ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chinthamani News: ಸಿಂಗಾಟ ಕದರೇನಹಳ್ಳಿ ದಲಿತ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಿರುಕುಳ: ಖಂಡಿಸಿ ಚಿಂತಾಮಣಿ ಡಿಎಸ್ಎಸ್ ನಿಂದ ಪ್ರತಿಭಟನೆ

ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿ ಸಿಂಗಾಟ ಕದರೇನ ಹಳ್ಳಿಯ ಸರ್ವೇ ನಂಬರ್ 67ರ ಪೈಕಿ ಸುಮಾರು ದಲಿತ ರೈತರು ಕುಟುಂಬಗಳು 1972-73ನೇ ಸಾಲಿನಲ್ಲಿ ಸರ್ಕಾರದಿಂದ ಸಾಗ್ಬಳ್ಳಿ ಚೀಟಿ ಪಹಣಿ ಮುಟೇಶನ್ ಮತ್ತು ಭೂ ದಾಖಲೆಗಳು ಪಡೆದು ಆಂದಿನಿಂದ ಇಲ್ಲಿಯ ತನಕ ಅನುಭವದಲ್ಲಿರುವ ದಲಿತರ ಭೂಮಿಯನ್ನು ಕಬ್ಜಾ ಮಾಡಲು ಒಕ್ಕಲೆಬ್ಬಿಸಲು ಮುಂದಾಗಿರು ವುದು ದಲಿತ ವಿರೋಧಿ ಧೋರಣೆಯನ್ನು ಜಿಲ್ಲಾಡಳಿತವನ್ನು ಅನುಸರಿಸುತ್ತಿದೆ

ಚಿಂತಾಮಣಿ: ಸಿಂಗಾಟ ಕದರೆನಲ್ಲಿ ದಲಿತರ ರೈತರ ಭೂಮಿಯನ್ನು ಅರಣ್ಯ ಇಲಾಖೆ ಮೂಲಕ ಖಬ್ಜ ಮಾಡವ ಹುನ್ನಾರದೊಂದಿಗೆ ದಲಿತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿರುವ ಸರ್ಕಾರವು ಎಂದು ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸಂಚಾಲಕ ಚಿಂತಾಮಣಿ ಗಡ್ಡಂ ವೆಂಕಟೇಶ್ ಗಂಭೀರವಾಗಿ ಆರೋಪಿಸಿದ್ದಾರೆ.

ಅವರಿಂದು ದಲಿತ ಸಂಘರ್ಷ ಸಮಿತಿ ಚಿಂತಾಮಣಿ ತಾಲೂಕು ಶಾಖೆ ವತಿಯಿಂದ ಚಿಂತಾಮಣಿ ವಲಿಯಾರನ್ನಾ ಅಧಿಕಾರಿಗಳ ಕಚೇರಿಯ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣೀಯ ಅಧ್ಯಕ್ಷತೆ ವಹಿಸಿ ಮಾತನಾಡಿದರು .

ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿ ಸಿಂಗಾಟ ಕದರೇನ ಹಳ್ಳಿಯ ಸರ್ವೇ ನಂಬರ್ 67ರ ಪೈಕಿ ಸುಮಾರು ದಲಿತ ರೈತರು ಕುಟುಂಬಗಳು 1972-73 ನೇ ಸಾಲಿನಲ್ಲಿ ಸರ್ಕಾರದಿಂದ ಸಾಗ್ಬಳ್ಳಿ ಚೀಟಿ ಪಹಣಿ ಮುಟೇಶನ್ ಮತ್ತು ಭೂ ದಾಖಲೆಗಳು ಪಡೆದು ಆಂದಿನಿಂದ ಇಲ್ಲಿಯ ತನಕ ಅನುಭವದಲ್ಲಿರುವ ದಲಿತರ ಭೂಮಿಯನ್ನು ಕಬ್ಜಾ ಮಾಡಲು ಒಕ್ಕಲೆಬ್ಬಿಸಲು ಮುಂದಾಗಿರು ವುದು ದಲಿತ ವಿರೋಧಿ ಧೋರಣೆಯನ್ನು ಜಿಲ್ಲಾಡಳಿತವನ್ನು ಅನುಸರಿಸುತ್ತಿದೆ ಎಂದು ಕೆಂಡಾ ಮಂಡಲರಾದರು.

ಇದನ್ನೂ ಓದಿ: Chikkaballapur News: ಜಿಲ್ಲಾಧಿಕಾರಿ ನಿವಾಸದ ಎದುರು ಕಾಂಗ್ರೆಸ್ ಕಾರ್ಯಕರ್ತರ ದಿಡೀರ್ ಪ್ರತಿಭಟನೆ; ತಪ್ಪಿತಸ್ಥರ ಬಂಧನಕ್ಕೆ ಆಗ್ರಹ

ಕೂಡಲೇ ಸರ್ಕಾರವು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಗಮನಹರಿಸಿ, ದಲಿತರ ಭೂಮಿ ಯನ್ನು ಬಿಟ್ಟು ದಲಿತರ ಬದುಕಿಗೆ ಅನುವು ಮಾಡಿಕೊಳ್ಳಬೇಕು ಇಲ್ಲವಾದರೆ ಹಂತ ಹಂತವಾಗಿ ರಾಜ್ಯದ್ಯಂತ ಪ್ರತಿಭಟನೆಯನ್ನು ಉಗ್ರ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿ ದರು.

ಜಿಲ್ಲಾ ಸಂಘಟನಾ ಸಂಚಾಲಕ ಶ್ರೀರಂಗಪ್ಪ ಮಾತನಾಡಿ, ಒಂದೇ ದಿನ ಜಿಲ್ಲೆಯ ಎಲ್ಲಾ ತಾಲೂಕು ಗಳ ವಲಯ ಅರಣ್ಯ ಅಧಿಕಾರಿಗಳ ಕಚೇರಿಗಳ ಮುಂದೆ ಅಯಾ ತಾಲೂಕು ಮಟ್ಟದ ಸಮಿತಿಗಳ ಪದಾಧಿಕಾರಿಗಳಿಂದ ಏಕಕಾಲದಲ್ಲಿ ಹಮ್ಮಿಕೊಂಡಿದ್ದೇವೆ ಎಂದರು ವಲಯ ಅರಣ್ಯ ಅಧಿಕಾರಿ ವೀರರಾಜು ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಚಿಂತಾಮಣಿ ಸಮಿತಿಯ ಸಂಚಾಲಕ ಎಸ್ ಸಿ ನಾರಾಯಣಸ್ವಾಮಿ, ಸಂಘಟನಾ ಸಂಚಾಲಕ ನಾರಾಯಣ ನಾಯಕ್, ಅಭಿಷೇಕ್ ಸಿ ಅಶ್ವತ್ ಸಂಘರ್ಷ, ಸಾಂಸ್ಕೃತಿಕ ಸಂಚಾಲಕ ಸ್ವಾರಪಲ್ಲಿ ಚಂದ್ರಶೇಖರ್, ಮಹಿಳಾ ಸಂಚಾಲಕಿ ರತ್ನಮ್ಮ ಗೊಲ್ಲಳ್ಳಿ ವಿ ನಾರಾಯಣಸ್ವಾಮಿ, ಶಿವಕುಮಾರ್ ಪವನ್ ಎನ್.ಶ್ರೀನಿವಾಸ್ ರಾಜು ಮುಂತಾದವರು ಉಪಸ್ಥಿತರಿದ್ದರು.