯದಲ್ಲಿರುವ ನಾಂಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

ಹತ್ತಿರದ ರಾಂಪುರ ಪೊಲೀಸ್ ಠಾಣೆಯ ಅಧಿಕಾರಿಗಳು, ಸುಳಿವು ಪಡೆದ ನಂತರ, ರಾಂಪುರದ ಹೊರವಲಯದಲ್ಲಿ ಈ ಜೋಡಿಯನ್ನು ಹುಡುಕಿವೆ. ಅಧಿಕಾರಿಗಳು ಈ ಜೋಡಿಯನ್ನು ಪತ್ತೆ ಮಾಡಿ ಪೊಲೀಸ್ ಜೀಪಿನಲ್ಲಿ ಕರೆದೊಯ್ಯಲು ಪ್ರಯತ್ನಿಸಿದಾಗ, ಇಬ್ಬರೂ ಸಹಕರಿಸಲು ನಿರಾಕರಿಸಿದರು. ಮೊದಲು ಹುಡುಗಿಯನ್ನು ವಾಹನದ ಮೇಲೆ ಹತ್ತು ಕೂತಿದ್ದಾಳೆ. ಆ ಹುಡುಗಿ ತನ್ನ ಪ್ರಿಯಕರನ ರಕ್ಷಣೆಗಾಗಿ ಜನರ ಬಳಿ ಕೂಗಿಕೊಂಡಿದ್ದಾಳೆ. ಯುವಕ ಸಂಪೂರ್ಣವಗಿ ಮದ್ಯದ ಅಮಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೊನೆಗೆ ಪೊಲೀಸರು ಅವರನ್ನು ಬಲಪ್ರಯೋಗ ಮಾಡಿ ರಾಂಪುರ ಕೊತ್ವಾಲಿ ಠಾಣೆಗೆ ಕರೆದೊಯ್ದರು. ಆ ವ್ಯಕ್ತಿಯ ವಿರುದ್ಧ ಸಾರ್ವಜನಿಕ ಅಶ್ಲೀಲತೆ, ಗೊಂದಲ ಸೃಷ್ಟಿಸುವುದು ಮತ್ತು ಅಪ್ರಾಪ್ತ ವಯಸ್ಕನೊಂದಿಗೆ ಓಡಿಹೋಗಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.



ಈ ಸುದ್ದಿಯನ್ನೂ ಓದಿ: Viral Video: ಸಿಂಗರ್‌ ಚಾಹತ್ ಫತೇಹ್ ಅಲಿ ಖಾನ್‌ ಮೇಲೆ ಮೊಟ್ಟೆ ಎಸೆತ; ವಿಡಿಯೋ ವೈರಲ್‌

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆಯು ಸ್ಥಳೀಯರನ್ನು ಗೊಂದಲಕ್ಕೀಡು ಮಾಡಿದೆ ಮತ್ತು ಈ ಪ್ರದೇಶದಲ್ಲಿ ಯುವಜನರ ಅಶಾಂತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಅನೇಕ ಇಂಟರ್ನೆಟ್ ಬಳಕೆದಾರರು ಇದನ್ನು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಅಜಾಗರೂಕ ವರ್ತನೆ ಎಂದು ಟೀಕಿಸಿದ್ದಾರೆ.