Singer Suhaana Syed: ಹಿಂದೂ ಹುಡುಗನ ಜೊತೆ ಸರಿಗಮಪ ಗಾಯಕಿ ಸುಹಾನಾ ಸೈಯದ್‌ಗೆ ಲವ್!
ಗಾಯನ ಮಾತ್ರವಲ್ಲದೇ, ಉತ್ತಮ ಯಕ್ಷಗಾನ ಕಲಾವಿದೆಯೂ ಆಗಿಯೂ ಖ್ಯಾತಿ ಪಡೆ ದಿರುವ ಸುಹಾನಾ ಇದೀಗ ತಮ್ಮ ಪ್ರೀತಿಯ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದಾರೆ. ಹಿಂದೊಮ್ಮೆ ಹಿಂದೂ ದೇವರ ಭಜನೆ ಹಾಡಿರುವ ಕಾರಣ ವಿವಾದಕ್ಕೀಡಾಗಿದ್ದ ಇವರು ಇದೀಗ ತಾನು ಪ್ರೀತಿ ಮಾಡುತ್ತಿರುವ ಹುಡುಗ ಹಿಂದೂ ಎಂದು ಸುಹಾನಾ ಪೋಸ್ಟ್ ಹಂಚಿಕೊಂಡಿದ್ದಾರೆ.

ಸುಹಾನಾ ಸೈಯದ್ -

ಬೆಂಗಳೂರು: ಸರಿಗಮಪ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿದ್ದ ಖ್ಯಾತ ಗಾಯಕಿ ಸುಹಾನಾ ಸಯ್ಯದ್ (Suhaana Syed) ಇದೀಗ ತಾನು ಮದುವೆಯಾಗುವ ಹುಡುಗನ ಬಗ್ಗೆ ಮಾಹಿತಿ ರಿವೀಲ್ ಮಾಡಿದ್ದಾರೆ. ಗಾಯನ ಮಾತ್ರವಲ್ಲದೇ, ಉತ್ತಮ ಯಕ್ಷಗಾನ ಕಲಾವಿದೆ ಯೂ ಆಗಿಯೂ ಖ್ಯಾತಿ ಪಡೆದಿರುವ ಸುಹಾನಾ ಇದೀಗ ತಮ್ಮ ಪ್ರೀತಿಯ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ. ಹಿಂದೊಮ್ಮೆ ಹಿಂದೂ ದೇವರ ಭಜನೆ ಹಾಡಿರುವ ಕಾರಣ ವಿವಾದಕ್ಕೀಡಾಗಿದ್ದ ಇವರು ಇದೀಗ ತಾನು ಪ್ರೀತಿ ಮಾಡುತ್ತಿರುವ ಹುಡುಗ ಹಿಂದೂ ಎಂದು ಸುಹಾನಾ ಪೋಸ್ಟ್ ಹಂಚಿ ಕೊಂಡಿದ್ದಾರೆ. ಈ ಬಗ್ಗೆ ಫೋಟೊ ಸಮೇತ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳಿಗೂ ಶಾಕ್ ಆಗಿದ್ದು ನಿಮ್ಮ ಪ್ರೀತಿಗೆ ಒಳಿತಾಗಲಿ ಎಂದು ಅವರ ಫ್ಯಾನ್ಸ್ ಲೈಕ್ ಕಾಮೆಂಟ್ ನೀಡಿ ಶುಭ ಹಾರೈಸುತ್ತಿದ್ದಾರೆ.
ಶಿವಮೊಗ್ಗ ಮೂಲದ ಸುಹಾನಾ ಸೈಯದ್ ತಮ್ಮ ಗಾಯನದ ಮೂಲಕವೇ ಜನರಿಗೆ ಹತ್ತಿರವಾಗಿದ್ದರು. ಸರಿಗಮಪ ಕನ್ನಡ ಸೀಸನ್ 13ರ ಮೆಗಾ ಆಡಿಷನ್ ಸಂದರ್ಭ ಅವರು 'ಶ್ರೀಕಾರನೇ' ಹಾಡನ್ನು ಹಾಡಿ ಮೋಡಿ ಮಾಡಿದ್ದರು. ಆದರೆ ಸುಹಾನಾ ಹಾಡಿಗೆ ಕೆಲ ಸಂಘಟನೆಗಳ ವಿರೋಧ ಉಂಟಾಗಿತ್ತು. ಇದೀಗ ಹಿಂದೂ ಯುವಕನನ್ನು ಪ್ರೀತಿಸುವುದಾಗಿ ಈ ಬಗ್ಗೆ ಸುಹಾನಾ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಬೇಕಾಗಿಲ್ಲ...ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ ಆಗಿದೆ. ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿಯಾಗಿದ್ದೇವೆ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು.. ಪ್ರತಿ ಸವಾಲು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ.. ಇಂದು, ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ, ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಸುಹಾನಾ ಸೈಯದ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸುಹಾನಾ ಪ್ರೀತಿಸುತ್ತಿರುವ ಹುಡುಗ ನಿತಿನ್ ಶಿವಾಂಶ್ ರಂಗಭೂಮಿ ಕಲಾವಿದರಾಗಿದ್ದು ಶಾಲಾ ದಿನಗಳಲ್ಲೇ ನಿತಿನ್ ಶಿವಾಂಶ್ ಪರಿಚಯ ಇತ್ತು ಎಂದು ಸುಹಾನಾ ಹೇಳಿಕೊಂಡಿದ್ದಾರೆ. 16 ವರ್ಷಗಳ ಸ್ನೇಹ ಇದೀಗ ಪ್ರೀತಿಯಾಗಿ ಮೂಡಿದೆ ಎಂದು ಹೇಳಿಕೊಂಡಿದ್ದಾರೆ
ಇದನ್ನೂ ಓದಿ:Vrusshabha Movie: ರಾಜನಾಗಿ ಖಡಕ್ ಎಂಟ್ರಿ ಕೊಟ್ಟ ಮೋಹನ್ ಲಾಲ್: ವೃಷಭ ಚಿತ್ರದ ಟೀಸರ್ ರಿಲೀಸ್
ಹಲವು ಸೆಲೆಬ್ರಿಟಿಗಳು ಕೂಡ ಇವರಿಗೆ ಶುಭ ಹಾರೈಸಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿ ಮನಗೆದ್ದ ಸುಹಾನಾ ಸ್ಟೇಟ್‍ಮೆಂಟ್ 8\11’ ಚಿತ್ರದಲ್ಲಿ ಹಾಡುವ ಅವಕಾಶ ಪಡೆದುಕೊಂಡಿದ್ದರು. ಇದೊಂದು ದೇಶಭಕ್ತಿ ಹಾಡಗಿದ್ದು, ‘ನರನಾಡಿ ನುಡಿಯುತ್ತೆ ಹಿಂದೂಸ್ತಾನ್’ ಎಂಬ ಹಾಡಿಗೆ ತಮ್ಮ ಧ್ವನಿಯನ್ನು ಕೊಟ್ಟಿದ್ದರು.