ಚೆನ್ನೈ: ಚೆನ್ನೈನಲ್ಲಿ ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ (Chennai Horror) ಪೊಲೀಸರು ಮೂವರು ಅಪ್ರಾಪ್ತ ಬಾಲಕರು ಸೇರಿ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ. 12 ವರ್ಷದ ಬಾಲಕಿ ಕಾಣೆಯಾಗಿದ್ದಾಳೆಂದು ಪೋಷಕರು ನೀಡಿದ ದೂರಿನ ಮೇರೆಗೆ ಪೊಲೀಸರು ಆಕೆಯನ್ನು ಪೆರಂಬೂರಿನ(Perambur) ಸರ್ಕಾರಿ ಲೈಬ್ರರಿ ಬಳಿ ಟ್ರೇಸ್ ಮಾಡಿದ್ದರು. ಈ ವೇಳೆ ಲೈಬ್ರರಿಯ ಟೆರೆಸ್ ಮೇಲೆ ಮೂವರು ಬಾಲಕಿಯರ ಮೇಲೆ ಮೂವರು ದೌರ್ಜನ್ಯ (Physical Abuse) ಎಸಗಿರುವುದು ಬೆಳಕಿಗೆ ಬಂದಿದೆ. ಉಳಿದ ಮೂವರು ಕಾವಲು ಕಾಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಆರು ಮಂದಿ ಆರೋಪಿಗಳು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ದೂರಿನ ಆಧಾರದ ಮೇಲೆ 12 ವರ್ಷದ ಬಾಲಕಿಯನ್ನು ಪತ್ತೆ ಹಚ್ಚಲು ಪೊಲೀಸ್ ತಂಡವು ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಬಾಲಕಿ ಗ್ರಂಥಾಲಯದ ತಾರಸಿವೊಂದರಲ್ಲಿ ಇರುವುದು ಪೊಲೀಸರಿಗೆ ಗೊತ್ತಾಗಿದೆ. ಸ್ಥಳಕ್ಕೆ ಭೇಟಿ ನೀಡಿದಾಗ ಬಾಲಕಿಯ ಮೇಲೆ ಮೂವರು ದುರುಳರು ಅತ್ಯಾಚಾರ ಎಸಗಿರುವುದು ತಿಳಿದು ಬಂದಿದೆ. ಗ್ರಂಥಾಲಯದ ತಾರಸಿಗೆ ಏಕಾಏಕಿ ನುಗ್ಗಿದ ಪೊಲೀಸ್ ತಂಡಕ್ಕೆ ಖಾಲಿ ಮದ್ಯದ ಬಾಟಲಿಗಳು ಮತ್ತು ಬೆಡ್ ಶೀಟ್‌ಗಳು ಪತ್ತೆಯಾಗಿವೆ.
ಈ ಸುದ್ದಿಯನ್ನೂ ಓದಿ:Murder Case: ಬೆಂಗಳೂರಲ್ಲಿ ಹೇಯ ಕೃತ್ಯ; ಬಾಂಗ್ಲಾ ಮೂಲದ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಹತ್ಯೆ
ಪೊಲೀಸರು ಮೂವರು ಬಾಲಕಿಯರನ್ನು ರಕ್ಷಿಸಿ ಅವರ ಕುಟುಂಬದವರಿಗೆ ಒಪ್ಪಿಸಿದ್ದಾರೆ. ಆರೋಪಿಗಳು ಬಾಲಕಿಯರಿಗೆ ಮದ್ಯ ಕುಡಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಎಲ್ಲ ಶಂಕಿತರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾರೆಯೇ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತರಲ್ಲಿ ಮೂವರು ಅಗರಮ್‌ನ ಅಭಿಷೇಕ್ ಆಂಟೋನಿ(19) ಕೊಡುಂಗಯ್ಯೂರಿನ ಮುತಮಿಜ್ ನಗರದ ಕಲೀಮುಲ್ಲಾ ಅಲಿಯಾಸ್ ಅಲಿ(21) ಮತ್ತು ಪೆರವಲ್ಲೂರಿನ ಸೈಯದ್ ಮೊಹಮ್ಮದ್ ಜಾಫರ್(22) ಇನ್ನುಳಿದ ಮೂವರು ಅಪ್ರಾಪ್ತರಾಗಿರುವ ಕಾರಣ ಅವರ ಹೆಸರನ್ನು ಬಹಿರಂಗಪಡಿಸಿಲ್ಲ.
ಪೊಲೀಸ್ ದಾಖಲೆಗಳ ಪ್ರಕಾರ, ಐಟಿಐ ಪ್ರಥಮ ವರ್ಷದ ವಿದ್ಯಾರ್ಥಿ ಅಭಿಷೇಕ್ ಈ ಹಿಂದೆ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದು, ಕಲೀಮುಲ್ಲಾ, ವಿರುದ್ಧ 11 ಪ್ರಕರಣಗಳಿವೆ. ಗ್ಯಾಂಗ್‌ನ ಭಾಗವಾಗಿದ್ದ 17 ವರ್ಷದ ಬಾಲಕ ಆರು ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಎನ್ನಲಾಗಿದೆ.