ನಗರದ ಸರಕಾರಿ ಪ.ಪೂ. ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ
ಶಿಕ್ಷಣದಲ್ಲಿ ಸಂಸ್ಕಾರ ಮತ್ತು ಮೌಲ್ಯಗಳು ಬಹು ಮುಖ್ಯ ಅಂಶಗಳು ಇದನ್ನು ವಿದ್ಯಾರ್ಥಿಗಳು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಯನ್ನು ಮಾಡಿ ಎಂದು ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು. ಅವರು ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ 2024-25 ನೇ ಸಾಲಿನ ಶೈಕ್ಷಣಿಕ ಸಾಂಸ್ಕೃತಿಕ ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಚಟುವಟಿಕೆಗಳ ಸಮಾ ರೋಪ ಸಮಾ ರಂಭ ಉದ್ಘಾಟಿಸಿ ಮಾತನಾಡಿದರು
ಶಿರಾ: ಶಿಕ್ಷಣವು ಮಾನವನ ವ್ಯಕ್ತಿತ್ವ ವಿಕಸನಕ್ಕೆ ಮತ್ತು ವಿವೇಕ ವಿವೇಚನೆಯನ್ನು ಪುನಶ್ಚೇತನ ಪಡಿಸುವ ಒಂದು ರೂವಾರಿ. ಶಿಕ್ಷಣವೇ ಮನುಷ್ಯನನ್ನು ವೈಜ್ಞಾನಿಕವಾಗಿ ಚಿಂತಿಸಲು ತನ್ನ ಬದು ಕಿನ ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಶಿಕ್ಷಣದಲ್ಲಿ ಸಂಸ್ಕಾರ ಮತ್ತು ಮೌಲ್ಯಗಳು ಬಹು ಮುಖ್ಯ ಅಂಶಗಳು ಇದನ್ನು ವಿದ್ಯಾರ್ಥಿಗಳು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಯನ್ನು ಮಾಡಿ ಎಂದು ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು. ಅವರು ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ 2024-25 ನೇ ಸಾಲಿನ ಶೈಕ್ಷಣಿಕ ಸಾಂಸ್ಕೃತಿಕ ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಚಟುವಟಿಕೆಗಳ ಸಮಾ ರೋಪ ಸಮಾ ರಂಭ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: Tumkur News: ಶಾಸ್ತ್ರೀಯ ಸಂಗೀತ ಕಲಿಕೆಯಿಂದ ವಿವಿಧ ರಂಗದಲ್ಲಿ ಸಾಧನೆ ಸುಲಭ: ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ
ಪದವಿಪೂರ್ವ ಶಿಕ್ಷಣ ವಿದ್ಯಾರ್ಥಿಗಳಿಗೆ ಮಹತ್ವದ ತಿರುವಾಗಿದ್ದು, ಈ ಸಮಯದಲ್ಲಿ ನಿಮ್ಮ ಸಾಮ ರ್ಥ್ಯ ಸಾಧನೆಗಳು ಮುಂದಿನ ಭವಿಷ್ಯ ನಿರ್ಮಿಸುವ ಬುನಾದಿಗಳಾಗಿದೆ. ಸರಕಾರಿ ಪ.ಪೂ. ಕಾಲೇಜಿಗೆ ಅವಶ್ಯಕತೆ ಇರುವ ಎಲ್ಲ ಸೌಲಭ್ಯ ಗಳನ್ನು ನಾನು ಒದಗಿಸುತ್ತೇನೆ. ನೀವು ಅದರ ಸದುಪಯೋಗ ವನ್ನು ಕೊಡಿಸಿಕೊಂಡು ನಿಮ್ಮ ಬದು ಕನ್ನು ಕಟ್ಟಿಕೊಳ್ಳಿ ಆಗ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದ ಎಂದ ಅವರು ಕಾಲೇಜಿನ ಮೂಲಸೌಲಭ್ಯಗಳಿಗೆ ಶಾಸಕರ ನಿಧಿಯಿಂದ 10 ಲಕ್ಷ ರೂಪಾಯಿ ಗಳನ್ನು ಕೊಡುವುದಾಗಿ ಭರವಸೆ ನೀಡಿದರು. ಈಗಾಗಲೇ ಹೆಚ್ಚುವರಿ ೫ ಕೋಟಿಗಳನ್ನು ಸರಕಾರ ದಿಂದ ನಿರ್ಮಾಣ ಮಾಡ ಲಾಗುತ್ತದೆ. ಜೊತೆಗೆ ಸಿ.ಎಸ್.ಆರ್. ನಿಧಿಯಿಂದ ಕಾಂತರಾಜ್ ಅವರ ಸಹಯೋಗದೊಂದಿಗೆ ಸ್ಮಾರ್ಟ್ ಕ್ಲಾಸ್ ಆರಂಭವಾಗಿದೆ. ಹಾಗೂ ಕಾಲೇಜಿಗೆ 40 ಕಂಪ್ಯೂಟರ್ ಗಳನ್ನು ನೀಡಿದ್ದಾರೆ. ಅವರಿಗೆ ಅಭಿನಂದನೆ ಗಳನ್ನು ತಿಳಿಸಿದ್ದೇ£ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಾ. ಪಿಹೆಚ್ ಮಹೇಂದ್ರಪ್ಪ ಅವರು ಮಾತ ನಾಡಿ, ವಿದ್ಯಾರ್ಥಿಗಳು ರಚನಾತ್ಮಕತೆ ಮತ್ತು ಶಿಸ್ತು ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು. ಕಾರ್ಯ ಸಾಧ್ಯ ತೆಯ ಆಲೋಚನೆಗಳು ನಿಮ್ಮಲ್ಲಿರಬೇಕು. ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಏನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.
ಸಮಾರಂಭದಲ್ಲಿ ನಿವೃತ್ತ ಉಪ ನಿರ್ದೇಶಕರು ಕಾಂತರಾಜು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ನಿವೃತ್ತ ಉಪ ನಿರ್ದೇಶಕರಾದ ಅಶೋಕ್ ಕುಮಾರ್, ನಿವೃತ್ತ ಪ್ರಾಂಶುಪಾಲರು ಹಾಗೂ ಕಸಾಪ ಅಧ್ಯಕ್ಷರಾದ ಬಿ.ಪಿ.ಪಾಂಡುರಂಗಪ್ಪ, ಹಾವನೂರು ಕಾಲೇಜಿನ ಪ್ರಾಂಶುಪಾಲರಾದ ಚಂದ್ರ ಶೇಖರ್ ರೆಡ್ಡಿ, ಬಾಲಕಿಯರ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಚಂದ್ರಯ್ಯ, ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಧನಶಂಕರ್, ನಗರಸಭೆಯ ಸದಸ್ಯರಾದ ಎಸ್ ಎಲ್ ರಂಗನಾಥ್, ಹಳೇ ವಿದ್ಯಾರ್ಥಿ ಉದ್ಯಮಿ ಶಿವಕುಮಾರ್, ತುಮಕೂರು ಆಯುಷ್ ಇಲಾಖೆಯ ಡಾ. ನವೀನ್ ಕುಮಾರ್, ವೇದಮೂರ್ತಿ, ಕುಮಾರ್, ಶ್ರೀನಿವಾಸ್ ಸೇರಿದಂತೆ ಹಲವರು ಹಾಜರಿದ್ದರು.