ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GST 2.0: ಜಿಎಸ್‌ಟಿ 2.0- ಮಂಡ್ಯದಲ್ಲಿ ಬಿಜೆಪಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ

GST 2.0: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರವು ಸರಳೀಕೃತ ಜಿ.ಎಸ್.ಟಿ. 2.0 ರ ವ್ಯವಸ್ಥೆಯನ್ನು ಜಾರಿ ಮಾಡಿರುವುದನ್ನು ಸ್ವಾಗತಿಸಿ, ಸೋಮವಾರ ಮಂಡ್ಯದ ಕಾಮನಗುಡಿ ಸರ್ಕಲ್, ಪೇಟೆ ಬೀದಿಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಜಿಎಸ್‌ಟಿ 2.0: ಮಂಡ್ಯದಲ್ಲಿ ಬಿಜೆಪಿಯಿಂದ ಸಂಭ್ರಮಾಚರಣೆ

-

Profile Siddalinga Swamy Sep 22, 2025 5:30 PM

ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ನೇತೃತ್ವದ ಎನ್‌ಡಿಎ ಸರ್ಕಾರವು ಸರಳೀಕೃತ ಜಿ.ಎಸ್.ಟಿ. 2.0 ರ (GST 2.0) ವ್ಯವಸ್ಥೆಯನ್ನು ಜಾರಿ ಮಾಡಿರುವುದನ್ನು ಸ್ವಾಗತಿಸಿ, ಸೋಮವಾರ ಮಂಡ್ಯದ ಕಾಮನಗುಡಿ ಸರ್ಕಲ್, ಪೇಟೆ ಬೀದಿಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಅವರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಜಿ.ಎಸ್.ಟಿ. ಸರಳೀಕೃತಗೊಳಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿದರು. ನಂತರ ನಗರದಲ್ಲಿನ ಮಳಿಗೆಗಳಿಗೆ ತೆರಳಿ ಸಿಹಿ ಹಂಚಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡ್ಯ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಇಂದ್ರೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಮ್, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಡಾ. ಸಿದ್ದರಾಮಯ್ಯ, ಸ್ವಾಮಿಗೌಡ, ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.‌

ಈ ಸುದ್ದಿಯನ್ನೂ ಓದಿ | Narendra Modi: ಈ ಬಾರಿ ನವರಾತ್ರಿ ಸಂಪೂರ್ಣ ಸ್ವದೇಶಿಮಯವಾಗಿರಲಿ; ದೇಶವಾಸಿಗಳಿಗೆ ಮೋದಿ ಕರೆ

ಇಂದಿನಿಂದ ಹೊಸ ಹೊಸ GST ಸ್ಲ್ಯಾಬ್‌ ಜಾರಿ

ಕೇಂದ್ರ ಸರ್ಕಾರ ದೇಶದ ಜನತೆಗೆ ಸಿಹಿ ಸುದ್ದಿ ನೀಡಿದ್ದು, ಜಿಎಸ್‌ಟಿ (GST 2.0) ದರವನ್ನು ಕಡಿಮೆಗೊಳಿಸಿದೆ. ಇಂದಿನಿಂದ ಈ ದರ ಯಾರಿಗೆ ಬರಲಿದೆ ಸರಕು ಮತ್ತು ಸೇವಾ ತೆರಿಗೆಯಲ್ಲಿನ ಪರಿಷ್ಕರಣೆಗಳು ಕೆಲವೊಂದು ವಸ್ತುಗಳನ್ನು ದುಬಾರಿಯಾಗಿಸಿದರೆ ಇನ್ನು ಕೆಲವು ವಸ್ತುಗಳನ್ನು ಅಗ್ಗಗೊಳಿಸಲಿದೆ. ಜಿಎಸ್ ಟಿ 2.0 (GST 2.0) ದಲ್ಲಿ ಪರಿಷ್ಕರಣೆಗಳಿಂದಾಗಿ (GST reforms) ಸರಕುಗಳ ಮೇಲಿನ ತೆರಿಗೆಯನ್ನು ಶೇ. 5, 18 ಮತ್ತು 40ಕ್ಕೆ ಪರಿಷ್ಕರಿಸಲಾಗುತ್ತದೆ. ಇದು ದೇಶದ ಆರ್ಥಿಕ ವಲಯದಲ್ಲಿ ಹಲವು ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ.

ಪ್ರಸ್ತುತ ಶೇ. 12ರಷ್ಟು ತೆರಿಗೆ ವಿಧಿಸಿರುವ ಅನೇಕ ಗೃಹೋಪಯೋಗಿ ಉತ್ಪನ್ನಗಳು ಶೇ. 5ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಸೋಪ್‌, ಶಾಂಪುಗಳು, ಬಿಸ್ಕತ್ತು, ತಿಂಡಿ, ಜ್ಯೂಸ್‌ಗಳು, ತುಪ್ಪ, ಡೈರಿ ಉತ್ಪನ್ನಗಳು, ಬೈಸಿಕಲ್‌ ಮತ್ತು ಸ್ಟೇಷನರಿ, ಉಡುಪು, ಪಾದರಕ್ಷೆಗಳು ಸೇರಿ ಹಲವು ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಲಿದೆ. ಗೃಹೋಪಯೋಗಿ ಉಪಕರಣಗಳಾದ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲಿನ ತೆರಿಗೆ ಶೇ. 28ರಿಂದ ಶೇ. 18ಕ್ಕೆ ಇಳಿಯಲಿದೆ. ಇದರ ಪರಿಣಾಮ ಎಲೆಕ್ಟ್ರಾನಿಕ್ ಉತ್ಪನ್ನಗಳು ಶೇ. 7- 8ರಷ್ಟು ಅಗ್ಗವಾಗಲಿದೆ. ಇದರಲ್ಲಿ ಎಸಿ, ರೆಫ್ರಿಜರೇಟರ್‌, ಡಿಶ್‌ವಾಶರ್‌, ಟಿವಿ, ಸಿಮೆಂಟ್ ಇತ್ಯಾದಿಗಳು ಸೇರಿವೆ. ಇವು ಭಾರತದಲ್ಲಿ ಬೆಳೆಯುತ್ತಿರುವ ಮಧ್ಯಮ ವರ್ಗಕ್ಕೆ ಬಹುದೊಡ್ಡ ಪ್ರಯೋಜನವನ್ನು ಒದಗಿಸಲಿದೆ.

ಆರೋಗ್ಯ ಹಾಗೂ ಜೀವ ವಿಮೆಯನ್ನು ಶೂನ್ಯ ಜಿಎಸ್‌ಟಿಗೆ ತರಲಾಗಿದೆ. 1,200 ಸಿಸಿಗಿಂತ ಕಡಿಮೆ ಎಂಜಿನ್ ಗಾತ್ರ ಹೊಂದಿರುವ ಸಣ್ಣ ಕಾರುಗಳು, ದ್ವಿಚಕ್ರ ವಾಹನಗಳ ತೆರಿಗೆ ಕೂಡ ಶೇ. 28ರಿಂದ ಶೇ. 18ಕ್ಕೆ ಇಳಿಯಲಿದೆ. ಕೆಲವು ಸರಕುಗಳು ಶೇ. 40ರಷ್ಟು ತೆರಿಗೆಯನ್ನು ಎದುರಿಸಲಿದೆ. ಇದರಲ್ಲಿ ತಂಬಾಕು ಉತ್ಪನ್ನಗಳು, ಮದ್ಯ, ಪಾನ್ ಮಸಾಲಾ, ಆನ್‌ಲೈನ್ ಬೆಟ್ಟಿಂಗ್, ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಸೇರಿವೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ಯಿಂದ ಹೊರಗೆ ಇರಿಸಲಾಗುವುದು. ಹೀಗಾಗಿ ಇಂಧನ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.

ಈ ಸುದ್ದಿಯನ್ನೂ ಓದಿ | IBPS Recruitment 2025: 13,217 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ IBPS; ಇಲ್ಲಿದೆ ಹೊಸ ಟೈಮ್‌ ಟೇಬಲ್‌